Marriage: ಫಸ್ಟ್ ನೈಟ್ ನಲ್ಲಿ ದಂಪತಿ ಹಾಲು ಏಕೆ ಕುಡಿತಾರೆ? ಇದರ ಹಿಂದಿದೆ ರೋಚಕ ಕಾರಣ!!!

Interesting news Why is bride and groom drink milk on first night

Marriage: ಮದುವೆ (Marriage)ಹೊಸ ಜೀವನಕ್ಕೆ ಮುನ್ನುಡಿ ಬರೆಯುವವರ ಪಾಲಿಗೆ ಅತ್ಯಂತ ವಿಶಿಷ್ಟ ದಿನ. ಮದುವೆ ಎಂಬ ಆಚರಣೆ ಎರಡು ಜೀವಗಳ ಬೆಸೆಯುವ ಕೊಂಡಿ ಅಷ್ಟೇ ಅಲ್ಲದೇ, ಎರಡು ಕುಟುಂಬಗಳ ನಡುವೆ ಸಾಮರಸ್ಯ ಸೃಷ್ಟಿಸುವ ಸುಂದರ ಸಮಾರಂಭ. ಮದುವೆ ಎಂದರೆ ಸಾಕು ಮನೆಯಲ್ಲಿ ಹಬ್ಬದ ವಾತಾವರಣ. ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನ. ವಧು ವರರ ಪಾಲಿಗೆ ಪ್ರತಿ ಕ್ಷಣಗಳು ಕೂಡ ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ. ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ಅನೇಕ ಶಾಸ್ತ್ರಗಳ ಪಾಲನೆಯಂತೆ ಮದುವೆ ದಿನದಂದು ರಾತ್ರಿ ವಧುವಿನ ಕೈಯಲ್ಲಿ ಒಂದು ಲೋಟ ಹಾಲನ್ನು ಕೊಟ್ಟು ಪ್ರಸ್ಥದ ಕೋಣೆಗೆ ಕಳುಹಿಸುವುದನ್ನ ಗಮನಿಸಿರುತ್ತೀರಿ!! ಈ ಶಾಸ್ತ್ರ ಮಾಡುವ ಹಿಂದಿನ ಕಾರಣವೇನು ಗೊತ್ತಾ?

Marriage

ಮದುವೆ (Marriage)ಎಂಬ ಹೊಸ ಜೀವನಕ್ಕೆ ಮುನ್ನುಡಿ ಬರೆಯುವಾಗ ನಾವು ಕೆಲ ಸಂಪ್ರದಾಯ(Tradition and Culture)ಹಾಗೂ ತಾತ್ವಿಕ ನೆಲೆಗಟ್ಟಲ್ಲಿ ಆಚರಣೆಗಳು ಕ್ರಮಗಳನ್ನು ಅನುಸರಿಸುವುದು ವಾಡಿಕೆ. ಪಾಶ್ಚಿಮಾತ್ಯ ಆಚರಣೆಗೆ ಒಗ್ಗಿಕೊಂಡವರು ಸಂಸ್ಕೃತಿ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡದೆ ಇದ್ದರೂ ಕೂಡ ಕೆಲವೊಂದು ವಿಚಾರಗಳಿಗೆ ಸಂಪ್ರದಾಯವಾದಿಗಳು ಅವಕಾಶ ನೀಡುವುದಿಲ್ಲ. ವಿವಾಹವನ್ನು ಒಂದು ಪವಿತ್ರ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಿವಾಹ ಕಾರ್ಯಕ್ರಮದ ಪ್ರತಿ ವಿಧಿವಿಧಾನಗಳನ್ನು ಯಾವುದೇ ಲೋಪ ದೋಷಗಳಾದ ರೀತಿ ನಡೆಸಲಾಗುತ್ತದೆ.

