Intresting Fact: ನಿಮಗೆ ತಿಳಿದಿದೆಯೇ? ಜಗತ್ತಿನಲ್ಲಿ ನಿದ್ದೆಯೇ ಮಾಡದ ಜೀವಿ ಯಾವುದೆಂದು?

Latest news Intresting Fact What creature in the world does not sleep

Intresting Fact : ಆರೋಗ್ಯವೇ(Health)ಭಾಗ್ಯ ಎಂದು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದೊಂದು ರೀತಿಯ ಹರಸಾಹಸ ಪಡುವುದು ಸಹಜ. ಅದೇ ರೀತಿ ಉತ್ತಮ ಆಹಾರ ಸೇವನೆಯ(Food )ಜೊತೆಗೆ ಸರಿಯಾದ ನಿದ್ದೆ (Good Sleep)ಕೂಡ ಹೆಚ್ಚು ಅವಶ್ಯಕ. ಸುಖ ನಿದ್ರೆಗೆ ಹಾತೊರೆಯುವ ಮಂದಿಯೇ ಹೆಚ್ಚು. ಆದ್ರೆ, ಇದೊಂದು ಜೀವಿ ನಿದ್ದೆಯೇ ಮಾಡೋಲ್ಲವಂತೆ!! ಕೇಳಿದರೆ, ಅಚ್ಚರಿ ಎನಿಸಿದರೂ ನಿಜ!!

ಒತ್ತಡಯುತ ಜೀವನಶೈಲಿಯಲ್ಲಿ ಹೆಚ್ಚಿನವರಿಗೆ ನೆಮ್ಮದಿ ಸಿಗುವುದು ಎಂದರೆ ನಿದ್ದೆಯಲ್ಲಿ ಮಾತ್ರ. ಆದರು ಯಾಕೋ ಕೆಲವರಿಗೆ ನಿದ್ರಾದೇವಿ ಹತ್ತಿರವೇ ಸುಳಿಯುವುದಿಲ್ಲ ಎಂದು ಒದ್ದಾಡುತ್ತಾ ಇರುವುದು ಕೂಡ ಇದೆ. ಇದೇ ರೀತಿ ಜಗತ್ತಿನಲ್ಲಿ ಎಂದಿಗೂ ನಿದ್ರಿಸದ ಪ್ರಾಣಿಯಿದೆಯಂತೆ. ಅರೇ, ಇದ್ಯಾವುದು ಎಂದು ಯೋಚಿಸುತ್ತಿದ್ದೀರಾ? ಜಗತ್ತಿನಲ್ಲಿ ಎಂದಿಗೂ ನಿದ್ರೆ ಮಾಡದ ಏಕೈಕ ಜೀವಿ ಎಂದರೆ ಇರುವೆಯಂತೆ.

ಆದರೆ ಇರುವೆಗಳು(Ants)ಯಾಕೆ ಮಲಗುವುದಿಲ್ಲ ಎಂಬ ವಿಚಾರ ಹೆಚ್ಚು ಕುತೂಹಲಕಾರಿಯಾಗಿದೆ. ವಾಸ್ತವವಾಗಿ, ನಾವು ನಿದ್ದೆ ಮಾಡುವಾಗ ಕಣ್ಣು ಮುಚ್ಚಿ ನಿದ್ದೆ ಮಾಡುತ್ತೇವೆ. ಅದೇ ರೀತಿ ಹೆಚ್ಚಿನ ಪ್ರಾಣಿಗಳು ಕಣ್ಣು ಮುಚ್ಚಿ ನಿದ್ರೆಗೆ ಜಾರುತ್ತವೆ. ಆದರೆ , ಇರುವೆಗಳಿಗೆ ಕಣ್ಣುರೆಪ್ಪೆಗಳಿಲ್ಲದೇ ಇರುವ ಹಿನ್ನೆಲೆ ಇರುವೆಗಳು ಕಣ್ಣು ಮುಚ್ಚಲಾಗುವುದಿಲ್ಲ. ಹೀಗಿದ್ದರೂ ಕೂಡ ಇರುವೆಗಳು ತಮ್ಮ ಅವಶ್ಯಕತೆ ಅನುಸಾರ ವಿಶ್ರಾಂತಿ ಪಡೆಯುತ್ತವೆ.

