Uttar Pradesh: ಬಿಜೆಪಿ ನಾಯಕನನ್ನು ಹಾಡಹಗಲೇ ದಾರಿಯಲ್ಲಿ ಅಟ್ಟಾಡಿಸಿಕೊಂಡು, ಕೋಲುಗಳಿಂದ ಹೊಡೆದ ತಂಡ!! ವೀಡಿಯೋ ವೈರಲ್!?

latest news Uttar Pradesh team beat the BJP leader with sticks on the way

Uttar Pradesh: ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಲಡ್ಪುರದ ಕಸ್ನಾ ಎಂಬಲ್ಲಿ ಹಾಡಹಗಲೇ ಜನನಿಬಿಡ ಗುಂಪೊಂದು ಬಿಜೆಪಿ ನಾಯಕನನ್ನು(BJP Leader) ಅಮಾನುಷವಾಗಿ ಥಳಿಸಿರುವ ಘಟನೆ ವರದಿಯಾಗಿದೆ.

ಹಲ್ಲೆಗೆ ಒಳಗಾದ ಬಿಜೆಪಿ ನಾಯಕನನ್ನು ರಾಹುಲ್ ಪಂಡಿತ್ ಎಂದು ಗುರುತಿಸಲಾಗಿದ್ದು, ಘಟನೆಯ ವಿಡಿಯೋ(Video)ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ರಾಹುಲ್ ಪಂಡಿತ್ ಮೇಲಿನ ಹಲ್ಲೆ ಪ್ರಕರಣ ವೈರಲ್ ಆಗುತ್ತಿದ್ದಂತೆ ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಗಹನವಾದ ಚರ್ಚೆಗಳು ನಡೆಯುತ್ತಿವೆ.ಆಡಳಿತ ಪಕ್ಷದ ನಾಯಕನ ಮೇಲೆಯೆ ಈ ಹಾಡಹಗಲೇ ಈ ರೀತಿ ಹಲ್ಲೆ ನಡೆದರೆ ಸಾರ್ವಜನಿಕರ ಗತಿಯೇನು ಎಂದು ನೆಟ್ಟಿಗರು ಕಿಡಿ ಕಾರಿ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಪೊಲೀಸರ ಮಾಹಿತಿ ಅನುಸಾರ,ರಾಹುಲ್ ಪಂಡಿತ್ ಹಾಗೂ ಗುಂಪಿನ ನಡುವೆ ವಿಚಾರವೊಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ಹೋದ ಪರಿಣಾಮ ಹಲ್ಲೆ ನಡೆದಿದೆ ಎನ್ನಲಾಗಿದೆ. ಆದರೆ, ಯಾವ ಕಾರಣಕ್ಕೆ ಗಲಾಟೆಯಾಯಿತು ಎಂಬ ವಿಚಾರ ಬಯಲಾಗಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.ಈ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

Leave A Reply

Your email address will not be published.