ಇದೇ ರೀತಿ,ವಿವಾಹದ ಬಳಿಕ ಮೊದಲ ರಾತ್ರಿ ಆಚರಣೆಯ ಪದ್ಧತಿಯೂ ಇದ್ದು, ಹೆಚ್ಚಾಗಿ ಸೀರಿಯಲ್, ಸಿನಿಮಾಗಳಲ್ಲಿ ವಧು (Bride)ನಾಚಿಕೊಂಡು ಕೈಯಲ್ಲಿ ಹಾಲು ಹಿಡಿದು ವರನ(Groom )ಕೋಣೆಗೆ ಪ್ರವೇಶಿಸುವುದನ್ನು ಗಮನಿಸಿರಿತ್ತೀರಿ!!ಮದುವೆಯ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿ ಒಂದು ಲೋಟ ಹಾಲನ್ನು ಕೊಟ್ಟು ಪ್ರಸ್ಥದ ಕೋಣೆಗೆ ಕಳುಹಿಸುವ ಆಚರಣೆಗೆ ಕಾರಣವೇನು(Why newly married couples drink milk on the first night) ಎಂಬ ಇಂಟ್ರೆಸ್ಟಿಂಗ್ ಮಾಹಿತಿ ನಾವು ಹೇಳ್ತೀವಿ ಕೇಳಿ!!

ಮದುವೆ ಸಂಪ್ರದಾಯ( Marriage Tradition) ನಡೆಯುವ ಮುನ್ನವೇ ಮೈಥುನ ಕ್ರಿಯೆ ನಡೆಸಿದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹಿರಿಯರು ಮದುವೆಯ ಮೊದಲು ಮಕ್ಕಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದು ಗಮನಿಸಿರಬಹುದು. ಮೊದಲ ರಾತ್ರಿ ದಿನ ವಧು ವರರಿಗೆ ಹಾಲು ಕುಡಿಸುವ ಶಾಸ್ತ್ರ ಮಾಡಲು ಅನೇಕ ಕಾರಣಗಳಿವೆ. ವಧು ವರರಿಬ್ಬರು ಹಾಲನ್ನು ಹಂಚಿಕೊಂಡು ಕುಡಿಯುವ ಮೂಲಕ ಇಬ್ಬರ ನಡುವೆ ಸುಂದರ ಬೆಸುಗೆ ಏರ್ಪಡಲು ಕಾರಣವಾಗುತ್ತದೆ.

ಪುರಾತನ ಗ್ರಂಥಗಳ ಅನುಸಾರ ಕಾಮಸೂತ್ರದಲ್ಲಿ ಈ ಹಾಲಿನ ಮಿಶ್ರಣವನ್ನು ಕುಡಿಯುವ ಪರಿಕಲ್ಪನೆಯನ್ನು ಪರಿಚಯಿಸ ಲಾಯಿತಂತೆ. ಮೊದಲ ರಾತ್ರಿ ಎಂದರೆ ನೂತನ ವಧು ವರರ ದಾಂಪತ್ಯ ಜೀವನ ಅರಂಭವಾಗುವ ಶುಭ ದಿನ.ಸಂಪ್ರದಾಯಗಳ ಪ್ರಕಾರ, ಒಂದು ಲೋಟ ಹಾಲಿನೊಂದಿಗೆ ವೈವಾಹಿಕ ಜೀವನವನ್ನು ಆರಂಭಿಸಿದರೆ ಸತಿ ಪತಿ ಸಂಬಂಧದ ಹಾಲು(Milk )ಜೇನಿನಂತೆ ಕೂಡಿ ಸುಖಮಯವಾಗಿರಲಿ ಎಂಬುದನ್ನು ಸೂಚಿಸುವ ಸಂಕೇತವಾಗಿದೆ. ಅಷ್ಟೇ ಅಲ್ಲದೆ, ಆನಂದಮಯ ವೈವಾಹಿಕ ಜೀವನಕ್ಕೆ ಅಡಿಪಾಯ ಎಂಬ ಬಲವಾದ ನಂಬಿಕೆ ಕೂಡ ಇದೆ.

