SBI Safety Tips: ಎಸ್ ಬಿಐ ತನ್ನ ಗ್ರಾಹಕರಿಗೆ ‌ನೀಡಿದೆ ಮತ್ತೊಂದು ಎಚ್ಚರಿಕೆಯ ಸಂದೇಶ!!! ಇತ್ತ ಗಮನಿಸಿ

SBI Safety Tips SBI gave another warning message to customers

SBI Safety Tips:ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಬೆರಳ ತುದಿಯಲ್ಲೇ ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಅಷ್ಟೆ ಅಲ್ಲದೇ, ಬ್ಯಾಂಕ್ಗಳು ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐನ (State Bank Of India) ಮನೆ ಬಾಗಿಲಿನ ಸೇವೆಯ ಮೂಲಕ ಮನೆಯ ಸೌಕರ್ಯದಿಂದ ಸುಲಭವಾಗಿ ಹಾಗೂ ಸರಳವಾಗಿ ಹಣವನ್ನ ಹಿಂಪಡೆಯಲು ಅವಕಾಶ ಕಲ್ಪಿಸಿದೆ. ಎಸ್ ಬಿಐ (SBI Money)ತನ್ನ ಗ್ರಾಹಕರಿಗೆ ಅನೇಕ ಆನ್ ಲೈನ್ (Online)ಸೇವೆಗಳನ್ನು ಪರಿಚಯಿಸಿದ್ದು, ಆ ಮೂಲಕ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆಯನ್ನು ತಪ್ಪಿಸಿದೆ. ಇದರ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI Safety Tips) ಜುಲೈ 27 ರಂದು ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಅನುಭವಕ್ಕಾಗಿ ಭದ್ರತಾ ಸಲಹೆಗಳನ್ನು ಒದಗಿಸುವ ಇಮೇಲ್ ಸಂವಹನವನ್ನು ಕಳುಹಿಸಿದೆ.

ಆನ್ಲೈನ್ ಬ್ಯಾಂಕಿಂಗ್ ವಂಚನೆ ಹೆಚ್ಚಾಗುತ್ತಾ ಹೋದಂತೆ ನಿಮ್ಮ ಮುಖ್ಯ ಮಾಹಿತಿ ಲೀಕ್ ಆಗದಂತೆ ರಕ್ಷಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಸುರಕ್ಷತಾ ಸಲಹೆಗಳನ್ನು ಅನುಸರಿಸುವ ಮೂಲಕ, ವಂಚನೆಗೆ ಬಲಿಯಾಗುವ ಅಪಾಯವನ್ನು ಕೊಂಚ ಮಟ್ಟಿಗೆ ತಗ್ಗಿಸಿಕೊಳ್ಳಬಹುದು.

ಯೋನೊ ವೆಬ್ ಪೋರ್ಟಲ್ ಅನ್ನು ಡಿಸೆಂಬರ್ 01, 2021 ರಿಂದ ಮಾಡಲಾಗಿದೆ. ಯೋನೊ ಎಸ್ಬಿಐ ಅನ್ನು ಪ್ಲೇ / ಆಪ್ ಸ್ಟೋರ್ನಲ್ಲಿ ಲಭ್ಯವಿರುವ ಅಪ್ಲಿಕೇಶನ್ ಮೂಲಕ ಮಾತ್ರ ಪ್ರವೇಶಿಸಲು ಸೂಚಿಸಲಾಗಿದೆ. ಇದರ ಜೊತೆಗೆ, ಆನ್ಲೈನ್ ಎಸ್ಬಿಐ ಅಥವಾ ಯೋನೊ ಎಸ್ಬಿಐ / ಯೋನೊ ಲೈಟ್ ಅಪ್ಲಿಕೇಶನ್ ಬಳಸುವಾಗ ರಿಮೋಟ್ ಆಕ್ಸೆಸ್ ಸೌಲಭ್ಯ / ಎಸ್‌ಎಂಎಸ್ ಫಾರ್ವರ್ಡಿಂಗ್ ಸೌಲಭ್ಯ ಒಳಗೊಂಡಿರುವ ಯಾವುದೇ ಅಪ್ಲಿಕೇಶನ್ಗಳಿಗೆ ಪ್ರವೇಶಿಸಬೇಡಿ ಎಂದು ಸೂಚನೆ ನೀಡಿದೆ.

