Murder Case: ಪತ್ನಿಯನ್ನು ಕೊಂದು ಹೃದಯಾಘಾತ ಎಂದು ಬಿಂಬಿಸಿದ ಕಾಂಗ್ರೆಸ್ ಮುಖಂಡನ ಪುತ್ರ : ಮರಣೋತ್ತರ ಪರೀಕ್ಷೆಯಿಂದ ಕಾರಣ ಬಹಿರಂಗ !

Latest news Congress leader son said that he killed his wife and had a heart attack

Murder Case: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಇದೀಗ,ಹೈದರಾಬಾದ್(Hyderabad) ನಲ್ಗೊಂಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ರಂಗಸಾಯಿ ರೆಡ್ಡಿ ಅವರ ಪುತ್ರ ವಲ್ಲಭರೆಡ್ಡಿಯನ್ನು ಅವರ ಪತ್ನಿಯ ಲಹರಿ ಕೊಲೆ ಪ್ರಕರಣದಲ್ಲಿ ಪೊಲೀಸರು(Police)ಬಂಧಿಸಿರುವ ಘಟನೆ ವರದಿಯಾಗಿದೆ.

ವಲ್ಲಭರೆಡ್ಡಿ ಪತ್ನಿ ಲಹರಿ ಹೃದಯಾಘಾತದಿಂದ(Heart Attack)ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಪೋಲಿಸರು ಈ ಪ್ರಕರಣವನ್ನು ತನಿಖೆ ನಡೆಸಿದ ಸಂದರ್ಭ ಇದು ಸಹಜ ಸಾವಲ್ಲ ಕೊಲೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಲಹರಿ ಸಾವಿನ ಪ್ರಕರಣದ ತನಿಖೆ ವೇಳೆ ಲಹರಿಯ ಸಾವನ್ನು(Death) ಎಂದು ಬಿಂಬಿಸಿದ ವಲ್ಲಭ ರೆಡ್ಡಿ ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ನಾಟಕ ಮಾಡಿದ್ದು ತಿಳಿದಿದೆ.ಹೀಗಾಗಿ, ಪೊಲೀಸರು ವಲ್ಲಭರೆಡ್ಡಿಯನ್ನು ಬಂಧಿಸಿದ್ದಾರೆ.

ನಲ್ಗೊಂಡ ಜಿಲ್ಲೆಯ ನಿಡಮನೂರಿನ ಕಾಂಗ್ರೆಸ್ ಮುಖಂಡ ರಂಗಸಾಯಿ ರೆಡ್ಡಿ ಅವರ ಪುತ್ರ ವಲ್ಲಭ ರೆಡ್ಡಿ (30) ಮತ್ತು ಅವರ ಪತ್ನಿ ಲಹರಿ (27) ಹಿಮಾಯತ್ ನಗರದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಪತಿ -ಪತ್ನಿ ನಡುವೆ ಜಗಳ ನಡೆದು ಗಲಾಟೆ ನಡೆದಿದೆ. ಮದುವೆಯಾಗಿ(Marriage )ಒಂದು ವರ್ಷವಾಗಿದೆಯಷ್ಟೇ!! ಈ ತಿಂಗಳ 13ರಂದು ರಾತ್ರಿ ಲಹರಿಗೆ ವಲ್ಲಭರೆಡ್ಡಿ ತೀವ್ರವಾಗಿ ಥಳಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಲಹರಿ ತಲೆ ಗೋಡೆಗೆ ಮತ್ತು ಬಾಗಿಲಿಗೆ ಕೂಡ ಬಡಿದಿದೆ. ಲಹರಿ ಹೊಟ್ಟೆಗೆ ಪತಿ ಕಾಲಿನಿಂದ ಒದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿದೆ. ಆದರೆ ಪತ್ನಿ ಮೃತಪಟ್ಟಿರುವುದರಿಂದ ಯಾರಿಗೂ ಅನುಮಾನ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಆಕೆಯನ್ನು ಹೃದಯಾಘಾತ ಎಂಬ ಹೆಸರಿನಲ್ಲಿ ಆಸ್ಪತ್ರೆಗೆ(Hospital )ದಾಖಲಿಸಿದ ಘಟನೆ ನಡೆದಿದೆ.

ಮೊನ್ನೆ 24ರಂದು ಪತ್ನಿಯ ಸಾವಿನ ಬಳಿಕವೂ ಕೂಡ ಅಂತ್ಯಕ್ರಿಯೆ ವಿಧಿವಿಧಾನವನ್ನು ಮಾಡುವಾಗ ಕೂಡ ಪತಿ ವಲ್ಲಭರೆಡ್ಡಿ 10 ಸಾವಿರ ಜನರಿಗೆ ಊಟ ಬಡಿಸಿ ಏನು ಅರಿಯದ ಮುಗ್ಧನ ಹಾಗೆ ನಟಿಸಿದ್ದ. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸತ್ಯ ಬಟ್ಟ ಬಯಲಾಗಿದೆ.ಪೊಲೀಸರ ಪ್ರಕಾರ, ಲಹರಿ ರೆಡ್ಡಿ ಅವರ ಹೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದಿರುವುದಲ್ಲದೆ, ಅವರ ತಲೆ ಗೋಡೆ ಮತ್ತು ಬಾಗಿಲಿಗೆ ಬಲವಾಗಿ ಬಡಿದ ಪರಿಣಾಮ ಲಹರಿ ರೆಡ್ಡಿ ಮೃತಪಟ್ಟಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಸದ್ಯ,ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.