Kitchen Hacks: ಟೀ ಜಾಲರಿ ಕಪ್ಪಾಗಿದ್ಯಾ? ಈ ಟ್ರಿಕ್ಸ್ ಫಾಲೋ ಮಾಡಿ, ರಿಸಲ್ಟ್ಸ್ ನೀವೇ ನೋಡಿ!

Kitchen Hacks Is the tea mesh blackened then Follow these simple tricks

Kitchen Hacks: ಬೆಳಿಗ್ಗೆ ಎದ್ದಾಗ ಹೆಚ್ಚಿನವರ ದಿನಚರಿ ಆರಂಭವಾಗುವುದು ಕಾಫಿ(Coffee), ಟೀಯಿಂದ. ಹೀಗೆ ದಿನಕ್ಕೆ ನಾಲ್ಕೈದು ಬಾರಿ ಟೀ (Tea)ಮಾಡುತ್ತ ದಿನನಿತ್ಯ ಬಳಕೆ ಮಾಡುವಾಗ ಟೀ ಸೋಸುವ ಜಾಲರಿ ಕಪ್ಪಾಗುತ್ತದೆ. ಅಷ್ಟೇ ಅಲ್ಲದೆ, ಈ ಜಾಲರಿಗಳು ಬೇಗ ಕಲೆಯಾಗುತ್ತವೆ. ಇವುಗಳನ್ನ ಎಷ್ಟು ಉಜ್ಜಿದರೂ ಕಲೆ ಹಾಗೆ ಉಳಿದುಬಿಡುತ್ತವೆ. ನೀವು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ರೆ, ಕೆಲವು ಸರಳ ಟಿಪ್ಸ್ (Kitchen Hacks) ಬಳಸಿ ಸುಲಭವಾಗಿ ಕ್ಲೀನ್ ಮಾಡಿ ರಿಸಲ್ಟ್ ನೀವೇ ಕಂಡುಕೊಳ್ಳಿ!

ಸಾಮಾನ್ಯವಾಗಿ ಕಾಫಿ ಟೀ ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ರೂಡಿಯಾಗಿರುತ್ತೆ. ಹೀಗಾಗಿ, ಮನೆಯ ಗೃಹಿಣಿಯರು ಟೀ ಮಾಡುವ ಸಂದರ್ಭ ಸೋಸುವ ಜಾಲರಿಯನ್ನು ಪ್ರತಿ ನಿತ್ಯ ಬಳಕೆ ಮಾಡುವುದು ಸಹಜ. ಆದರೆ, ಹೀಗೆ ದಿನನಿತ್ಯ ಬಳಸುವಾಗ ಟೀ ಜಾಲರಿ(tea-strainer)ಬೇಗ ಕಲೆಯಾಗುವ ಜೊತೆಗೆ ಕಲೆ ತೆಗೆಯುವುದೇ ದೊಡ್ಡ ಟಾಸ್ಕ್ ಆಗಿ ಬಿಡುತ್ತೆ!!ನೀವು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದರೆ ನಾವು ಹೇಳುವ ರೀತಿ ಸುಲಭವಾಗಿ ಕ್ಲೀನ್(Cleaning )ಮಾಡಿ ನೋಡಿ.

# ಪ್ಲಾಸ್ಟಿಕ್‌ ಹಿಡಿ ಇರುವ ಜಾಲರಿಗೆ ಮೊದಲು ಸೋಪನ್ನು ಚೆನ್ನಾಗಿ ಸವರಿಕೊಂಡು ಆನಂತರ ಒಂದು ಅರ್ಧ ಗಂಟೆಯ ನಂತರ ಹಳೆ ಟೂತ್‌ಬ್ರಷ್‌ನಿಂದ(Toothbrush )ಎಲ್ಲಾ ಭಾಗದಲ್ಲೂ ಚೆನ್ನಾಗಿ ಉಜ್ಜಿದರೆ (clean-your-plastic-steel-tea-strainer)ಕಲೆ ಹೋಗಿ ಜಾಲರಿ ಸ್ವಚ್ಚವಾಗುತ್ತದೆ.

# ಒಂದು ಬೌಲ್‌ನಲ್ಲಿ ವಿನಿಗರ್‌ ಹಾಕಿ ಅದಕ್ಕೆ ಒಂದು ಚಮಚ ಬೇಕಿಂಗ್‌ ಸೋಡ ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು.ಆ ಬಳಿಕ ಅದರಲ್ಲಿ ಸ್ಟೀಲ್‌ ಜಾಲರಿಯನ್ನು ನೆನಸಿಡಬೇಕು. ಆ ಬಳಿಕ ವಾಷಿಂಗ್‌ ಲಿಕ್ವಿಡ್‌ ಇಲ್ಲವೇ ಸೋಪ್‌ ಬಳಸಿ ಟೂತ್‌ಬ್ರಷ್‌ನಿಂದ ಉಜ್ಜಿ ನೀರಿನಲ್ಲಿ ತೊಳೆದರೆ ಕಲೆಗಳು ಮಾಯವಾಗಿ ಬಿಡುತ್ತದೆ.

