Heart Attack: ಮಹಿಳೆಯರೇ ನಿರ್ಲಕ್ಷ್ಯಿಸಬೇಡಿ! ಹೃದಯಾಘಾತ ಸಂಭವಿಸೋ ಮುನ್ನ ಈ ಲಕ್ಷಣಗಳು ಒಂದು ತಿಂಗಳ ಮುನ್ನ ಕಾಣಿಸುತ್ತೆ!!!

Lifestyle News In Kannada Important information for womens regarding heart attack

Lifestyle News In Kannada: ಹೃದಯದ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಸುಳ್ಳಲ್ಲ. ಇತ್ತೀಚಿನ ದಿನಗಳಲ್ಲಿ ಹೃದಯಘಾತವಾಗಿ (Heart Attack)ಸಾವನ್ನಪ್ಪಿದ (Death)ಅದೆಷ್ಟೋ ದಾರುಣ ಘಟನೆಗಳ ಬಗ್ಗೆ ಕೇಳೋದು ಸಾಮಾನ್ಯ ವಿಚಾರ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚೆಚ್ಚು ವರದಿಯಾಗುತ್ತಿದ್ದು, ಅದರಲ್ಲಿಯೂ ಫಿಟ್ ಅಂಡ್ ಫೈನ್ ಆಗಿದ್ದ ಯುವಕರು, ವ್ಯಾಯಾಮ, ಆಟ ಆಡುವ ಸಂದರ್ಭದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆ ವರದಿಯಾಗುತ್ತಿದ್ದು, ಈ ರೀತಿ ಹದಿಹರೆಯದ ಯುವಜನತೆ ಸಾವಿನ ದವಡೆಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಡುವೆ ಮಹಿಳೆಯರಲ್ಲಿ ಹೃದಯಾಘಾತ ಸಂಭವಿಸುವ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಇದರಿಂದ ಅನೇಕ ವಿಚಾರಗಳು ಬಯಲಾಗಿವೆ.

ಬಹುತೇಕ ಹೃದಯಾಘಾತ ಸಂಭವಿಸುವ ಸಂದರ್ಭ ಮುನ್ಸೂಚನೆ ಸಿಗುವುದು ಕಡಿಮೆ. ಆದರೆ ಕೆಲವು ಸಂದರ್ಭಗಳಲ್ಲಿ ಅದು ಸಂಭವಿಸುವ ಸಾಧ್ಯತೆ ಕ್ರಮೇಣ ಹೆಚ್ಚಾಗುವ ಜೊತೆಗೆ ಒಂದು ತಿಂಗಳ ಮೊದಲೆ ಕೆಲವೊಂದು ಮುನ್ಸೂಚನೆಗಳನ್ನು ನೀಡುವ ಸಂಭವ ಕೂಡ ಇದೆ. ಈ ರೀತಿಯ ಪರಿಸ್ಥಿತಿ ಎದುರಾದ ಸಂದರ್ಭ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಹೃದಯಾಘಾತದ ಸಾಧ್ಯತೆಯನ್ನು ತಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಹೃದಯಾಘಾತದ ಸಂದರ್ಭದಲ್ಲಿ ಏನು ಮಾಡಬೇಕು?
* ಯಾರಿಗಾದರೂ ಹೃದಯಾಘಾತವಾಗಿದೆ ಎಂದು ತಿಳಿದ ಕೂಡಲೇ ನೀವು ಮೊದಲು ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕು.
* ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿರುವ ವೇಳೆ, ರೋಗಿಗೆ ಒಂದು ಆಸ್ಪಿರಿನ್ ಟ್ಯಾಬ್ಲೆಟ್ (300 ಮಿಗ್ರಾಂ) ನೀಡಬೇಕು. ಆದರೂ, ರೋಗಿಯು ಆಸ್ಪಿರಿನ್ಗೆ ಅಲರ್ಜಿ ಆಗಿರಬಾರದು ಎಂಬುದನ್ನು ಗಮನಿಸಬೇಕು.(ಆಸ್ಪಿರಿನ್ ರಕ್ತವನ್ನು ತೆಳುಗೊಳಿಸಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ನೆರವಾಗುತ್ತದೆ)

