Education News: ದೇಶದಲ್ಲಿರೋ ಈ ಎಲ್ಲಾ ಶಾಲೆಗಳಲ್ಲಿ ‘CBSE’ ಪಠ್ಯ ಕ್ರಮ ಜಾರಿ – ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

Education News PM Modi announced implementation of 'CBSE' curriculum in all these schools

CBSE: ಶಿಕ್ಷಣ(Education )ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಒಳ್ಳೆಯ ನಡೆ, ನುಡಿಯನ್ನು ಎತ್ತಿ ಹಿಡಿಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendea Modi)ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವಾರ್ಷಿಕೋತ್ಸವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟನೆ ಮಾಡಿದ್ದಾರೆ.

ದೇಶದಲ್ಲಿರುವ ಈ ಎಲ್ಲಾ ಶಾಲೆಗಳಲ್ಲಿ ‘CBSE’ ಪಠ್ಯ ಕ್ರಮ ಜಾರಿ ತರುವ ಕುರಿತು ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ ಮಾಡಿದ್ದಾರೆ. ದೇಶದ(Nation )ಹಣೆಬರಹವನ್ನು ಬದಲಾಯಿಸುವ ಶಕ್ತಿಯಿರುವುದು ಶಿಕ್ಷಣಕ್ಕೆ ಮಾತ್ರ. ದೇಶದ ಬದಲಾವಣೆಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಮುಂಬರುವ ದಿನಗಳಲ್ಲಿ, ದೇಶದ ಎಲ್ಲಾ ಸಿಬಿಎಸ್‌ಇ ಶಾಲೆಗಳಲ್ಲಿ(CBSE School)ಪಠ್ಯಕ್ರಮವನ್ನು ಜಾರಿಗೆ ತರುವ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 22 ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ದ ಪಡಿಸುವ ಕಾರ್ಯ ನಡೆಯುತ್ತಿದೆ ಹೇಳಿದ್ದಾರೆ.ವಿಶ್ವದ ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಭಾಷೆಯಿಂದಾಗಿ ಮುನ್ನಡೆಯನ್ನು ಸಾಧಿಸಿವೆ.ಯುವಜನತೆ ಇದೀಗ ಮಾತೃ ಭಾಷೆಯ ಮೂಲಕ ಅಧ್ಯಯನ ಮಾಡಲು ಅನುವು ಮಾಡಿಕೊಡಲಾಗಿದ್ದು, ಸಾಮಾಜಿಕ ನ್ಯಾಯದ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನ ಮಂತ್ರಿಗಳು ಇದೆ ವೇಳೆ ತಿಳಿಸಿದ್ದಾರೆ

Leave A Reply

Your email address will not be published.