Bengaluru: ತಾಯಿ ಜೊತೆ ಅನೈತಿಕ ಸಂಬಂಧ, ಭೀಕರವಾಗಿ ಹತ್ಯೆ ಮಾಡಿದ ಪುತ್ರ

Karnataka crime man kills cook for speaking intimately with his mother in Bengaluru

Bengaluru: ತನ್ನ ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಕಾರಣಕ್ಕಾಗಿ ಪುತ್ರನೋರ್ವ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನ( Bengaluru) ರಾಜಾಜಿನಗರದ ಆರನೇ ಬ್ಲಾಕ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ರವಿ ಭಂಡಾರಿ (44ವರ್ಷ) ಸಾವು ಕಂಡಿರುವ ವ್ಯಕ್ತಿ.

ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ತನ್ನ ತಾಯಿಯಾದ ಪದ್ಮಾವತಿ ಎನ್ನುವವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಅನುಮಾನದ ಮೇಲೆ ಆರೋಪಿ ಕೊಲೆ ಮಾಡಿದ್ದಾನೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಭಂಡಾರಿ ಪಿಜಿಯೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಇಲ್ಲೇ ರಾಹುಲ್‌ನ ತಾಯಿ ಪದ್ಮಾವತಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಪದ್ಮಾವತಿ ಅವರ ಮನೆಯಲ್ಲಿ ರವಿ ಭಂಡಾರಿ ಅವರ ಹತ್ಯೆಯಾಗಿದೆ.

ನಿನ್ನ ಜೊತೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡ ಆರೋಪಿ ರಾಹುಲ್‌ ನಂತರ ಹತ್ಯೆ ಮಾಡಿದ್ದಾನೆ. ಈ ಸಮಯದಲ್ಲಿ ಪದ್ಮಾವತಿ ಅವರು ಪಿಜಿಯಲ್ಲಿ ಇದ್ದರೆನ್ನಲಾಗಿದೆ. ಪಿಜಿ ಕೆಲಸ ಮುಗಿಸಿ ಮನೆಗೆ ಬಂದಾಗ ಪದ್ಮಾವತಿ ಅವರು ಹೆದರಿ ಪೊಲೀಸರಿಗೆ ಫೋನ್‌ ಮಾಡಿದರೆನ್ನಲಾಗಿದೆ. ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.

Leave A Reply

Your email address will not be published.