Gruha Jyoti :ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ! ಬಂಪರ್ ಆಫರ್ ಮೇಲೆ ಆಫರ್!!!!

Latest news congress guarantee Good news for Gruhajyothi Scheme beneficiaries

Gruha Jyoti Scheme: ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ಜನರಿಗೆ ನೀಡಿದ್ದ ಭರವಸೆ ಅನುಸಾರ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ.ರಾಜ್ಯ ಸರ್ಕಾರದ ( Karnataka Government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha Jyoti Scheme) ಕೂಡ ಒಂದಾಗಿದ್ದು, ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಅನುಸಾರ ‘ಗೃಹಜ್ಯೋತಿ’ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದ್ದು, ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್‌ಗಳ ತನಕ ಉಚಿತ ವಿದ್ಯುತ್ ನೀಡುವ ಈ ಯೋಜನೆಯ ಪ್ರಯೋಜನ ನಿಮಗೆ ಸಿಗಬೇಕು ಎಂದಾದರೆ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಕಲಬುರಗಿಯಲ್ಲಿ ಆಗಸ್ಟ್ 5ರಂದು ಗೃಹಜ್ಯೋತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದುದ್ದು, ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ

ಇದೀಗ, ಸರ್ಕಾರ (Government)ಯೋಜನೆ ನೋಂದಣಿಗೆ ಮತ್ತೊಂದು ಅಪ್‌ಡೇಟ್‌ ನೀಡಿದೆ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಬೇಕಾದರೆ ನೀವು ಆದಷ್ಟು ಬೇಗ ನೋಂದಾವಣಿ (Gruha Jyothi Registration)ಮಾಡಿಸಿಕೊಳ್ಳಬೇಕು. ಜೂನ್ 25ರ ಒಳಗೆ ನೋಂದಣಿ ಮಾಡಿಕೊಂಡ ಗ್ರಾಹಕರು ಜುಲೈ 1ರಿಂದ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೆ. ಆದರೆ ಜೂನ್ ತಿಂಗಳು ಬಂದ ವಿದ್ಯುತ್‌ ಬಿಲ್‌ನಲ್ಲಿ (Electricity Bill)ಜುಲೈ ತಿಂಗಳ ಕೆಲವು ದಿನಗಳಿಗೆ ಶುಲ್ಕ ವಿಧಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್ (K. J. George)
(Energy Minister of Karnataka)ಜನರ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮುಖ್ಯ ಮಾಹಿತಿ ನೀಡಿದ್ದು, ಯಾರ ಬಿಲ್‌ನಲ್ಲಿ ಜುಲೈ ತಿಂಗಳ ಶುಲ್ಕ ಸೇರಿಸಲಾಗಿದೆಯೋ ಅವರು ಈಗಾಗಲೇ ವಿದ್ಯುತ್ ಬಿಲ್ ಕಟ್ಟಿದ್ದರೆ ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಲಾಗುವ ಕುರಿತು ಭರವಸೆ ನೀಡಿದ್ದಾರೆ. ಯಾವುದೇ ವಿದ್ಯುತ್ ಬಿಲ್ ಬಾಕಿ ಇರಿಸಿಕೊಳ್ಳದೆ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಿದ್ದರೆ ಮಾತ್ರ ಹಣ ಮರುಪಾವತಿಯಾಗಲಿದೆ ಎಂಬುದನ್ನು ಮಧ್ಯಮವೊಂದು ವರದಿ ಮಾಡಿದೆ.

ಆಗಸ್ಟ್ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕು ಎಂದಾದರೆ ನೀವು ಮೊದಲು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ನೋಂದಣಿಗೆ ಜುಲೈ 26 ಅಥವಾ 27 ರ ಒಳಗೆ ಅಂತಿಮ ಗಡುವು ನೀಡಲಾಗಿತ್ತು. ಈ ದಿನಾಂಕದೊಳಗೆ ನೀವು ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರಲಿದ್ದು, ಹೀಗಾಗಿ, ಜುಲೈ 27 ರೊಳಗೆ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದಾರೆ.

ಇದೀಗ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಕಳೆದ ಮೂರು ತಿಂಗಳು ಬಿಲ್ ಬಾಕಿ ಇದ್ದರೂ ಕೂಡ ಅದನ್ನ ಮನ್ನಾ ಮಾಡಲು ಇಂಧನ ಇಲಾಖೆ ಯೋಜನೆ ಹಾಕಿಕೊಂಡಿದೆ.ಈ ಕುರಿತು ಇಂಧನ ಸಚಿವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. “ಜೂನ್ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಒಂದಷ್ಟು ಗೊಂದಲಗಳಿದ್ದು, ಜೂನ್ ತಿಂಗಳ ಬಿಲ್‌ನಲ್ಲಿ ಜುಲೈ ತಿಂಗಳ ಕೆಲವು ದಿನಗಳಿಗೂ ಶುಲ್ಕ ವಿಧಿಸಲಾಗಿದೆ. ಕೆಲವು ಗ್ರಾಹಕರಿಗೆ ಮಾತ್ರ ಈ ರೀತಿ ಸಮಸ್ಯೆ ಎದುರಾಗಿದ್ದು, ಅಂತಹ ಗ್ರಾಹಕರಿಗೆ ಕ್ರೆಡಿಟ್ ನೀಡಲಾಗುತ್ತದೆ. ವಿದ್ಯುತ್ ಬಿಲ್ ಯಾವುದೇ ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ನಂತರ ಹಣ ವಾಪಸ್ ನೀಡಲಾಗುತ್ತದೆ. ಜುಲೈ ತಿಂಗಳ ಬಿಲ್ ಕಟ್ಟಿದರೆ ಹಣ ವಾಪಸ್ ನೀಡುತ್ತೇವೆ” ಎಂಬುದಾಗಿ ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಜೂನ್ ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಾಗಿತ್ತು.ಈ ಯೋಜನೆಯ ಪ್ರಯೋಜನ ಸಿಗಲು ಬಾಕಿ ಬಿಲ್ ಇರಬಾರದೆಂದು ಇದೀಗ ಮೂರು ತಿಂಗಳು ಬಿಲ್ ಬಾಕಿ ಇದ್ದರು ಕೂಡ ಈ ಯೋಜನೆ ಉಚಿತ ವಿದ್ಯುತ್ ನೀಡುವುದಾಗಿ ಇಂಧನ ಇಲಾಖೆ ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದೆ. ಇನ್ನು ಈ ಯೋಜನೆಯ ಕುರಿತು ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.