Crime News:75ರ ವೃದ್ಧನ ಜೊತೆ ಸೀರಿಯಲ್ ನಟಿಯೋರ್ವಳ ರಾಸಲೀಲೆ!!! ಹನಿಟ್ರ್ಯಾಪ್ ಮಾಡಲು ಹೋಗಿ ಸಿಕ್ಕಿಬಿದ್ದಳಾ ನಟನಾಮಣಿ!!!

Latest news Crime News serial actress honeytrapped a 75-year-old man

Crime News:ಕುರುಡು ಕಾಂಚಾಣದ ಮೇಲೆ ವ್ಯಾಮೋಹ ಯಾರಿಗಿಲ್ಲ ಹೇಳಿ!! ಆದ್ರೆ, ಹಣದ ಮೇಲಿನ ದುರಾಸೆಯಿಂದ ಜನರು ಮಾಡುವ ಕೃತ್ಯ ಊಹಿಸಲು ಅಸಾಧ್ಯ!! ಇದೇ ರೀತಿ, ಕೇರಳದ ಕೊಲ್ಲಂನಲ್ಲಿ ಸೀರಿಯಲ್ ನಟಿಯೊಬ್ಬಳು 75 ವರ್ಷದ ಹಿರಿಯ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀರಿಯಲ್ ನಟಿ ಮತ್ತು ಆಕೆಯ ಸ್ನೇಹಿತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಲ್ಲಂ ನಲ್ಲಿ 75ರ ವೃದ್ಧನ ಜೊತೆ ಬೆಡ್ರೂಮ್ನಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ಬಂಧಿತರಾದ ಆರೋಪಿಗಳನ್ನು ಸೀರಿಯಲ್ ನಟಿ ನಿತ್ಯ ಸಸಿ (40) ಮತ್ತು ಬಿನು (48) ಗುರುತಿಸಲಾಗಿದೆ. ಸಂತ್ರಸ್ತ ವ್ಯಕ್ತಿ ನಿವೃತ್ತ ಯೋಧರಾಗಿದ್ದು (75) ಕಾಲೇಜೊಂದರಲ್ಲಿ ಫುಟ್ಬಾಲ್ ಕೋಚ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರಂತೆ. ಮೊದಲು 11 ಲಕ್ಷ ರೂ. ವಸೂಲಿ ಮಾಡಿದ ಆರೋಪಿಗಳು ಕೆಲವು ದಿನಗಳ ಬಳಿಕ ಮತ್ತೆ 25 ಲಕ್ಷ ರೂ. ವಸೂಲಿ ಮಾಡಲು ಯತ್ನಿಸಿದ್ದಾರೆ. ಆರೋಪಿ ನಿತ್ಯ ಸೀರಿಯಲ್ ನಟಿ ಮಾತ್ರವಲ್ಲದೆ, ವಕೀಲೆ ಆಗಿದ್ದಾಳೆ. ಈಕೆ ಪಟ್ಟಣಂತಿಟ್ಟದ ಮಲಯಾಪುಳ ಮೂಲದ ನಿವಾಸಿಯಾಗಿದ್ದು, ಮತ್ತೊಬ್ಬ ಆರೋಪಿ ಬಿನು ಪರವೂರು ನೆಗುಂಗೊಲಂ ಮೂಲದವನು ಎಂದು ತಿಳಿದು ಬಂದಿದೆ.

ಸಂತ್ರಸ್ತ ವ್ಯಕ್ತಿ ಪಟ್ಟಾಮ್ನಲ್ಲಿ ನೆಲೆಸಿದ್ದು, ಪರವೂರ್ ಕಲಕ್ಕೋಡ್ ಸಮೀಪ ಸ್ವಂತ ಮನೆ ಮತ್ತು ಫಾರ್ಮ್ಹೌಸ್ ಅನ್ನು ಹೊಂದಿದ್ದಾರೆ. ಆರೋಪಿ ಬಿನು, ಸಂತ್ರಸ್ತ ವ್ಯಕ್ತಿಯ ಸೋದರಳಿಯನಾಗಿದ್ದು, ಈತನನ್ನು ನಂಬಿದ್ದ ಸಂತ್ರಸ್ತ, ತನ್ನ ಆಸ್ತಿಯನ್ನು ಮಾರಾಟ ಮಾಡಲು ನೆರವಾಗುವಂತೆ ಮನವಿ ಮಾಡಿದ್ದನಂತೆ. ಬಿನು ಆಸ್ತಿಯ ಮಾಹಿತಿಯನ್ನು ವಾಟ್ಸ್ಆಯಪ್ ಮೂಲಕ ಅನೇಕ ಮಂದಿಗೆ ಶೇರ್ ಮಾಡಿದ್ದ. ಇದನ್ನು ನೋಡಿ ನಿತ್ಯ, ಬಿನುನನ್ನು ಸಂಪರ್ಕ ಮಾಡಿದ್ದಾಳೆ. ಹೀಗಾಗಿ, ಬಿನು ನಿತ್ಯ ಎಂಬಾಕೆಯನ್ನು ಸಂತ್ರಸ್ತನಿಗೆ ಪರಿಚಯ ಮಾಡಿಸಿದ್ದಾನೆ.

