Gruha Lakshmi Scheme: ಗೃಹಲಕ್ಷ್ಮೀ ಹೆಸರಲ್ಲಿ ನಡೆಯುತ್ತಿದೆ ವಂಚನೆ, ಮಹಿಳೆಯರೇ ಮೋಸ ಹೋಗದಿರಿ! ಇಲ್ಲಿದೆ ನಿಮಗೊಂದು ಮಹತ್ವದ ವಿಷಯ

Latest news Important Information About Gruha Lakshmi Scheme

Gruha Lakshmi Scheme: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಕರ್ನಾಟಕದಲ್ಲಿ ಸುಮಾರು 1.70 ಕೋಟಿ ಫಲಾನುಭವಿಗಳನ್ನು ಈ ಯೋಜನೆಯಡಿ ಅರ್ಹರು ಎಂದು ಪರಿಗಣಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ(Gruha Lakshmi) ನೋಂದಣಿ ಪ್ರಕ್ರಿಯೆ ನೆಪದಲ್ಲಿ ಕರ್ನಾಟಕದ ನಾನಾ ಕಡೆಗಳಲ್ಲಿ ವಂಚನೆ ಪ್ರಕರಣ ಹೆಚ್ಚು ನಡೆಯುತ್ತಿದೆ. ಅದರಲ್ಲಿಯೂ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಚಿನ್ನಾಭರಣಗಳ ಕಳ್ಳತನ , ನಗ ನಗದು ಅಪಹರಣ ಪ್ರಕರಣ ಲೂಟಿ ಪ್ರಕರಣ ಹೆಚ್ಚಾಗುತ್ತಿದೆ.

ಚನ್ನಪಟ್ಟಣದಲ್ಲಿ ವೃದ್ದೆಯೊಬ್ಬರ ಚಿನ್ನದ ಸರ ಎಗರಿಸಿದ ಘಟನೆ ನಡೆದಿದೆ.ಚನ್ನಪಟ್ಟಣದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಸಿ ಕೊಡುವ ಭರವಸೆ ನೀಡಿ ವೃದ್ದೆಯನ್ನು ನಂಬಿಸಿ ಅಪರಿಚಿತನೊಬ್ಬ ವೃದ್ಧೆಯ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ತಾಳಿ ಸರವನ್ನು ಕದ್ದು ಪರಾರಿಯಾದ ಘಟನೆ ವರದಿಯಾಗಿದೆ. ಇದೆ ರೀತಿಯ ಘಟನೆ ಮಂಡ್ಯದಲ್ಲಿ ಕೂಡ ವರದಿಯಾಗಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ (Gruha Lakshmi Yojana Registration)ಒಂದು ವಾರದಲ್ಲಿಯೇ ನಿರೀಕ್ಷೆ ಮೀರಿ ಪ್ರತಿಕ್ರಿಯೆ ದೊರೆತ ನಡುವೆಯೇ ವಂಚನೆಯ ಭಿನ್ನ ಭಿನ್ನ ಹಗರಣಗಳು ವರದಿಯಾಗಿವೆ. ಅದರಲ್ಲಿ ಮಹಿಳೆಯರ ಚಿನ್ನಾಭರಣ ಎಗರಿಸಿರುವುದು ಒಂದು ಕಡೆಯಾದರೆ, ನಕಲಿ ಪ್ರಮಾಣ ಪತ್ರ(Duplicate Certificate)ನೀಡುತ್ತಿರುವ ಪ್ರಕರಣ ಮತ್ತೊಂದೆಡೆ.ಮೈಸೂರಿನಲ್ಲಿ ನಕಲಿ ಪ್ರಮಾಣ ಪತ್ರ ನೀಡುವ ಸಂದರ್ಭ ನೋಂದಣಿಗೆ ಹಣ ಪಡೆದು ಕೆಲವು ಸೈಬರ್‌ ಕೇಂದ್ರದ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.ಅಲ್ಲಲ್ಲಿ ಇಂತಹ ಪ್ರಕರಣ ವರದಿಯಾಗುತ್ತಲೇ ಇವೆ.

ಬಹಳಷ್ಟು ಕಡೆ ನೋಂದಣಿಗೆ ಹಣ ಪಡೆದಿರುವ ಪ್ರಕರಣ ವರದಿಯಾಗುತ್ತಿದೆ. ಹೀಗಾಗಿ, ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಪರಿಚಿತರು ಈ ರೀತಿ ನೋಂದಣಿ ಹೆಸರಿನಲ್ಲಿ ಮೋಸ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ,ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಇಲ್ಲವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

ಗ್ರಾಮ ಒನ್ , ಬೆಂಗಳೂರು ಒನ್ ಮೊದಲಾದ ನೋಂದಣಿ ಕೇಂದ್ರಗಳಲ್ಲಿ ಹಣ ಪಡೆದರೆ ಮೊಕದ್ದಮೆ ದಾಖಲು ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಚ್ಚರಿಕೆ ನೀಡಿದ್ದಾರೆ. ಏತನ್ಮಧ್ಯೆ , ಇದೇ ರೀತಿ ಖಾಸಗಿ ಸೈಬರ್ ಸೆಂಟರ್, ಜೆರಾಕ್ಸ್ ಕೇಂದ್ರಗಳಲ್ಲೂ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಿನ ಕಡೆಗಳಲ್ಲಿ ವರದಿಯಾಗುತ್ತಿದೆ.

ರಾಯಚೂರಿನ ಮಾನ್ವಿಯಲ್ಲಿ ಮೂರು ಸೈಬರ್‌ ಕೇಂದ್ರದ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೂ ಆನ್‌ಲೈನ್‌ ಕೇಂದ್ರದ ಯೂಸರ್‌ ಐಡಿ ರದ್ದುಪಡಿಸಲಾಗಿದೆ. ಬೆಳಗಾವಿ ತಾಲ್ಲೂಕಿನ ಮುತಗಾದ ಗ್ರಾಮ್‌ ಒನ್‌ ಕೇಂದ್ರದ ಯೂಸರ್‌ ಐಡಿಯನ್ನು ಅಕ್ರಮವಾಗಿ ಬಳಸಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿ ಮಾಡುತ್ತಿದ್ದ ಪ್ರಕರಣ ವರದಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರರು ಗುರುವಾರ ಜಪ್ತಿ ಮಾಡಿದ್ದಾರೆ.ಮೈಸೂರಲ್ಲಿ ನಕಲಿ ಗೃಹಲಕ್ಷಿ ಪ್ರಮಾಣಪತ್ರ ವಶ ಪಡಿಸಿಕೊಂಡಿದ್ದಾರೆ.

ಮೈಸೂರು ಮೇಟಗಳ್ಳಿ ಠಾಣೆ ಪೊಲೀಸರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಹೀಗೆ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವಾಗ ಅನೇಕ ನಕಲಿ ಅಪ್ಲಿಕೇಷನ್ ಗಳು ಕಾಣಸಿಗುತ್ತವೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅನೇಕ ನಕಲಿ ಅಪ್ಲಿಕೇಷನ್ ಗಳು ತಲೆ ಎತ್ತಿದ್ದು, ನೀವೇನಾದರೂ ಅಪ್ಪಿ ತಪ್ಪಿ ಈ ಲಿಂಕ್ ಒತ್ತಿ ನಿಮ್ಮ ಖಾಸಗಿ ಮಾಹಿತಿ ನೀಡಿ ಬಿಟ್ಟರೆ, ನಿಮ್ಮ ಖಾತೆಯ ಹಣ ಖಾಲಿ ಆಗೋದಂತು ಖಚಿತ.

Leave A Reply

Your email address will not be published.