Physical relationship tips: ಮೂಡ್‌ ಬಂದಾಗೆಲ್ಲಾ ಸಂಭೋಗನಾ? ಲೈಂಗಿಕ ಕ್ರಿಯೆ ಯಾವಾಗ ಮಾಡಬಾರದು ಎಂಬುವುದು ನಿಮಗೆ ಗೊತ್ತೇ? ಮೊದಲು ತಿಳ್ಕೊಳ್ಳಿ!!!

Lifestyle health news physical relationship tips

physical relationship tips: ಮಾನವನಿಗೆ ಊಟ ಹೇಗೆ ಮುಖ್ಯವೋ ಹಾಗೇ ಲೈಂಗಿಕ ಸಂಭೋಗವೂ ಬಹಳ ಮುಖ್ಯ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಎಲ್ಲರಿಗೂ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಅಂದ ಹಾಗೆ ಇಂದು ನಾವಿಲ್ಲಿ ಲೈಂಗಿಕತೆಯ ವಿಷಯದ ಕುರಿತು(physical relationship tips )ಯಾವಾಗ ಮಾಡಬೇಕು, ಯಾವಾಗ ಮಾಡಬಾರದು ಎಂಬುವುದರ ಕುರಿತು ಕಿರು ಮಾಹಿತಿಯನ್ನು ಹೇಳಲಿದ್ದೇವೆ. ಬನ್ನಿ ಅದ್ಯಾವುದು ತಿಳಿಯೋಣ.

ಈ ಲೈಂಗಿಕ ಕ್ರಿಯ ನಡೆಸಬೇಕೆಂದು ಮನಸ್ಸಿಗೆ ಅನಿಸಿದಾಗ ಯಾರೂ ಸಮಯ, ಜಾಗ ಏನೂ ನೋಡಲ್ಲ. ಆದರೆ ಇಲ್ಲಿ ಇದಕ್ಕೆಲ್ಲ ಗಮನ ಕೊಡುವುದು ಮುಖ್ಯ. ಈ ರೀತಿ ಮಾಡುವುದರಿಂದ ನೀವು ಲೈಂಗಿಕತೆಯಲ್ಲಿ ಉತ್ತಮ ಅನುಭವ ಹೊಂದಬಹುದು. ಅಷ್ಟೇ ಅಲ್ಲ ಈ ಅನಾರೋಗ್ಯಕರ ಲೈಂಗಿಕ ಸಂಭೋಗದಿಂದ ಉಂಟಾಗುವ ತೊಡಕುಗಳನ್ನು ಕೂಡಾ ನಿವಾರಿಸಬಹುದು.

ನಿಮಗೆ ಕಾಂಡೋಂ ಬಳಸದೆಯೇ ಲೈಂಗಿಕ ಸಂಭೋಗ ಮಾಡಲು ಇಷ್ಟವಿದ್ದರೆ , ಕೂಡಲೇ ನೀವು ಲೈಂಗಿಕತೆಯಿಂದ ದೂರ ಇದ್ದರೆ ಉತ್ತಮ. ಕಾಂಡೋಮ್‌ಗಳು ಅನಗತ್ಯ ಗರ್ಭಧಾರಣೆ, ಲೈಂಗಿಕತೆಯಿಂದ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ಮಗುವಿಗೆ ಜನ್ಮ ನೀಡಿದ ನಂತರ ಲೈಂಗಿಕತೆಯನ್ನು ಕೆಲವು ತಿಂಗಳುವರೆಗೆ ದೂರು ಇಡುವುದು ಉತ್ತಮ. ಮಗು ಜನನದ ನಂತರ ಒಂದು ತಿಂಗಳು, ಎರಡು ತಿಂಗಳು ಕಾಯಬೇಕೆಂದು ಅನೇಕ ವೈದ್ಯರ ಸಲಹೆಯಾಗಿರುತ್ತದೆ. ಹಾಗಾಗಿ ಸರಿಯಾದ ಅಂತರವನ್ನು ಕಾಪಾಡುವುದು ಉತ್ತಮ.

ಮೂತ್ರನಾಳದ ಸೋಂಕುಗಳೇನಾದರೂ ಇದ್ದಲ್ಲಿ ಮಹಿಳೆಯರು ಅದರಿಂದ ಚೇತರಿಕೆ ಕಂಡುಕೊಳ್ಳುತ್ತಿದ್ದರೆ ಕೆಲವು ದಿನಗಳವರೆಗೆ ಲೈಂಗಿಕತೆಯಿಂದ ದೂರ ಇರಬೇಕು. ಈ ಸಮಯದಲ್ಲಿ ನೀವೇನಾದರೂ ಸಂಭೋಗ ನಡೆಸಿದರೆ ನಿಮ್ಮ ಸಂಗಾತಿಗೂ ಇದು ಬರುವ ಸಾಧ್ಯತೆ ಹೆಚ್ಚು.

ಗರ್ಭಾವಸ್ಥೆಯ ಸಮಯದಲ್ಲಿ ನೀವೇನಾದರೂ ಲೈಂಗಿಕತೆಯನ್ನು ಹೊಂದಲು ಬಯಸಿದರೆ, ವೈದ್ಯಕೀಯ ದೃಷ್ಟಿಯಿಂದ ಯಾವುದೇ ತೊಂದರೆಯಿಲ್ಲ. ಆದರೆ ಅನೇಕ ದಂಪತಿಗಳು ಈ ಸಮಯದಲ್ಲಿ ಸಂಭೋಗವನ್ನು ಇಷ್ಟ ಪಡುತ್ತಾರೆ. ಆದರೆ ಗರ್ಭಕಂಠ, ಜರಾಯು, ಹಾಗೆನೇ ಲೈಂಗಿಕವಾಗಿ ಹರಡುವಂತಹ ರೋಗಗಳ ಬಗ್ಗೆ ನೀವು ತಿಳಿದುಕೊಂಡರೆ ಉತ್ತಮ. ಇವು ಭ್ರೂಣಕ್ಕೆ ಅಪಾಯ ಉಂಟು ಮಾಡಬಹುದು. ಹಾಗಾಗಿ ನೀವು ಈ ವಿಷಯದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.

ಲೈಂಗಿಕ ಸಂಭೋಗವು ಬಿಕಿನಿ ವ್ಯಾಕ್ಸ್‌ ನಂತರ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಜನನಾಂಗಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಬಿಕಿನಿ ವ್ಯಾಕ್ಸ್‌ ಮಾಡಿದ ತಕ್ಷಣವೇ ಸಂಭೋಗಿಸುವುದು ಉತ್ತಮವಲ್ಲ. ಹಾಗಾಗಿ ಬಿಕಿನಿ ವ್ಯಾಕ್ಸ್‌ ಮಾಡಿ ಕನಿಷ್ಠ ಒಂದು ದಿನದ ನಂತರ ಸಂಭೋಗಿಸಬಹುದು.

Leave A Reply

Your email address will not be published.