ಸಂತ್ರಸ್ತ ಮತ್ತು ನಿತ್ಯ ಆಗಾಗ ಭೇಟಿಯಾಗುತ್ತಿದ್ದ ಹಿನ್ನೆಲೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ಆತನೊಂದಿಗೆ ನಿತ್ಯ ಚರ್ಚೆ ಮಾಡಿದ್ದಾಳೆ. ಇಬ್ಬರು ನಡುವಿನ ಸ್ನೇಹ ಗಟ್ಟಿಯಾಗುತ್ತಿದ್ದಂತೆ ಆತನ ಮನೆ ಮತ್ತು ಫಾರ್ಮ್ಹೌಸ್ ಅನ್ನು ಬಾಡಿಗೆ ಪಡೆಯಲು ನಿರ್ಧಾರ ಮಾಡಿದ ಸೀರಿಯಲ್ ನಟಿ ನಿತ್ಯ ಮತ್ತು ಬಿನು ಇಬ್ಬರು ಸೇರಿಸಿಕೊಂಡು ಜೂನ್ 6ರಂದು ಕಲಕ್ಕೋಡ್ನಲ್ಲಿರುವ ಸಂತ್ರಸ್ತನನ್ನು ಹನಿ ಟ್ರ್ಯಾಪ್ ಮಾಡುವ ಪ್ಲಾನ್ ಮಾಡಿಕೊಂಡು ಹಣ ಪೀಕಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಜೂನ್ 6ರಂದು ಕಲಕ್ಕೋಡ್ನಲ್ಲಿರುವ ಸಂತ್ರಸ್ತನ ಜೊತೆಗೆ ಸರಸದಲ್ಲಿ ತೊಡಗಿದ್ದಾಳೆ. ಈ ವೀಡಿಯೋ (Video)ಮಾಡಿಕೊಂಡಿದ್ದ ಕಿಟಕಿಯಿಂದ ಮೊಬೈಲ್ ಫೋನ್ ಮೂಲಕ ಬೆತ್ತಲೆ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾನೆ. ಆ ಬಳಿಕ ಬಿನು, ಸಂತ್ರಸ್ತ ಬಳಿ 25 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.ಒಂದು ವೇಳೆ, ಹಣ ನೀಡದಿದ್ದರೆ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ(Social Media)ಹರಿಬಿಡುವುದಾಗಿ ಹೆದರಿಸಿದ್ದಾನೆ.

ಸಂತ್ರಸ್ತನಿಂದ 15 ಲಕ್ಷ ಮತ್ತು ನಿತ್ಯಳಿಂದ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಆದರೆ, ಇಬ್ಬರು ಸೇರಿ ಹನಿಟ್ರ್ಯಾಪ್ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿಯದೇ ಸಂತ್ರಸ್ಥ ಹಣ ನೀಡಲು ಮುಂದಾಗಿದ್ದಾರೆ. ಇತ್ತ ನಿತ್ಯ ಕೂಡ ನನ್ನ ಬಳಿ ಹಣವಿಲ್ಲವೆಂದು ಕಣ್ಣೀರಿನ ಅಭಿಷೇಕ ನಾಟಕ ಮಾಡಿ ಸಂತ್ರಸ್ತ ಬಿನುಗೆ ಕೊಡುವಂತೆ ಹೇಳಿ ಎರಡು ಕಂತುಗಳಲ್ಲಿ ನಿತ್ಯ ಖಾತೆಗೆ 11 ಲಕ್ಷ ರೂ. ಹಣವನ್ನು ಜಮಾ ಮಾಡಿದ್ದಾನೆ.

ಈ ರೀತಿ, ಹಣ ಪಡೆದ ಬಳಿಕ ಬಿನು ಮೊಬೈಲ್ ಅನ್ನು ಬೆಂಕಿಗೆ ಹಾಕುವ ರೀತಿ ನಾಟಕ ಮಾಡಿದ್ದಾನೆ. ಆದಾಗ್ಯೂ ಇದಾದ ಕೆಲವೇ ದಿನಗಳಲ್ಲಿ ಬಿನು ಮತ್ತೆ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಪದೇ ಪದೇ ಹಣ ಪೀಕಿಸಲು ಹನಿ ಟ್ರ್ಯಾಪ್ ಮಾಡುವ ನಾಟಕದಿಂದ ಬೇಸತ್ತ ಸಂತ್ರಸ್ತ ಜೂನ್ 18ರಂದು ದೂರು ನೀಡಿದ್ದಾರೆ.

ನಿತ್ಯ ಮತ್ತು ಬಿನು ನಿರಂತವಾಗಿ ಸಂತ್ರಸ್ತನಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇಬ್ಬರು ಸೇರಿಕೊಂಡು ನಾಟಕ ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಪೊಲೀಸರ ಸೂಚನೆಯ ಅನುಸಾರ ಸಂತ್ರಸ್ತ ವ್ಯಕ್ತಿ ಬಿನು ಮತ್ತು ನಿತ್ಯಳನ್ನು ಪಟ್ಟಾಮ್ನಲ್ಲಿರುವ ತನ್ನ ಫ್ಲ್ಯಾಟ್ ಕರೆಸಿದ್ದು, ಆತನ ಮಾತಿನಂತೆ ಫ್ಲ್ಯಾಟ್ಗೆ ಬಂದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನಿಂದ ಪಡೆದ ಹಣವನ್ನು ನಿತ್ಯ, ಬಿನು ಖಾತೆಗೆ ವರ್ಗಾವಣೆ ಮಾಡದಿರುವುದು ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ.ಸದ್ಯ ಪೊಲೀಸರು ಇಬ್ಬರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.