ಇಲ್ಲಿ ಗ್ರಾಹಕರು ನೆನಪಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಹೀಗಿವೆ:

# ಅಧಿಕೃತ ವಾಟ್ಸಾಪ್ / ಕಾಲ್ ಸೆಂಟರ್ ಸಂಖ್ಯೆಗಳ ಬಗ್ಗೆ ವಿವರಗಳನ್ನು ಪಡೆಯಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ https://bank.sbi ಅನ್ನು ಗಮನಿಸಬೇಕು.

# ಅನುಮಾನಾಸ್ಪದ ಇಮೇಲ್ / ಎಸ್‌ಎಂಎಸ್ ಇಲ್ಲವೇ ಫೋನ್ ಕರೆಯನ್ನು ತಕ್ಷಣ [email protected] ವರದಿ ಮಾಡಬೇಕು.

# 1930 ಗೆ ಕರೆ ಮಾಡಿ ಅಥವಾ ವಹಿವಾಟು ವಿವರಗಳನ್ನು https://cybercrime.gov.in ಸೈಬರ್ ಕ್ರೈಮ್ ಸೆಲ್ ಗೆ ಸಲ್ಲಿಸಬೇಕು.

# ಇದರ ಜೊತೆಗೆ 1800111109 ಬ್ಯಾಂಕಿನ ಸಂಖ್ಯೆಗೆ ಕರೆ ಮಾಡಿ ಅಥವಾ ಅನಧಿಕೃತ ವಹಿವಾಟು ನಡೆದಿರುವುದು ನಿಮ್ಮ ಗಮನಕ್ಕೆ ಬಂದರೆ, https://crcf.sbi.co.in/ccf/ ನಲ್ಲಿ ಅನಧಿಕೃತ ವಿಭಾಗದಲ್ಲಿ ದೂರು ನೀಡಬೇಕು.

# ಪ್ಲೇ/ಆಪ್ ಸ್ಟೋರ್ ನಿಂದ ಯೋನೊ ಎಸ್ ಬಿಐ/ಯೋನೊ ಲೈಟ್ ಮೊಬೈಲ್ ಆಪ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಪಾಸ್ ವರ್ಡ್ ಗಳು/MPIN ಅನ್ನು ಆಗಾಗ ಬದಲಾಯಿಸುತ್ತಿರಬೇಕು.

# ಆನ್ ಲೈನ್ ಎಸ್ ಬಿಐಗಾಗಿ ನಿಮ್ಮ ಬ್ರೌಸರ್ ವಿಳಾಸ ಪಟ್ಟಿಯಲ್ಲಿ URL ಟೈಪ್ ಮಾಡುವ ಮೊದಲು ‘https’ ಬಳಸಬೇಕು.

# ಭದ್ರತಾ ಪ್ರಮಾಣಪತ್ರವನ್ನು ವೀಕ್ಷಿಸಲು ಜೊತೆಗೆ ಪರಿಶೀಲನೆ ಮಾಡಲು ಆನ್ಲೈನ್ ಎಸ್ ಬಿಐನ ವಿಳಾಸ ಅಥವಾ ಸ್ಥಿತಿ ಪಟ್ಟಿಯಲ್ಲಿರುವ ಪ್ಯಾಡ್ ಲಾಕ್ ಚಿಹ್ನೆಯನ್ನು ಕ್ಲಿಕ್ ಮಾಡಬೇಕು.

Leave A Reply

Your email address will not be published.