Siwan: ಧರ್ಮಗುರುವಿನಿಂದ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ! ವೀಡಿಯೋ ವೈರಲ್‌

Latest national news maulavi Bihar siwan Harrasment minor girl

Siwan: ವಿದ್ಯಾರ್ಥಿನಿಯೊಂದಿಗೆ ಧರ್ಮಗುರುವೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಧರ್ಮಗುರುವೊಬ್ಬರು ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆಯಲ್ಲಿ ತೊಡಗಿರುವುದು ಕಾಣುತ್ತಿದೆ. ಈ ಘಟನೆ ಬಿಹಾರದ ಸಿವಾನ್‌(Siwan) ಜಿಲ್ಲೆಯಲ್ಲಿ ನಡೆದಿದೆ.

ಈ ಊರಿನಲ್ಲಿ ಪೀರ್‌ ಬಾಬಾಬ ಸಮಾಧಿಯೊಂದರಲ್ಲಿ ಮೌಲ್ವಿಯೊಬ್ಬರು ಭೂತೋಚ್ಚಾಟನೆಯ ಆಚರಣೆ ಮಾಡುತ್ತಿದ್ದರೆನ್ನಲಾಗಿದೆ. ಹಾಗಾಗಿ ಸುತ್ತಮುತ್ತಲು ವಾಸಿಸುವ ಮಹಿಳೆಯರು, ವಿದ್ಯಾರ್ಥಿನಿಯರು ಇಲ್ಲಿಗೆ ಭೇಟಿ ನೀಡಿದ್ದಾರೆನ್ನಲಾಗಿದೆ.

ಆರೋಪಿಯು ಮುಜಾಫರ್‌ಪುರನ ನಿವಾಸಿಯೆಂದು ಗುರುತಿಸಲಾಗಿದೆ. ಈತ ಹಲವಾರ ಸಮಯಗಳಿಂದ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಕೃತ್ಯ ಮಾಡುತ್ತಿದ್ದ ಎನ್ನಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂದರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ಈ ವೀಡಿಯೋ ವೈರಲ್‌ ಆದ ನಂತರ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

Leave A Reply

Your email address will not be published.