Instagram love: ಇನ್‌ಸ್ಟ್ರಾಗಾಂ ನಲ್ಲಿ ಪರಿಚಯದಿಂದ ಪ್ರೇಮ! ಸುಳ್ಳು ಹೇಳಿ ಪ್ರಿಯಕರನ ಭೇಟಿಗೆ ಪಾಕಿಸ್ತಾನಕ್ಕೆ ಹೊರಡಲು ಸಿದ್ಧಳಾದ 17ರ ಬಾಲಕಿ! ಈಗ ಈಕೆ ಎಲ್ಲಿದ್ದಾಳೆ?

A 17-year-old Indian girl is ready to go to Pakistan to meet her lover

Instagram love: ಇತ್ತೀಚೆಗೆ ಗಡಿದಾಟುವಂತಹ ಪ್ರೇಮ ಕಥೆಗಳು ಹೆಚ್ಚಿವೆ. ಒಂದು ಸೀಮಾ, ಸಚಿನ್‌ ಲವ್‌ಸ್ಟೋರಿ ಆದರೆ, ಇತ್ತ ಕಡೆ ಅಂಜು-ನಸ್ರುಲ್ಲ ಅವರ ಲವ್‌ ಸ್ಟೋರಿ(Instagram love)ಮುಂದುವರಿಯುತ್ತಲೇ ಇದೆ. ಇದೀಗ ಇದಕ್ಕೆ ಹೊಸ ಸೇರ್ಪಡೆಯೊಂದು ಆಗಿದೆ. ಅದುವೇ ರಾಜಸ್ಥಾನದ 17 ವರ್ಷದ ಅಪ್ರಾಪ್ತ ಬಾಲಕಿಯ ಪ್ರೇಮ ಕಥೆ. ಈಕೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ತನ್ನ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನದ ಸಿಕರ್‌ ಜಿಲ್ಲೆಯ ಶ್ರೀಮಾಧೋಪುರ್‌ ಪ್ರದೇಶದ ನಿವಾಸಿಯಗಿರುವ ಬಾಲಕಿ ತನ್ನ ಪ್ರಿಯತಮನ ಭೇಟಿಗೆ ದೇಶ ಬಿಟ್ಟು ಹೋಗಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಈ ಅಪ್ರಾಪ್ತ ವಯಸ್ಸಿನ ಬಾಲಕಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಬಂದಿದ್ದಾಳೆ. ತನ್ನ ಇಬ್ಬರು ಸ್ನೇಹಿತರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಈ ಬಾಲಕಿ, ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಕ್ಕೆ ಟಿಕೆಟ್‌ ಕೇಳಿದ್ದಾಳೆ. ಆದರೆ ಯಾಕೋ ಈಕೆಯ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ ವಿಚಾರಿಸಿದಾಗ ಸುಳ್ಳು ಹೇಳಿ ಟಿಕೆಟ್‌ ಪಡೆಯಲು ಪ್ರಯತ್ನ ಪಟ್ಟಿರುವುದು ಗೊತ್ತಾಗಿದೆ. ನಂತರ ವಿಚಾರಣೆ ನಡೆಸಲು ಅಧಿಕಾರಿಗಳಿಗೆ ಹೇಳಲಾಗಿದ್ದು, ಈ ಸಂದರ್ಭದಲ್ಲಿ ಈ ಲವ್‌ ವಿಷಯ ಹೊರಗೆ ಬಂದಿದೆ.

ಈಕೆ ತಾನು ಪಾಕಿಸ್ತಾನ ಪ್ರಜರ. ಮೂರು ವರ್ಷದ ಹಿಂದೆ ಸಂಬಂಧಿಕರೊಂದಿಗೆ ಭಾರತಕ್ಕೆ ಬಂದಿದೆ. ಈಗ ವಾಪಸ್‌ ಹೋಗಬೇಕು ಎಂದು ಹೇಳಿದ್ದಾಳೆ. ಆದರೆ ದಾಖಲೆ ಪರಿಶೀಲನೆ ಮಾಡಿದಾಗ ಈಕೆ ಸುಳ್ಳು ಹೇಳಿರುವುದು ಕಂಡು ಬಂದಿದೆ. ಲಾಹೋರ್‌ ಸಮೀಪದ ಇಸ್ಲಾಮಾಬಾದ್‌ ನನ್ನ ಊರು ಎಂದು ರಾಜಸ್ಥಾನದ ಅಪ್ರಾಪ್ತ ಬಾಲಕಿ ಅಧಿಕಾರಿಗಳಲ್ಲಿ ಹೇಳಿದ್ದಳು.

ಆದರೆ ನಿಲ್ದಾಣದಲ್ಲಿ ಮಹಿಳಾ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಯುವತಿ ತಾನು ರಾಜಸ್ಥಾನದ ಸಿಕರ್‌ ಜಿಲ್ಲೆಯವಳು ಎಂದು ಗೊತ್ತಾಗಿದೆ. ಕೂಡಲೇ ಜೈಪುರ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರಿಗೆ ಬಾಲಕಿಯನ್ನು ವಶಕ್ಕೆ ನೀಡಿದ್ದಾರೆ.

Leave A Reply

Your email address will not be published.