Different Love Story: ಆಂಟಿಯೋರ್ವಳ ಜೊತೆ ಯುವತಿಯ ಪ್ರೀತಿ, ಪ್ರೇಮ, ಪ್ರಣಯ…ಆಂಟಿಗಾಗಿ ಗಂಡನನ್ನು ಬಿಟ್ಟು ಯುವತಿ ಎಸ್ಕೇಪ್!!!

Different Love Story: ಪ್ರೀತಿ (Love )ಕುರುಡು ಎಂಬ ಮಾತಿನಂತೆ ಪ್ರೀತಿಸಿ ಮದುವೆಯಾಗುವ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಪ್ರೀತಿಸಿ ಮನೆಯವರ ವಿರೋಧದ ನಡುವೆ ಜೀವನ ನಡೆಸಿದ ಅದೆಷ್ಟೋ ಜೀವಂತ ನಿದರ್ಶನ ನಮ್ಮ ಕಣ್ಣ ಮುಂದೆ ಇದೆ. ಆದರೆ,ಉತ್ತರ ಪ್ರದೇಶದ(Uttar Pradesh)ತಾಜ್‌ನಗರಿ ಎಂಬಲ್ಲಿ ನಡೆದ ಘಟನೆ ಮಾತ್ರ ನಿಮ್ಮ ಊಹೆಗೂ ಮೀರಿದ್ದು!! ಇದೊಂದು ವಿಚಿತ್ರ ಪ್ರೇಮ್ ಕಹಾನಿ!! ಹೌದು!! ಪಕ್ಕದ ಮನೆ ಆಂಟಿ ಯುವತಿಯ ಡಿಫರೆಂಟ್ ಲವ್ ಸ್ಟೋರಿ.

 

ಉತ್ತರ ಪ್ರದೇಶದ ತಾಜ್ನಗರಿಯಲ್ಲಿ ನಗರದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದ್ದು,ವಿವಾಹಿತ ಮಹಿಳೆಯೊಬ್ಬಳು ಪಕ್ಕದ ಮನೆ ಯುವತಿಯೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.ಪೊಲೀಸರ ಮಾಹಿತಿಯ ಪ್ರಕಾರ, ಇಬ್ಬರ ನಡುವೆ ಮೊಬೈಲ್(Mobile Phone)ಫೋನ್‌ ಮೂಲಕ( Call )ಸಂಭಾಷಣೆ ನಡೆಯುತ್ತಿತ್ತು. ದಿನಂಪ್ರತಿ ಕನಿಷ್ಠ ಎಂದರು ಏಳರಿಂದ ಎಂಟು ಗಂಟೆಗಳವರೆಗೆ ಫೋನ್ ಮೂಲಕ ಸಂಭಾಷಣೆ ನಡೆಯುತ್ತಿತ್ತಂತೆ. ಈ ನಡುವೆ, ಪಕ್ಕದ ಮನೆಯ ಯುವತಿ ಮತ್ತು ವಿವಾಹಿತ ಮಹಿಳೆ ಇದ್ದಕಿದ್ದಂತೆ ನಾಪತ್ತೆ ಆಗಿ ಬಿಟ್ಟಿದ್ದಾರೆ. ಪತಿಯೊಂದಿಗೆ ಮಾರುಕಟ್ಟೆಗೆ ತೆರಳಿದ್ದ ವಿವಾಹಿತ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದರಿಂದ ಚಿಂತಿತನಾದ ಪತಿ ಪತ್ನಿ ಕಾಣೆಯಾಗಿರುವ ಕುರಿತಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

 

ಯುವತಿಯ ನಾಪತ್ತೆ( Missing Case)ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ವಿವಾಹಿತ ಮಹಿಳೆಯ ಮೊಬೈಲ್ ಫೋನ್‌ನ ಕರೆ ವಿವರಗಳನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ನೆರೆಯ ಹುಡುಗಿಯ ನಡುವಿನ ಪ್ರೇಮ ಪ್ರಕರಣ ಬಯಲಾಗಿದೆ.ಆ ಬಳಿಕ ತನಿಖೆ ವೇಳೆ ನಿಖರವಾದ ಕಣ್ಗಾವಲು ಮತ್ತು ಲೀಡ್‌ಗಳ ಪರೀಕ್ಷೆ ಮುಖಾಂತರ ವಿವಾಹಿತ ಮಹಿಳೆ ಮತ್ತು ಹುಡುಗಿಯ ಪತ್ತೆ ಕಾರ್ಯ ನಡೆದು ಇವರಿಬ್ಬರೂ ಕೂಡ ದೆಹಲಿಯಲ್ಲಿರುವ ಮಾಹಿತಿ ಕಲೆ ಹಾಕಿದ್ದಾರೆ.ಪೊಲೀಸರ ಪ್ರಕಾರ,ಇವರಿಬ್ಬರ ನಡುವೆ ಸ್ನೇಹ ಅದೆಷ್ಟು ಗಟ್ಟಿಯಾಗಿತ್ತು ಎಂದರೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸುವ ಮಟ್ಟಿಗೆ ಸಂಬಂಧ ಗಟ್ಟಿಯಾಗಿತ್ತು.

 

ಪೊಲೀಸರು ವಿವಾಹಿತ ಮಹಿಳೆ ಮತ್ತು ಯುವತಿಯನ್ನು ರಕ್ಷಿಸಿದ್ದು, ಪ್ರಾಥಮಿಕ ವಿಚಾರಣೆಯ ವೇಳೆ ವಿವಾಹಿತ ಮಹಿಳೆ ಮತ್ತು ಯುವತಿ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟಿರುವ ವಿಚಾರ ತಿಳಿಸಿದ್ದು,ಆದರೆ, ತೀವ್ರ ವಿಚಾರಣೆಗೊಳಪಡಿಸಿದ ಸಂದರ್ಭ ಇಬ್ಬರು ಪೊಲೀಸರಿಗೆ ಅಸಲಿ ಸತ್ಯವನ್ನು ತಿಳಿಸಿದ್ದಾರೆ. ನಂತರ ನಡೆದ ಕೌನ್ಸೆಲಿಂಗ್ ಸೆಷನ್‌ ಸಂದರ್ಭ ವಿವಾಹಿತ ಮಹಿಳೆ ಮತ್ತು ಯುವತಿ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.ಇಬ್ಬರು ತಮ್ಮ ತಪ್ಪಿನಿಂದ ಕುಟುಂಬಗಳಿಗೆ ಉಂಟಾದ ನೋವನ್ನು ಗಮನಿಸಿ ತಮ್ಮ ನಡೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.