ರಜೆಯ ಗಮತ್ತು ಸಾವಿನಲ್ಲಿ ಅಂತ್ಯ! ಜೋಕಾಲಿ ಆಡಲೆಂದು ಬಿಗಿದ ಸೀರೆಯಿಂದ ಸಾವು ಕಂಡ ಬಾಲಕಿ! ಪೋಷಕರ ಆಕ್ರಂದನ

Latest Karnataka death news a minor girl who lost her life while playing jokali in hassan

ಜೋಕಾಲಿ ಆಡಲೆಂದು ಹೋದ ಬಾಲಕಿಯೋರ್ವಳು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಸಮೀಪದ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ.

ಪೊಷಕರಿಗೆ ಒಬ್ಬಳೇ ಮಗಳಾಗಿದ್ದ ಸಾನಿತಾ (9ವರ್ಷ) ಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸವರಾಜು-ಬೇಬಿ ದಂಪತಿಯ ಒಬ್ಬಳೇ ಪುತ್ರಿಯಾಗಿದ್ದ ಈಕೆ ನಾಲ್ಕನೇ ತರಗತಿ ಓದುತ್ತಿದ್ದು, ಇಂದು ಶಾಲೆಗೆ ರಜೆ ಇದ್ದ ಕಾರಣ ಸೀರೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಸಾನಿತಾ ಕುತ್ತಿಗೆಗೆ ಸೀರೆ ಬಿಗಿದಿದೆ. ಕಾರಣ ಉಸಿರುಕಟ್ಟಿ ಮೃತಪಟ್ಟಿದ್ದಾಳೆ.

ಇದೇನು ಮೊದಲ ಸಲ ಅಲ್ಲ ಈಕೆ ಸೀರೆ ಬಳಸಿ ಜೋಕಾಲಿ ಆಡುತ್ತಿರುವುದು. ಆದರೆ ಈ ಬಾರಿ ವಿಧಿ ಮಾತ್ರ ತನ್ನ ಕರಾಳ ರೂಪ ತೋರಿಸಿಬಿಟ್ಟಿತು. ಈ ಘಟನೆ ಸಂಬಂಧ ಯಸಳೂರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.