ಹಾರ್ವರ್ಡ್ ಹೆಲ್ತ್, (ಹೃದಯಾಘಾತದಿಂದ ಬದುಕುಳಿದವರ ) 500 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಮೀಕ್ಷೆಯನ್ನು ಉಲ್ಲೇಖಿಸಿ, ಹೃದಯಾಘಾತದ ಹಠಾತ್ ಸ್ವಭಾವದ ಬಗ್ಗೆ ಜನರು ತಪ್ಪು ತಿಳಿದಿದ್ದಾರೆ ಎಂದು ಮಾಹಿತಿ ನೀಡಿದೆ.ಹಾರ್ವರ್ಡ್ ಹೆಲ್ತ್ ಸಮೀಕ್ಷೆಯಲ್ಲಿ, ಶೇ. 95 ರಷ್ಟು ಮಹಿಳೆಯರ ಹೃದಯಾಘಾತಕ್ಕೆ ಒಂದು ತಿಂಗಳ ಮೊದಲೆ ದೇಹದಲ್ಲಿ ಕೆಲ ಲಕ್ಷಣಗಳು ಗೋಚರಿಸಿದೆ ಎಂದು ಹೇಳಿದೆ. ಮಹಿಳೆಯರು ಹೃದಯಾಘಾತಕ್ಕೆ ಒಳಗಾದಾಗ ಮಹಿಳೆಯರಿಗೆ ಉಸಿರಾಟದ ತೊಂದರೆ, ಆಯಾಸ, ಜಿಗುಟಾದ ಬೆವರು, ತಲೆತಿರುಗುವಿಕೆ ಮತ್ತು ವಾಕರಿಕೆ ಯಾವುದೋ ಒಂದನ್ನು ಅದರ ಒಂದು ಚಿಹ್ನೆ ಎಂದು ಪರಿಗಣಿಸಬಹುದು ಎಂದು ಸಮೀಕ್ಷೆ ಸೂಚಿಸಿದೆ.

ಪುರುಷರಲ್ಲಿ ಹೃದಯಾಘಾತ ಸಂಭವಿಸಿದಾಗ ಸಾಮಾನ್ಯವಾಗಿ ಎದೆ ನೋವು, ಎಚ್ಚರಿಕೆಯ ಸಂಕೇತದಂತೆ ಕಾರ್ಯ ನಿರ್ವಹಿಸುತ್ತದೆ. ಈ ನೋವನ್ನು ಅನುಭವಿಸಿದ ಮಂದಿ ಮೊದಲಿಗೆ ನೋವಿನ ಬದಲು ಒತ್ತಡ ಇಲ್ಲವೇ ಎದೆಯಲ್ಲಿ ಬಿಗಿತದ ಅನುಭವವನ್ನು ವರದಿ ಮಾಡಿರುವ ಕುರಿತು ಸಮೀಕ್ಷೆ ಮಾಹಿತಿ ನೀಡಿದೆ. ಈ ಅಧ್ಯಯನದಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮಾತ್ರ ಹೃದಯಾಘಾತದ ಸಮಯದಲ್ಲಿ ಎದೆ ನೋವು ಅನುಭವಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಿಳೆಯರಿಗೆ ಆಯಾಸ ಮತ್ತು ನಿದ್ರಾ ಹೀನತೆ ಇವೆರಡೂ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಎಂದಿದೆ. ಸಮೀಕ್ಷೆಯ ಅನುಸಾರ, ಉಸಿರಾಟದ ತೊಂದರೆ, ದೌರ್ಬಲ್ಯ, ಜಿಗುಟಾದ ಬೆವರು, ತಲೆಸುತ್ತುವಿಕೆ ಮತ್ತು ವಾಕರಿಕೆ ಹೃದಯಾಘಾತ ಆಗುವ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕೆಲ ಪ್ರಮುಖ ಲಕ್ಷಣಗಳಾಗಿವೆ. ಕೆಲವು ಮಹಿಳೆಯರು ತೀವ್ರ ಆಯಾಸ, ನಿದ್ರಾ ಹೀನತೆ ಅಥವಾ ಉಸಿರಾಟದ ತೊಂದರೆಯ ರೂಪದಲ್ಲಿ ಹೃದಯಾಘಾತದ ಆರಂಭಿಕ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಳ್ಳಬಹುದು. ಎಂದು ಹಾರ್ವರ್ಡ್ ಹೆಲ್ತ್ ಹೇಳಿದೆ. ಈ ರೋಗಲಕ್ಷಣಗಳ ಬಗ್ಗೆ ವಿಶೇಷ ಗಮನ ಹರಿಸಿದರೆ ರೋಗದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ಪಡೆಯುವ ಮೂಲಕ ಹೃದಯಾಘಾತದ ಸಂಭವನೀಯತೆ ತಪ್ಪಿಸುವ ಬಗ್ಗೆ ಮಾಹಿತಿ ನೀಡಿದೆ.

Leave A Reply

Your email address will not be published.