ಪ್ರತಿಯೊಂದು ಜೀವಿಯ ದೇಹ ವೈಶಿಷ್ಟ್ಯ, ದೇಹ ಪ್ರಕೃತಿ ಭಿನ್ನವಾಗಿರುತ್ತದೆ.ಇರುವೆಗಳು ತಮ್ಮ ಮೊಣಕಾಲುಗಳು ಮತ್ತು ಪಾದಗಳಲ್ಲಿ ವಿಶೇಷ ರೀತಿಯ ಸಂವೇದನಾ ಕಂಪನವನ್ನು ಒಳಗೊಂಡಿರುತ್ತವೆ. ಈ ಮೂಲಕ ಇರುವೆಗಳು ತಮ್ಮ ಸುತ್ತಲಿನ ಪ್ರದೇಶಗಳನ್ನು ತಿಳಿದುಕೊಳ್ಳುವ ಜೊತೆಗೆ ಅಪಾಯ ಉಂಟಾಗುವ ಮುನ್ನ ಇರುವೆಗಳಿಗೆ ತಿಳಿಯುತ್ತದೆ. ಅಪಾಯವನ್ನು ಗ್ರಹಿಸಿದಾಗ ವಿಶೇಷ ರೀತಿಯ ರಾಸಾಯನಿಕ ಸಂಕೇತವನ್ನು ಕೂಡ ಇರುವೆಗಳು ನೀಡುತ್ತವಂತೆ.

ಇರುವೆಗಳು ದಿನವಿಡೀ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಕಾರ್ಯ ನಿರ್ವಹಿಸುತ್ತ ಓಡಾಡುತ್ತಲೇ ಇರುತ್ತವೆ. ಆದರೆ ಇರುವೆ ಎಂದಿಗೂ ನಿದ್ದೆ ಮಾಡೋದೇ ಇಲ್ಲವಂತೆ. ಇರುವೆಗಳು ದಿನಕ್ಕೆ ಸುಮಾರು 250 ಬಾರಿ ವಿಶ್ರಾಂತಿ ಪಡೆಯುತ್ತವೆ. ಒಂದು ಬಾರಿಯ ವಿಶ್ರಾಂತಿ ಅವಧಿಯು 1 ನಿಮಿಷ ಹೀಗಿದ್ದರೂ ಕೂಡ ನಿದ್ದೆ ಮಾಡೋದಿಲ್ಲವಂತೆ. ಇರುವೆಗಳ ನಿದ್ರೆ ಎಂದರೆ ಆಳವಾದ ವಿಶ್ರಾಂತಿಯಾಗಿದ್ದು, ದಿನವಿಡೀ 1 ನಿಮಿಷ 250 ಬಾರಿ ವಿಶ್ರಾಂತಿ ಪಡೆದರೆ ಒಟ್ಟು 4 ಗಂಟೆ 48 ನಿಮಿಷಗಳ ವಿಶ್ರಾಂತಿ ಪಡೆದ ಹಾಗಾಗುತ್ತದೆ. ಇರುವೆಗಳು ಆಹಾರ ಸಿಕ್ಕಾಗ ತಮ್ಮ ಸಂಗಾತಿಗೆ ತಿಳಿಸಲು ವಿಶೇಷ ರಾಸಾಯನಿಕ ಫೆರೋಮೋನ್ ಅನ್ನು ಬಿಡುಗಡೆ ಮಾಡಿ ಮಾಹಿತಿ ತಲುಪಿಸುತ್ತದೆ.

ಇರುವೆಗಳ ದೇಹದಲ್ಲಿ ಶ್ವಾಸಕೋಶ ಕೂಡ ಇದ್ದು, ಉಸಿರಾಟದ(Breathing Procedure)ಪ್ರಕ್ರಿಯೆಯು ಭಿನ್ನವಾಗಿದೆ. ಆಮ್ಲಜನಕವು(Oxygen )ದೇಹದೊಳಗೆ ಸೇರಿ ದೇಹದಾದ್ಯಂತ ಹರಡುತ್ತದೆ. ಇರುವೆಗಳು ತಮ್ಮ ದೇಹದ ಮೇಲೆ ಹಲವಾರು ರಂಧ್ರಗಳನ್ನು ಒಳಗೊಂಡಿದ್ದು,ದೇಹಕ್ಕೆ ಪ್ರವೇಶಿಸಿದ ನಂತರ, ಆಮ್ಲಜನಕವು ಈ ಚಾನಲ್ ಮೂಲಕ ದೇಹದಾದ್ಯಂತ ಹರಡುತ್ತದೆ. ರಂಧ್ರಗಳನ್ನು ನಾಳಗಳು ಇಲ್ಲವೇ ಕೊಳವೆಗಳ ಮೂಲಕ ಸಂಪರ್ಕ ಕಲ್ಪಿಸಿದೆ

Leave A Reply

Your email address will not be published.