Annabhagya Yojana: ಅನ್ನಭಾಗ್ಯದ ಹಣ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವೇ? ಕೂಡಲೇ ಈ ಕೆಲಸ ಮಾಡಿ!

Annabhagya money has not been credited to your account then do this

Annabhagya Scheme : ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಬದಲಾಗಿ ಹಣ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ನಡುವೆ ಅನ್ನ ಭಾಗ್ಯ ಯೋಜನೆಯ(Annabhagya Scheme) ಫಲಾನುಭವಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ.

ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ (Ration Card)ವ್ಯವಸ್ಥೆ ಮಾಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ(AnnaBhagya Yojana) ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ (Rice)ಬದಲಿಗೆ ಕೆಜಿಗೆ 34 ರೂಪಾಯಿಯ ಹಾಗೆ ಕುಟುಂಬದ ಸದಸ್ಯರೊಬ್ಬರಿಗೆ 170 ರೂ. ಯಂತೆ ಈಗಾಗಲೇ ಬ್ಯಾಂಕ್ ಖಾತೆಗೆ(Bank Account)ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ನಡುವೆ ಪಡಿತರ ಹಣ ನೀಡುವುದು ತಾತ್ಕಾಲಿಕ ಕ್ರಮವಾಗಿದ್ದು, ಅಕ್ಕಿ ಕೊರತೆ ಸಮಸ್ಯೆ ನೀಗಿದ ನಂತರ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ (DBT) ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ. ಅಂದರೆ ಈ ಹಣವನ್ನು ಅವರ ಆಧಾರ್ ಸಂಖ್ಯೆಗಳಿಗೆ (Aadhaar Number) ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಇದರೊಂದಿಗೆ ಗೃಹಲಕ್ಷ್ಮಿ ಯೋಜನೆಗೂ ಸಹ ಸಾಕಷ್ಟು ಜನರು ಅರ್ಜಿ ಸಲ್ಲಿಕೆ ಮಾಡಿದ್ದು, ಇದಕ್ಕೂ ಕೂಡ ಕಾರ್ಡ್‌ ಕಡ್ಡಾಯವಾಗಿದೆ. ಅನ್ನಭಾಗ್ಯದ ಹಣ ನಿಮಗೆ ಜಮಾ ಆಗಬೇಕಾದರೆ ನೀವು ತಪ್ಪದೇ ಈ ಕೆಲಸ ಮಾಡಲೇಬೇಕು ರೇಷನ್ ಕಾರ್ಡ್ ಗೆ (Ration Card and Aadhaar Card Link)ಆಧಾರ್ ಲಿಂಕ್ ಮಾಡದೆ ಇದ್ದರೆ ಇಲ್ಲವೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ಇದ್ದರೆ ನಿಮ್ಮ ಖಾತೆಗೆ ಹಣ ಜಮೆಯಾಗದು.

ಈ ಬಗ್ಗೆ ಗೊಂದಲಗಳಿದ್ದರೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅನ್ನಭಾಗ್ಯ ಸ್ಕೀಮ್ ಪಡೆಯಲು ತಮ್ಮ ರೇಷನ್ ಕಾರ್ಡ್ ಅರ್ಹವಾಗಿದೆಯೆ ಎಂಬುದನ್ನು ಚೆಕ್ ಮಾಡಬಹುದು. DBT ಕರ್ನಾಟಕ ಆಪ್ ಕೂಡ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ವರ್ಗಾವಣೆ ಆಗಿರುವ ವಿವರವನ್ನು ಚೆಕ್ ಮಾಡಲು ಕೂಡ ಅವಕಾಶವಿದೆ.

ಒಂದು ವೇಳೆ, ಅನ್ನಭಾಗ್ಯದ ಹಣ ಅಕೌಂಟ್ ಗೆ ಬಂದಿಲ್ಲ ಎಂದಾದರೆ ತಪ್ಪದೇ ಈ ಕೆಲಸವನ್ನು ನೀವು ಮಾಡಬೇಕು. ಇಲ್ಲವಾದಲ್ಲಿ ಅಕೌಂಟ್ ಗೆ ಹಣ ಬರುವುದಿಲ್ಲ ಎಂಬುದನ್ನು ಗಮನಿಸಬೇಕು. ಸ್ಟೇಟಸ್ ಚೆಕ್ ಮಾಡುವ ಸಂದರ್ಭ ಕೆಲವರಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅಥವಾ KYC ಅಪ್ಡೇಟ್ ಮಾಡಿಸಬೇಕು ಎನ್ನುವ ಸೂಚನೆ ದೊರೆಯಲಿದೆ. ಈ ಕೆಲಸ ಮಾಡಿಲ್ಲ ಎಂದಾದರೆ ನಿಮಗೆ ಹಣ ಸಿಗೋದು ಡೌಟ್!!

ಈ ಎಲ್ಲಾ ಕೆಲಸ ಮಾಡಿದವರಿಗೆ PAV response not at received ಎಂದು ಕಾಣುತ್ತದೆ. ಈ ರೀತಿ ಬಂದರೆ PAV ಎಂದರೆ Payment adjustment voture ಎಂದರ್ಥ. ಸ್ಟೇಟಸ್ ಚೆಕ್ ಮಾಡುವಾಗ ಈ ರೀತಿ ಬಂದರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ನೀಡಿಲ್ಲ ಎಂಬುದನ್ನು ತಿಳಿಸುತ್ತದೆ. ಈ ರೀತಿ ಬಂದರೆ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು,ಕೆಲವೇ ದಿನಗಳಲ್ಲಿ ಹಣ ವರ್ಗಾವಣೆಯಾಗಲಿದೆ ಎಂಬುದನ್ನು ಗಮನಿಸಬೇಕು.

Leave A Reply

Your email address will not be published.