Travel: ಈ ನಗರದಲ್ಲಿ ನೀವು ವಾಸಿಸಲು ಒಂದು ರೂಪಾಯಿ ಖರ್ಚು ಮಾಡಬೇಕಿಲ್ಲ! ಭಾರತದ ಈ ನಗರದಲ್ಲಿ ಯಾವುದೇ ಸರಕಾರ ಕೂಡಾ ಇಲ್ಲ!!!

Intresting fact do not have to spend a single rupee to live in this city in india

Travel:ಭಾರತವು ಅನೇಕ ವೈವಿಧ್ಯತೆಯಿಂದ ಕೂಡಿದ ದೇಶ. ಅನೇಕ ಧರ್ಮ, ಜಾತಿ, ಭಾಷೆಗಳನ್ನು ಮಾತನಾಡುವ ದೇಶ. ಈ ಎಲ್ಲಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸರಕಾರ ಮತ್ತು ಆಡಳಿತ ಎರಡೂ ಅಗತ್ಯವಿದೆ. ಆದರೆ ಇಲ್ಲೊಂದು ನಗರವಿದೆ ಇಲ್ಲಿ ಸರಕಾರವಿಲ್ಲ. ಈ ನಗರ ಯಾವುದೇ ಹಣವಿಲ್ಲದೆ ತನ್ನ ಕೆಲಸ ಮಾಡುತ್ತಿದೆ ಎಂದರೆ ನೀವು ನಂಬುತ್ತೀರಾ?

ಇಂತಹ ಒಂದು ನಗರ ಇರುವುದು ಭಾರತದಲ್ಲಿ ಎಂದರೆ ನಂಬುತ್ತೀರಾ? ಇಲ್ಲಿಯ ಜನರು ಯಾವುದೇ ಸರಕಾರವಿಲ್ಲದೆ ನಡೆಯುತ್ತಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಇಲ್ಲಿ ವಾಸಿಸಲು ಮತ್ತು ತಿನ್ನಲು ಸಹ ಯಾವುದೇ ರೀತಿಯ ಹಣದ ಅಗತ್ಯವಿಲ್ಲ. ಬನ್ನಿ ಇದರ ಬಗ್ಗೆ ವಿವರವಾಗಿ ತಿಳಿಯೋಣ.

ಅಲ್ಲಿ ಸರ್ಕಾರವಿಲ್ಲ, ಧರ್ಮವಿಲ್ಲ ಮತ್ತು ಹಣವಿಲ್ಲ, ಈ ನಗರದ ಹೆಸರು ‘ಆರೋವಿಲ್ಲೆ’. ಈ ನಗರವು ಚೆನ್ನೈನಿಂದ 150 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿದೆ ಈ ನಗರವನ್ನು ‘ಸಿಟಿ ಆಫ್ ಡಾನ್’ ‘ಸನ್ ಆಫ್ ಡಾನ್’ (Sun Of Don) ಎಂದೂ ಕರೆಯುತ್ತಾರೆ. ವಾಸ್ತವವಾಗಿ, ಈ ನಗರವನ್ನು ಸ್ಥಾಪಿಸುವುದರ ಹಿಂದಿನ ಉದ್ದೇಶವೆಂದರೆ ಎಲ್ಲರೂ ಇಲ್ಲಿ ಯಾವುದೇ ತಾರತಮ್ಯ ಮತ್ತು ಅಸ್ಪೃಶ್ಯತೆ ಇಲ್ಲದೆ ಬದುಕಬೇಕೆಂದು.

ಮಾಹಿತಿಯ ಪ್ರಕಾರ, ಆರೋವಿಲ್ಲೆ ನಗರವನ್ನು 1968 ರಲ್ಲಿ ಮೀರಾ ಆಲ್ಫಾಸ್ ಸ್ಥಾಪನೆ ಮಾಡಿದರು. ಮೀರಾ ಅಲ್ಫಾಜೋ 1914 ರಲ್ಲಿ ಪುದುಚೇರಿಯಲ್ಲಿ ಶ್ರೀ ಅರಬಿಂದೋ ಅವರ ಆಧ್ಯಾತ್ಮಿಕ ಏಕಾಂತಕ್ಕೆ ಬಂದಿದ್ದರು. ಅನಂತರ ಅವರು ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಜಪಾನ್‌ಗೆ ಹಿಂತಿರುಗಿದರು. ಆದರೆ 1920 ರಲ್ಲಿ ಮತ್ತೆ ಹಿಂದಿರುಗಿದ ಅವರು, 1924 ರಲ್ಲಿ ಶ್ರೀ ಅರಬಿಂದೋ ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡರು.

ಆರೋವಿಲ್ಲೆ ನಗರವನ್ನು ಯುನಿವರ್ಸಲ್ ಸಿಟಿ ಎಂದು ಕರೆಯಲಾಗುತ್ತಿತ್ತು, ಅಂದರೆ ಇಲ್ಲಿ ಯಾರು ಬೇಕಾದರೂ ಬಂದು ನೆಲೆಸಬಹುದು. ಮಾಹಿತಿ ಪ್ರಕಾರ ಇಲ್ಲಿ ಸುಮಾರು 50 ದೇಶಗಳ ಜನರು ವಾಸಿಸುತ್ತಿದ್ದು, ಸುಮಾರು 24000 ಜನಸಂಖ್ಯೆ ಇದೆ, ಇಲ್ಲಿ ವಾಸಿಸಲು ಒಂದೇ ಒಂದು ಷರತ್ತು ಇದೆ, ನೀವು ಇಲ್ಲಿ ಸೇವಕರಾಗಿ ಬದುಕಬೇಕು.

ಇಲ್ಲಿ ಯಾವುದೇ ಧರ್ಮವಿಲ್ಲ, ಯಾವುದೇ ದೇವತೆಯನ್ನು ಪೂಜಿಸುವುದಿಲ್ಲ. ಇಲ್ಲಿ ಒಂದೇ ಒಂದು ದೇವಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಜನರು ಧ್ಯಾನ ಮತ್ತು ಯೋಗದಂತಹ ಚಟುವಟಿಕೆಗಳನ್ನು ಮಾಡುತ್ತಾರೆ.

Leave A Reply

Your email address will not be published.