Praveen Nettar: ಪುತ್ತಿಲ ಪರಿವಾರದ ಮೊದಲ ಗೆಲುವು ಹುತಾತ್ಮ ಪ್ರವೀಣ್ ನೆಟ್ಟಾರು ಅವರಿಗೆ ಅರ್ಪಣೆ

Latest news Puttila Parivar first win is a tribute to martyr Praveen Nettar

Praveen Nettar :ಬಿಜೆಪಿಯಿಂದ ಬಂಡಾಯ ಎದ್ದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಿನ ರುಚಿ ತೋರಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ(Arun Kumar puthila) ಇದೀಗ ಗ್ರಾಮ‌ ಪಂಚಾಯತ್ ಉಪಚುನಾವಣೆಯಲ್ಲೂ ಸಹ ಕಮಾಲ್ ಮಾಡಿದ್ದಾರೆ. ಪುತ್ತೂರು (Puttur News)ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ(puthila pariva) ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಇತ್ತೀಚೆಗೆ ನಡೆದ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮ ಪಂಚಾಯತ್ನ ತಲಾ ಒಂದು ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಆರ್ಯಾಪು ಗ್ರಾಮ ಪಂಚಾಯತ್ನಲ್ಲಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ರವರು ಗೆಲುವು ಸಾಧಿಸಿದ್ದಾರೆ. ಇದೀಗ ಪುತ್ತಿಲ ಪರಿವಾರದ ಮೊದಲ ಗೆಲುವು ಹುತಾತ್ಮ ಪ್ರವೀಣ್ ನೆಟ್ಟಾರು( Praveen Nettar)ಅವರಿಗೆ ಅರ್ಪಣೆ ಮಾಡಲಾಗಿದೆ.

ಪುತ್ತಿಲ ಪರಿವಾರ ಎನ್ನುವ ಹೊಸ ಸಂಘಟನೆ ಕಟ್ಟಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಕರಾವಳಿ ಭಾಗದ ಯುವಜನತೆಯ ಪಾಲಿನ ಶಕ್ತಿಯಾಗಿ ಯುವ ಶಕ್ತಿಯ ಕಿಚ್ಚಿನ ನಾಯಕನಾಗಿ ಹೊರ ಹೊಮ್ಮುತ್ತಿದ್ದಾರೆ. ಭರ್ಜರಿ ಗೆಲುವು ಪಡೆದ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಮತ್ತು ನಿಡ್ಪಳ್ಳಿಯಲ್ಲಿ ವಿರೋಚಿತ ಹೋರಾಟ ನಡೆಸಿ ಸಣ್ಣ ಅಂತರದಲ್ಲಿ ಸೋಲು ಕಂಡ ಜಗನ್ನಾಥ ರೈ ಕೊಳಂಬೆತ್ತಿಮಾರುರವರಿಗೆ ಪುತ್ತಿಲ ಅವರ ಸಂಘಟನೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಭರ್ಜರಿ ಜಯದ ಬಳಿಕ ಪುತ್ತಿಲರವರು ಪುತ್ತೂರು ಮಹಾಲಿಂಗೇಶ್ವರ ದೇವರ ಆಶೀರ್ವಾದ ಪಡೆದರು. ಇದರ ಜೊತೆಗೆ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಅವರ ಗೆಲುವನ್ನು ಪುತ್ತೂರಿನಲ್ಲಿ(Puttur )ಭೀಕರವಾಗಿ ಹತ್ಯೆಯಾದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಸ್ಮರಣಾರ್ಥವಾಗಿ ಸಮರ್ಪಿಸಲಾಗಿದೆ.

Leave A Reply

Your email address will not be published.