Couple Sells Baby:ಎರಡು ಮಕ್ಕಳು ಮಡಿಲಲ್ಲಿ ಇರುವ ಸಮಯದಲ್ಲಿ ಹನಿಮೂನ್ ಬಯಕೆ! ಅದಕ್ಕಾಗಿ ಈ ಮಹಾತಾಯಿ ಮಾಡಿದ್ದೇನು…ಗೊತ್ತೇ???

Couple Sells Baby: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಹಣದ ವ್ಯಾಮೋಹಕ್ಕೋ ಇಲ್ಲವೇ ಹೆಣ್ಣಿನ ಕಾರಣಕ್ಕೋ ಆಗಿರುತ್ತದೆ. ಇದಲ್ಲದೇ, ಎಣ್ಣೆಯ ಮಹಿಮೆಯಿಂದ ಕೂಡ ಆಗುವ ಅವಾಂತರ ಕಮ್ಮಿಯೇನಲ್ಲ. ಇತ್ತೀಚಿಗಷ್ಟೇ ಕುಡಿತದ ಚಟದಿಂದ ತನ್ನ ಆರು ತಿಂಗಳ ಕಂದಮ್ಮನನ್ನು(Child)ಪೋಷಕರು ಮಾರಾಟ ಮಾಡಿದ ಪ್ರಕರಣ ವರದಿಯಾಗಿತ್ತು. ಅದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ.

ಹೆತ್ತಮ್ಮನಿಗೆ ಹೆಗ್ಗಣ್ಣ ಮುದ್ದು ಎಂಬ ಮಾತು ಕೆಲವೊಮ್ಮೆ ಸುಳ್ಳಾಗುತ್ತದೆ ಎಂಬುದಕ್ಕೆ ಈ ಕಹಾನಿಯೆ ಸಾಕ್ಷಿ!!ಉತ್ತರ 24 ಪರಗಣ ಜಿಲ್ಲೆಯ ನಿವಾಸಿಗಳಾದ ಜಯದೇವ್‌ ಘೋಷ್‌ ಹಾಗೂ ಸತಿ ಎಂಬ ದಂಪತಿಗಳ ಆರು ತಿಂಗಳ ಮಗು ಕಾಣೆಯಾಗಿತ್ತು(Child Missing). ಕೆಲ ಸಮಯದಿಂದ ಮಗು ಕಾಣೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದು, ಪೊಲೀಸರಿಗೆ (Police)ಮಾಹಿತಿ ನೀಡಿದ್ದಾರೆ.

 

ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಬಯಕೆಗಳು ಇರುವುದು ಸಹಜ. ಮದುವೆಯಾದ ಹೊಸತರಲ್ಲಿ ಹನಿಮೂನ್‌ಗೆ (Honeymoon)ಹೋಗಬೇಕು. ಇಬ್ಬರೇ ಪ್ರವಾಸಕ್ಕೆ ಹೋಗಬೇಕು ಎಂದೆಲ್ಲ ಬಯಕೆ ಇರುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಮದುವೆಯಾಗಿ(Marriage)ಹಲವು ವರ್ಷ ಕಳೆದಿದ್ದು, ಇಬ್ಬರು ಮಕ್ಕಳಾದ ಮೇಲೆ ದಂಪತಿಗೆ ಹನಿಮೂನ್‌ಗೆ ತೆರಳಬೇಕು ಎಂಬ ಬಯಕೆಯಾಗಿದೆ. ಈ ರೀತಿ ಆಸೆ – ಆಕಾಂಕ್ಷೆ ಹುಟ್ಟುವುದು ತಪ್ಪು ಎನ್ನಲಾಗದು. ಆದರೆ, ತಮ್ಮ ಬಯಕೆ ಈಡೇರಿಕೆಗಾಗಿ ಜೋಡಿ ಮಾಡಿದ್ದೇನು ಗೊತ್ತಾ?ಇದಕ್ಕಾಗಿ ಬಲಿ ಕೊಟ್ಟಿದ್ದು ಮಾತ್ರ ಏನು ಅರಿಯದ ಮುಗ್ಧ ಕಂದಮ್ಮನನ್ನು! ಹೌದು!! ಎಂಟು ತಿಂಗಳ ಹಸುಗೂಸನ್ನೇ ಎರಡು ಲಕ್ಷ ರೂಪಾಯಿಗೆ ಮಾರಾಟ (Couple Sells Baby) ಮಾಡಿ ಆ ಹಣದಿಂದ ತಮ್ಮ ಬಯಕೆಗಳನ್ನು ಈಡೇರಿಸಲು ಈ ಜೋಡಿ ಮುಂದಾಗಿದ್ದು ವಿಪರ್ಯಾಸವೇ ಸರಿ.

