Important Information:ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವವರಿಗೆ ಮುಖ್ಯವಾದ ಮಾಹಿತಿ!

Latest news Important information for charmadi ghat travellers about parking vehicle

Important information: ಕಳೆದ ಕೆಲವು ದಿನಗಳಿಂದ ಮಳೆಯ(Rain)ಆರ್ಭಟದಿಂದ ಹೊಳೆ, ನದಿ ಸರೋವರ(River )ತುಂಬಿ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿ ಬಿಟ್ಟಿದೆ.ಈ ನಡುವೆ, ಮಳೆಯ ನಡುವೆ ತುಂಬಿ ಹರಿಯುವ ಹೊಳೆ ಕೊಳಗಳು, ದುಮ್ಮಿಕ್ಕುತ್ತಿರುವ ಜಲಪಾತಗಳ ರಮ್ಯ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ವಾಹನ ನಿಲ್ಲಿಸುವುದು ಸಾಮಾನ್ಯ. ಈ ನಡುವೆ ವಾಹನ ಸವಾರರಿಗೆ (Important information for vechicle Passengers)ಮುಖ್ಯ ಮಾಹಿತಿ ಇಲ್ಲಿದೆ ನೋಡಿ!

ಈಗಾಗಲೇ ಮಳೆಗಾಲ ಶುರುವಾಗಿದೆ. ಹೀಗಾಗಿ, ನೀವು ಸಂಚರಿಸುವಾಗ ಎಷ್ಟು ಎಚ್ಚರ ವಹಿಸಿದರು ಸಾಲದು!ನೀವೇನಾದರೂ ಘಾಟ್ ಸೆಕ್ಷನ್ ನಲ್ಲಿ ಪ್ರಕೃತಿಯ ಸೊಬಗು ಸವಿಯಲು ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸುವ ಅಭ್ಯಾಸ ಇಟ್ಟುಕೊಂಡಿದ್ದರೆ ಈ ಮಾಹಿತಿ ಅರಿತಿರುವುದು ಅವಶ್ಯಕ.

ದಕ್ಷಿಣ ಕನ್ನಡ (Dakshina Kannada)ಹಾಗೂ ಚಿಕ್ಕಮಗಳೂರು(Chikkamagaluru)ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ (Charmady)ಹೆದ್ದಾರಿಯಲ್ಲಿ 33 ಸ್ಥಳಗಳನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ.ಇದರಲ್ಲಿ ಕೂಡ 4 ಅತಿ ಹೆಚ್ಚು ಅಪಾಯಕಾರಿ, ಅದೇ ರೀತಿ 13 ಸಾಮಾನ್ಯ ಮತ್ತು 16 ಕಡಿಮೆ ಅಪಾಯವಿರುವ ಸ್ಥಳ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ, ಈ ಹೆದ್ದಾರಿಯಲ್ಲಿ ಸಂಚರಿಸುವ ಸವಾರರಿಗೆ ಮುಖ್ಯ ಮಾಹಿತಿ ನೀಡಲಾಗಿದೆ.

ಚಾರ್ಮಾಡಿ ಘಾಟಿ (charmadi ghat) ಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಅತಿಯಾದ ಮಳೆಯಾಗುತ್ತಿದ್ದ ಹಿನ್ನೆಲೆ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವ ಹಿನ್ನೆಲೆ ಚಾರಣಿಗರು ಟ್ರಕ್ಕಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡಲು ಸೂಚನೆ ನೀಡಲಾಗಿತ್ತು. ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ತಿಳಿಸಲಾಗಿತ್ತು.

ಇದರ ನಡುವೆ, ಈ ಹೆದ್ದಾರಿ ನಡುವೆ ವಾಹನ ನಿಲ್ಲಿಸುವ ಇಲ್ಲವೇ,ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಫೋಟೋ, ಸೆಲ್ಫಿ ತೆಗೆಯುವ, ಟ್ರಕ್ಕಿಂಗ್ ಸ್ಥಳಗಳಿಗೆ ಭೇಟಿ ನೀಡುವ ಪ್ರಕ್ರಿಯೆಗೆ ನಿರ್ಬಂಧ ಹೇರಲಾಗಿದೆ. ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರವೇಶ ಕೂಡ ನಿಷೇಧಿಸಿದ್ದು,ಒಂದು ವೇಳೆ, ಈ ಕ್ರಮವನ್ನು ಉಲ್ಲಂಘನೆ ಮಾಡಿದರೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

 

Leave A Reply

Your email address will not be published.