ಕೇಸರಿ ಮಿಶ್ರಿತ ಹಾಲು ಬ್ಯಾಕ್ಟೀರಿಯಾ ವಿರೋಧಿ ಹಾಗೂ ರೋಗನಿರೋಧಕ ವರ್ಧಕ ಗುಣಗಳನ್ನು ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ದೆಸೆಯಲ್ಲಿ ಮೊದಲ ರಾತ್ರಿಯಲ್ಲಿ ವಧು ವರರಿಗೆ ಕೇಸರಿ ಮಿಶ್ರಿತ ಹಾಲನ್ನು ನೀಡಲಾಗುತ್ತದೆ. ನವವಿವಾಹಿತರಿಗೆ ಮೊದಲ ರಾತ್ರಿಯಲ್ಲಿ(First Night)ನೀಡುವ ಹಾಲಿಗೆ ಕೇಸರಿ, ಬಾದಾಮಿ, ಸೋಂಪುಕಾಳುಗಳ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿಕೊಡಲಾಗುತ್ತದೆ. ಇದರಿಂದ ಲೈಂಗಿಕ ಶಕ್ತಿ ವೃದ್ದಿಯಾಗುತ್ತದೆ. ಈ ಮಿಶ್ರಣವನ್ನು ಕುದಿಸಿದಾಗ ಆ ಪದಾರ್ಥಗಳು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಕರಿಸುವ ರಾಸಾಯನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುವುದರಿಂದ ಮೊದಲ ರಾತ್ರಿಯಲ್ಲಿ ಒಂದು ಲೋಟ ಹಾಲನ್ನು ನವ ವಧುವರರಿಗೆ ಕೊಡಲಾಗುತ್ತದೆ.ಅಷ್ಟೆ ಅಲ್ಲದೆ, ಕೇಸರಿಯಲ್ಲಿ ಕಾಮೋತ್ತೇಜಕ ಗುಣದ ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ.

ನೂತನ ವಧು ವರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಸಿಲುಕಿರುತ್ತಾರೆ. ಈ ಒತ್ತಡವನ್ನು ನಿವಾರಿಸುವ ದೆಸೆಯಲ್ಲಿ ಕೇಸರಿ ಮಿಶ್ರಿತ ಹಾಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಕೇಸರಿಯು ಟ್ರಿಪ್ಟೊಫಾನ್ ಎಂಬ ಸಂಯುಕ್ತವನ್ನು ಒಳಗೊಂಡಿರುತ್ತದೆ. ಇನ್ನು ಮುಖ್ಯವಾಗಿ, ಹಾಲಿಗೆ ಕೇಸರಿ ಮತ್ತು ಸೋಂಪನ್ನು ಮಿಶ್ರಣ ಮಾಡಿ ಕೊಡುವುದರ ಹಿಂದಿನ ಗುಟ್ಟೇನು? ಈ ಮಿಶ್ರಣದ ಪರಿಮಳವು ಎಂಡಾರ್ಫಿನ್ ಎಂಬ ಸಂತೋಷದ ಹಾರ್ಮೋನನ್ನು ಬಿಡುಗಡೆ ಮಾಡಲು ನೆರವಾಗುತ್ತದಂತೆ.

ಮದುವೆ ಭರಾಟೆಯಲ್ಲಿ ನವವಧುವರರು ಅನೇಕ ಪೂಜಾ ಕೈಂಕರ್ಯಗಳಲ್ಲಿ, ಸಂಪ್ರದಾಯಗಳಲ್ಲಿ ಮುಳುಗಿರುವ ಹಿನ್ನೆಲೆ ಹೆಚ್ಚು ಆಯಾಸಗೊಂಡಿರುತ್ತಾರೆ. ಈ ರೀತಿ ಸುಸ್ತಾಗಿ ದಣಿದ ದಂಪತಿಗಳಿಗೆ ವಿಶ್ರಾಂತಿ ನೀಡಲು ಒಂದು ಲೋಟ ಹಾಲನ್ನು ಮೊದಲ ರಾತ್ರಿಯಲ್ಲಿ ಕೊಡಲಾಗುತ್ತದೆ. ಹಾಲಿನಲ್ಲಿ ಟ್ರಿಟೊಫಾನ್ ಎಂಬ ನಿದ್ರೆಗೆ ಪ್ರೇರೇಪಿಸುವ ಅಂಶವಿರುವುದರಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದ ಮೊದಲ ರಾತ್ರಿಯಲ್ಲಿ ವಧು ವರರಿಗೆ ಹಾಲನ್ನು ಹಂಚಿಕೊಂಡು ಕುಡಿಯುವ ಪ್ರಸ್ಥದ ಶಾಸ್ತ್ರ ಮಾಡಿಸಲಾಗುತ್ತದೆ.

ಇದನ್ನೂ ಓದಿ: Kitchen Hacks: ಟೀ ಜಾಲರಿ ಕಪ್ಪಾಗಿದ್ಯಾ? ಈ ಟ್ರಿಕ್ಸ್ ಫಾಲೋ ಮಾಡಿ, ರಿಸಲ್ಟ್ಸ್ ನೀವೇ ನೋಡಿ!

Leave A Reply

Your email address will not be published.