# ಟೀ ಸ್ಟ್ರೈನರ್ (Tea Strainer) ಅನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಉಪಯೋಗಿಸಬಹುದು.ಇದಕ್ಕೆ ನೀವು ಬಿಸಿ ನೀರಿಗೆ 1 ಚಮಚ ಅಡಿಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಅದರಲ್ಲಿ ಟೀ ಸ್ಟ್ರೈನರ್ ಅನ್ನು ನೆನೆಸಿಡಬೇಕು. ಮೂರು ಗಂಟೆ ಕಳೆದ ಬಳಿಕ, ಫಿಲ್ಟರ್ಗೆ ಡಿಶ್ವಾಶಿಂಗ್ ಲಿಕ್ವೆಡ್ ಹಾಕಿಕೊಂಡು ಬ್ರಷ್ ನಿಂದ ಸ್ಕ್ರಬ್ ಮಾಡಿದರೆ ಜಾಲರಿ ಸ್ವಚ್ಚವಾಗುತ್ತದೆ.

# ಸ್ಟೀಲ್‌ ಹಿಡಿ ಇರುವ ಜಾಲರಿಗಳನ್ನು ಸ್ವಚ್ಚ ಮಾಡಲು ಗ್ಯಾಸ್ಟ್‌ ಸ್ಟವ್‌ ಅನ್ನು ಹಚ್ಚಿ ಕಡಿಮೆ ಉರಿಯಲ್ಲಿ ಇಡಬೇಕು.ಆ ಬಳಿಕ ಸ್ಟೀಲ್‌ ಜಾಲರಿಯನ್ನು ಬಿಸಿ ಮಾಡಿದರೆ, ಆಗ ಕಲೆಗಳೆಲ್ಲ ಸುಟ್ಟು ಕಪ್ಪು ಬಣ್ಣಗೆ ತಿರುಗುತ್ತದೆ.ಬಳಿಕ ಟೂತ್‌ಬ್ರಷ್‌ನಿಂದ ಉಜ್ಜಿ ಮಸಿಯೆನ್ನೆಲ್ಲಾ ಉದುರಿಸಿಕೊಂಡು ವಾಷಿಂಗ್‌ ಸೋಪ್‌(Washing Soap)ಅಥವಾ ಲಿಕ್ವಿಡ್‌ ಹಾಕಿ ಟೂತ್‌ಬ್ರಷ್‌ ಮೂಲಕ ಚೆನ್ನಾಗಿ ಉಜ್ಜಿ ನೀರಿನಲ್ಲಿ ತೊಳೆದರೆ ಕಲೆಗಳು ಮಂಗ ಮಾಯವಾಗಿ ಬಿಡುತ್ತದೆ.

# ನೀವು 1 ಕಪ್ ನೀರಿನಲ್ಲಿ ¼ ಕಪ್ ಬ್ಲೀಚ್ ತೆಗೆದುಕೊಂಡು ಅದರಲ್ಲಿ ಜಾಲರಿಯನ್ನು ನೆನೆಸಬೇಕು. 20 ನಿಮಿಷಗಳ ನಂತರ ಬ್ರಷ್ನಿಂದ ಸ್ಕ್ರಬ್ ಮಾಡುವ ಮೂಲಕ ಜಾಲರಿಯನ್ನು ತೊಳೆಯಬೇಕು. ಆ ಬಳಿಕ ಟೀ ಸ್ಟ್ರೈನರ್ಗೆ ಡಿಶ್ವಾಶಿಂಗ್ ಲಿಕ್ವಿಡ್ ಅನ್ನು ಹಾಕಿಕೊಂಡು ತೊಳೆಯಬೇಕು.ಈ ಮೂಲಕ ಜಾಲರಿಯನ್ನು ಸುಲಭವಾಗಿ ಕ್ಲೀನ್ ಮಾಡಬಹುದು. ಇದರಜೊತೆಗೆ ಚಹಾದ ವಾಸನೆ ಕೂಡ ಬರುವುದಿಲ್ಲ.

# ವಿನೆಗರ್ನಿಂದ ನೀವು ಸುಲಭವಾಗಿ ಜಾಲರಿಯನ್ನು ಸ್ವಚ್ಛಗೊಳಿಸಬಹುದಾಗಿದ್ದು, ನೀವು ಕಾಫಿ, ಟೀ ಜಾಲರಿಯನ್ನು ಬಿಳಿ ವಿನೆಗರ್ನಲ್ಲಿ ನೆನೆಸಿ, 3-4 ಗಂಟೆಗಳ ನಂತರ ಶುದ್ಧ ನೀರಿನಿಂದ ತೊಳೆಯಬೇಕು.

ಇದನ್ನೂ ಓದಿ: Important Information:ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವವರಿಗೆ ಮುಖ್ಯವಾದ ಮಾಹಿತಿ!

Leave A Reply

Your email address will not be published.