 

ಈ ಜೋಡಿಯ ಚಲನವಲನ ಗಮನಿಸಿದ ಅಕ್ಕ ಪಕ್ಕದವರಿಗೆ ಜಯದೇವ್‌ ಘೋಷ್‌ ಹಾಗೂ ಸತಿ ಅವರ ಮಗಳು ಕಾಣದೇ ಇದ್ದಾಗ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಮನೆಯಲ್ಲಿ ಮಗು ಕಾಣದಿರುವ ಜೊತೆಗೆ ಇವರ ಬಳಿ ದುಬಾರಿ ಬೆಲೆಯ ಮೊಬೈಲ್ (Luxury Mobiles)ಎಲ್ಲ ಕಂಡ ಮೇಲೆ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದ ಸಂದರ್ಭ ಈ ದುಷ್ಟ ಜೋಡಿ ಹಣದ ಆಸೆಗಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ವಿಷಯ ಬಯಲಾಗಿದೆ.

ಈ ದಂಪತಿಗಳು ಹೊಸ ಮೊಬೈಲ್‌ ಖರೀದಿ ಮಾಡುವ ಸಲುವಾಗಿ, ಅಷ್ಟೆ ಅಲ್ಲದೇ, ಹನಿಮೂನ್‌ಗೆ ನಾನಾ ಕಡೆಗೆ ಟ್ರಿಪ್ ಹೋಗುವ ಯೋಜನೆ ಹಾಕಿಕೊಂಡಿದ್ದರು. ತಮ್ಮ ಚಪಲದಿಂದಾಗಿ 8 ತಿಂಗಳ ಮಗುವನ್ನು ಎರಡು ಲಕ್ಷ ರೂಪಾಯಿಗೆ ಒಂದೂವರೆಗೆ ತಿಂಗಳ ಹಿಂದೆ ಇವರು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವ ಹಾಗೆ ದುಡಿದು ಜೀವಿಸಲು ಮೈಗಳ್ಳತನ ಬೆಳೆಸಿಕೊಂಡಿದ್ದ ಜೋಡಿಗೆ ಸುಲಭವಾಗಿ ಹಣ ಮಾಡಿ ತಮ್ಮ ಹನಿಮೂನ್ ಪ್ಯಾಕೇಜ್ ಟ್ರಿಪ್ ಮಾಡಲು ಹಣ ಬೇಕಾಗಿತ್ತು.ಇದಕ್ಕೆ ಈ ಜೋಡಿ ಆರಿಸಿಕೊಂಡಿದ್ದು ತಮ್ಮ ಮಗುವನ್ನು ಮಾರಾಟ ಮಾಡುವ ಹೀನ ಕೃತ್ಯಕ್ಕೆ ಎಂಬುದು ಬೇಸರದ ಸಂಗತಿ. ನೆರೆ ಹೊರೆಯ ಮನೆಯವರ ಪ್ರಕಾರ ಗಾಂಜಾ, ಅಫೀಮು ಚಟ ಕೂಡ ತಮ್ಮ. 8 ತಿಂಗಳ ಮಗುವನ್ನು ಮಾರಾಟ ಮಾಡಲು ಕಾರಣವಾಗಿರಬಹುದು ಎಂದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 

ಈ ದಂಪತಿಗೆ ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡುವ(Instagram Reels) ಮಾಡುವ ಜೊತೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಹುಚ್ಚಿನಿಂದ ಮಗುವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಮಗುವನ್ನು ಮಾರಿ ಸಿಕ್ಕ ಹಣದಲ್ಲಿ ಈ ದಂಪತಿ ದಿಘಾ, ಮಂಡರ್‌ಮಣಿ ಬೀಚ್‌ ಸೇರಿ ಹಲವು ಪ್ರವಾಸಿ ತಾಣಗಳಿಗೆ (Tourist Places Visit)ಭೇಟಿ ನೀಡಿದ್ದಾರಂತೆ. ಏನೇ ಹೇಳಿ, ಎಷ್ಟೋ ಮಂದಿ ಒಂದು ಮಗು ಹುಟ್ಟಿದರೆ ಸಾಕು ಎಂದು ನಾನಾ ಬಗೆಯ ಪೂಜೆ, ವ್ರತ ಮಾಡುತ್ತಾರೆ. ಆದರೆ, ತಾವೇ ಹುಟ್ಟಿಸಿದ ಮಗುವನ್ನು ಹಣದ ದುರಾಸೆಗೆ ಮಾರಾಟ ಮಾಡುವುದು ಎಷ್ಟು ಸರಿ? ಜುಲೈ 24ರಂದು ಪೊಲೀಸರು ದಂಪತಿಯನ್ನು ಬಂಧಿಸಿದ್ದು, ಮಗುವನ್ನು ಮಾರಾಟ ಮಾಡಲು ಸಹಕರಿಸಿದ ಪ್ರಿಯಾಂಕಾ ಘೋಷ್‌ ಎಂಬುವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.