Income tax return filing:ಗರಿಷ್ಠ ತೆರಿಗೆ ಪಾವತಿಯಲ್ಲಿ ಇವರ ಹೆಸರು ಫಸ್ಟ್! ಅಂಬಾನಿ, ಅದಾನಿ ಅಲ್ಲ‌…ಮತ್ಯಾರು ಆ ಸಿರಿವಂತ?

Income tax return filing: ಎಲ್ಲರಿಗೂ ಗೊತ್ತಿರುವ ಹಾಗೆ 2023ರ ಜುಲೈ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಆನ್‌ಲೈನ್‌ ಮೂಲಕ ಆದಾಯ ತೆರಿಗೆ ಐಟಿಆರ್‌ ರಿಟರ್ನ್‌ ಸಲ್ಲಿಕೆಗೆ( Income tax return filing)ಜುಲೈ 31 ಕೊನೆಯ ದಿನಾಂಕವಾಗಿದೆ. ಹೀಗಾಗಿ, ಕೊನೆಯ ಕ್ಷಣದಲ್ಲಿ ಅವಸರ ಅವಸರವಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದರೆ ತಪ್ಪುಗಳಾಗುವ ಸಂಭವ ಹೆಚ್ಚು. ಹೀಗಾಗಿ ಆದಷ್ಟು ಬೇಗ ಐಟಿಆರ್‌ ರಿಟರ್ನ್‌ ಸಲ್ಲಿಸುವುದು ಉತ್ತಮ. ಈ ನಡುವೆ, ಹೆಚ್ಚಿನವರಿಗೆ ಇದೊಂದು ಸಂದೇಹ ಖಂಡಿತ ಇರುವುದು ಸಹಜ.ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವವರು ಯಾರು?

 

ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವವರು ಯಾರು ಎಂದು ಚರ್ಚೆ ಮಾಡಿದಾಗ ದೇಶದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2022, (Hurun Global Rich List 2022) 2,557 ಕಂಪನಿಗಳು ಮತ್ತು 69 ದೇಶಗಳ 3,381 ಬಿಲಿಯನೇರ್‌ಗಳ ನಡುವೆ ಮೊದಲ ಹತ್ತರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾದ ಮುಖೇಶ್ ಅಂಬಾನಿ ಇಲ್ಲವೇ ಅದಾನಿ ಅಥವಾ ಟಾಟಾ ಎಂದು ನೀವೇನಾದರೂ ಅಂದುಕೊಂಡಿದ್ದೀರಿ ಎಂದಾದರೆ, ಖಂಡಿತ ನಿಮ್ಮ ಊಹೆ ತಪ್ಪು ಎಂದೇ ಅರ್ಥ!! ಅಂದರೆ, ಇವರಿಬ್ಬರಿಗಿಂತಲೂ ಹೆಚ್ಚಾಗಿ ತೆರಿಗೆ ಕಟ್ಟುವವರು ಇದ್ದಾರೆ ಎಂದರೆ ಎಲ್ಲರಿಗು ಅಚ್ಚರಿ ಆಗುವುದು ಸಹಜ!! ಯಾರು ಈ ವ್ಯಕ್ತಿ ಊಹಿಸಬಲ್ಲಿರಾ?

 

ಕಾರ್ಪೊರೇಟ್ ಗಣ್ಯರಿಗೆ ಹೋಲಿಕೆ ಮಾಡಿದರೆ ಇತರ ಹಲವು ವಲಯಗಳು ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡುತ್ತವೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಅನುಸಾರ, ಅದಾನಿ – ಮುಖೇಶ್ ಅಂಬಾನಿ , ಟಾಟಾ ಅವರಿಗಿಂತ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವುದು 2021-22ರ ಆರ್ಥಿಕ ವರ್ಷದಲ್ಲಿ ನಟ ಅಕ್ಷಯ್ ಕುಮಾರ್ ಎನ್ನಲಾಗಿದೆ. ಹೌದು!! ಕಳೆದ ವರ್ಷ ಅಕ್ಷಯ್ 29.5 ಕೋಟಿ ರೂಪಾಯಿ ಗರಿಷ್ಠ ತೆರಿಗೆ ಪಾವತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್‌ ನಲ್ಲಿ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅಕ್ಷಯ್ ಅವರ ಆ ವರ್ಷದ ಅವರ ಗಳಿಕೆ 486 ಕೋಟಿ ರೂಪಾಯಿ ಎನ್ನಲಾಗಿದೆ.

 

ಇದರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರ ಗಳಿಕೆಯ ಇನ್ನಿತರ ಮೂಲಗಳ ಕಡೆಗೆ ಗಮನ ಹರಿಸಿದರೆ, ನಟ ಅಕ್ಷಯ್ ಕುಮಾರ್ ಎಲ್ಲರಿಗೂ ಗೊತ್ತಿರುವ ಹಾಗೆ ಅನೇಕ ಬ್ರಾಂಡ್ ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ತಮ್ಮದೇ ಆದ ಖಾಸಗೀ ನಿರ್ಮಾಣ ಸಂಸ್ಥೆ ಹೊಂದಿರುವ ಜೊತೆಗೆ ಕ್ರೀಡಾ ತಂಡವನ್ನು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಹೆಗ್ಗಳಿಕೆ ಪಡೆದಿದ್ದಾರೆ. ಹೀಗಾಗಿ, ಭಾರತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಲ್ಲಿಸುವವರ ಪಟ್ಟಿಯಲ್ಲಿ ಅಕ್ಷಯ್‌ ಟಾಪ್ ಲಿಸ್ಟಲ್ಲಿ ಅದರಲ್ಲೂ ಕೂಡ ಮೊದಲ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ತೆರಿಗೆದಾರ ಅಕ್ಷಯ್ ಕುಮಾರ್ಗೆ ‘ಸಮ್ಮಾನ್ ಪತ್ರ’ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.

Leave A Reply

Your email address will not be published.