Vastu Shastra: ಮನೆಯ ಸದಸ್ಯರ ಆರೋಗ್ಯ ಸುಧಾರಣೆಗೆ ಕಿಟಕಿ, ಬಾಗಿಲಿಗೆ ಈ ಬಣ್ಣದ ಪರದೆ ಹಾಕಿ! ರಿಸಲ್ಟ್ ನಿಮ್ಮ ಕಣ್ಣ ಮುಂದೆ!

Vastu Shastra Put this color curtain on the window and door to improve the health of the family members

Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿಯಾಗುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಹೀಗಾಗಿ, ಮನೆಯ ಪ್ರತಿ ಕೋಣೆಯ(Rooms )ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ನಿರ್ಮಿಸುವುದು ಕೂಡ ಮುಖ್ಯವಾಗುತ್ತದೆ. ಸಮಸ್ಯೆ ಯಾರಿಗಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರದ್ದೇ ಆದ ತರಹೇವಾರಿ ಸಮಸ್ಯೆಗಳಿರುತ್ತವೆ. ಒಮ್ಮೆ ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎಂದು ಪರದಾಡುತ್ತಿರುತ್ತಾರೆ. ನಮ್ಮ ಅದೆಷ್ಟೋ ತೊಂದರೆಗಳಿಗೆ ಪರಿಹಾರವೆಂಬ ಕೀಲಿಕೈ ಜ್ಯೋತಿಷ್ಯ ಶಾಸ್ತ್ರ ಹಾಗೂ ನಮ್ಮ ವಾಸ್ತುವಿನಲ್ಲಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಜ್ಯೋತಿಷ್ಯ ಶಾಸ್ತ್ರ (Astrology) ಹಾಗೂ ವಾಸ್ತು ಸಲಹೆ (Vastu Tips) ಆರ್ಥಿಕ, ಸಾಮಾಜಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಒಳಗೊಂಡಿದೆ. ಹೀಗಾಗಿ, ನೀವು ನಿಮ್ಮ ಜೀವನ ಶೈಲಿಯಲ್ಲಿ ಕೆಲ ಸರಳ ವಿಧಾನ ಅನುಸರಿಸಿ ಪರಿಹಾರ ನೀವೇ ಕಂಡುಕೊಳ್ಳಿ. ಮನೆ ಕಟ್ಟುವಾಗ ವಾಸ್ತು ಶಾಸ್ತ್ರದ (Vastu Shastra Tips)ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮನೆಯಲ್ಲಿ ನಾವು ಇರಿಸುವ ಪ್ರತಿ ವಸ್ತು ಕೂಡ ಮನೆಯವರ ಮೇಲೆ ಪ್ರಭಾವ ಬೀರುತ್ತದೆ. ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕಿಗೂ ನಿರ್ದಿಷ್ಟವಾದ ಬಣ್ಣಕ್ಕೆ ಸಂಬಂಧಪಟ್ಟಿರುತ್ತದೆ. ಹೀಗಾಗಿ, ವಾಸ್ತು ದೋಷ ನಿವಾರಣೆ ಮಾಡಲು ಮನೆಯಲ್ಲಿ ಆಯಾ ದಿಕ್ಕಿನಲ್ಲಿ ಅದಕ್ಕೆ ಸಂಬಂಧಿಸಿದ ಬಣ್ಣದ ವಸ್ತುಗಳನ್ನು ಜೋಡಿಸಬೇಕು. ಅದೇ ರೀತಿ ಮನೆಯ ಕಿಟಕಿ ಬಾಗಿಲಿಗೆ ದಿಕ್ಕಿಗೆ ಸರಿಯಾದ ಬಣ್ಣದ ಪರದೆಯನ್ನು ಬಳಕೆ ಮಾಡುವುದು ಕೂಡ ಅವಶ್ಯಕ. ಹಾಗಿದ್ದರೆ, ಮನೆಯ ಯಾವ ದಿಕ್ಕಿನಲ್ಲಿ ಯಾವ ಬಣ್ಣ ಇರಬೇಕು ಗೊತ್ತಾ?

ವಾಸ್ತು ಶಾಸ್ತ್ರದ ಅನುಸಾರ, ಉತ್ತರ ದಿಕ್ಕಿನಲ್ಲಿ ಕಪ್ಪು ಬಣ್ಣದ ಪರದೆಗಳನ್ನು ಹಾಕುವುದು ಮಂಗಳಕರ ಅದೇ ರೀತಿ ದಕ್ಷಿಣ ದಿಕ್ಕಿನಲ್ಲಿ ಕೆಂಪು ಬಣ್ಣದ ಪರದೆ ಹಾಕಿಸಿದರೆ ಶುಭ ಫಲ ಸಿಗಲಿದೆ. ಹಸಿರು ಬಣ್ಣ ಪೂರ್ವ ದಿಕ್ಕಿಗೆ ಸಂಬಂಧಿಸಿದ್ದು, ಹೀಗಾಗಿ, ಪೂರ್ವ ದಿಕ್ಕಿನ ಕಿಟಕಿ, ಬಾಗಿಲಿಗೆ ಹಸಿರು ಬಣ್ಣದ ಪರದೆ ಹಾಕಿಸಿದರೆ ಒಳ್ಳೆಯದು. ಪಶ್ಚಿಮ ದಿಕ್ಕು ಬಿಳಿ ಬಣ್ಣಕ್ಕೆ ಸಂಬಂಧಿಸಿದ್ದರಿಂದ ಈ ದಿಕ್ಕಿನ ಕಿಟಕಿ, ಬಾಗಿಲಿಗೆ ಬಿಳಿ ಬಣ್ಣದ ಪರದೆ ಹಾಕಬೇಕು. ಇದರಿಂದ ಏನು ಪ್ರಯೋಜನ ಗೊತ್ತಾ?

ಈ ವಿಧಾನವನ್ನು ಅನುಸರಿಸಿದರೆ, ಮನೆಯ ಗಂಡು ಮಕ್ಕಳಿಗೆ ಜೀವನದಲ್ಲಿ ಯಶಸ್ಸು ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಮನೆಯ ಸದಸ್ಯರಿಗೆ ಯಾವುದೇ ಆರೋಗ್ಯ ಸಮಸ್ಯೆ ಕೂಡ ಎದುರಾಗದು. ಮನೆಯವರಿಗೆ ನೀರಿನಿಂದಾಗುವ ಅಪಾಯ ತಪ್ಪುವ ಜೊತೆಗೆ ಮನೆಯವರ ಭಯ ದೂರವಾಗುತ್ತದೆ. ಈ ಎಲ್ಲ ಪ್ರಯೋಜನ ಪಡೆಯಲು ನೀವು ಕೂಡ ಈ ಸರಳ ವಿಧಾನ ಅನುಸರಿಸಿ ನೋಡಿ.

Leave A Reply

Your email address will not be published.