kerala: ತನ್ನದೇ ಕರುಳಬಳ್ಳಿಯ ಮೂಗು, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಂದ ವಿಧವೆ ತಾಯಿ! ಹೂತಿಟ್ಟ ಶವ ಎತ್ತಿ ಕೊಂಡೋದ ನಾಯಿಗಳು, ನಂತರ ಆದದ್ದೇನು?

Latest national crime news mother killed her own child in kerala

kerala: ತನ್ನದೇ ಕರುಳಬಳ್ಳಿಯನ್ನು ಕೊಲೆಗೈದು ಆ ಪುಟ್ಟ ಮಗುವಿನ ಮೃತದೇಹವನ್ನು ಮನೆಯ ಹಿಂದೆ ಹೂತಿಟ್ಟ ತಾಯಿಯೊಬ್ಬಳ ಆತಂಕಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ (kerala) ತಿರುವನಂತಪುರದಲ್ಲಿ ನಡೆದಿದೆ. 40 ವರ್ಷದ ಮಹಿಳೆಯೇ ಈ ಕೃತ್ಯದ ಆರೋಪಿ. ಈಕೆಯ ಹೆಸರು ಜೂಲಿ ಎಂದು ಗುರುತಿಸಲಾಗಿದೆ.

ತನ್ನ ಮನೆಯ ಹಿಂಭಾಗದ ಸ್ನಾನಗೃಹದಲ್ಲಿ ಹೆರಿಗೆ ಮಾಡಿಸಿಕೊಂಡ ಈಕೆ ಮಗುವಿನ ಬಾಯಿ, ಮೂಗನ್ನು ಮುಚ್ಚಿ, ಕೊಂದಿದ್ದಾಳೆ. ಈ ರೀತಿ ಮಾಡಿದ್ದರಿಂದ ಮಗುವಿನ ಉಸಿರುಗಟ್ಟಿ ಮಗು ಸಾವು ಹೊಂದಿದೆ. ನಂತರ ಮನೆಯ ಸಮೀಪ ಮಗುವಿನ ಶವ ಹೂತು ಹಾಕಿದ್ದಾಳೆ.

ಮಗು ಹೂತು ಹಾಕಿದ್ದ ಸ್ಥಳಕ್ಕೆ ಜು.18ಕ್ಕೆ ಹೂತು ಹಾಕಿದ್ದ ಈಕೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಮಗುವಿನ ದೇಹ ಕಾಣೆಯಾಗಿದೆ. ಇದರಿಂದ ಗಾಬರಿಗೊಂಡ ಈಕೆ ಸುಮ್ಮನಿದ್ದಳು. ಆದರೆ ಬೀದಿ ನಾಯಿಗಳು ಮಗುವಿನ ಮೃತದೇಹವನ್ನು ಅಲ್ಲಿಂದ ಎಳೆದಾಡಿ ತಗೊಂಡು ಹೋಗಿದ್ದು, ಬೀಚ್‌ನಲ್ಲಿ ತಿನ್ನುತ್ತಿರುವಾಗ ಸ್ಥಳೀಯರು ಗಮನಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಮೊದಲು ಮಗು ನೀರಿನಲ್ಲಿ ಮುಳುಗಿ ಸತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಅನಂತರ ಪೊಲೀಸರಿಗೆ ಜೂಲಿಯ ಮೇಲೆ ಸಂಶಯ ಬಂದಿದೆ. ಆರಂಭದಲ್ಲಿ ಆಕೆ ಆರೋಪ ನಿರಾಕರಿಸಿದರೂ, ನಂತರ ಪೊಲೀಸರು ವೈಜ್ಞಾನಿಕ ಪುರಾವೆ ಪ್ರಸ್ತುತಪಡಿಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಜೂಲಿ ವಿಧವೆ. ಆದರೂ ಹೆರಿಗೆಯಾಗಿತ್ತು. ಇದರಿಂದ ಅವಮಾನಕ್ಕೆ ಹೆದರಿ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

Leave A Reply

Your email address will not be published.