ಮಂಗಳೂರು: ಆಕಸ್ಮಿಕವಾಗಿ 5ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಮೃತ್ಯು!

Mangaluru boy died through accidentally fall down from fifth floor of his balcony

Mangaluru: ಮಂಗಳೂರು (Mangaluru)ನಗರದ ಕದ್ರಿ ಶಿವಭಾಗ್‌ನಲ್ಲಿರುವ ಅಪಾರ್ಚ್‌ಮೆಂಟ್‌ನ 5ನೇ ಮಹಡಿಯಿಂದ ಜಾರಿ ಬಿದ್ದ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯೊಬ್ಬ(Medical College Student)ದಾರುಣವಾಗಿ ಮೃತಪಟ್ಟ (Death)ಘಟನೆ ಭಾನುವಾರ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಸಮಯ್‌ (21) ಎಂದು ಗುರುತಿಸಲಾಗಿದೆ. ಮೂಲತಃ ಅಡ್ಯಾರು ನಿವಾಸಿಯಾಗಿದ್ದ ಈತ ಪ್ರಸ್ತುತ ಕದ್ರಿ ಶಿವಭಾಗ್‌ನಲ್ಲಿ ನೆಲೆಸಿದ್ದ.ಸಮಯ್‌ ಅವರ ತಂದೆ ಸಿವಿಲ್‌ ಎಂಜಿನಿಯರ್‌ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಸಮಯ್‌ ದೊಡ್ಡ ಮಗ ಎನ್ನಲಾಗಿದೆ.

ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಲ್ಲಿಮುಂಜಾನೆ ವೇಳೆಗೆ ಓದುತ್ತಿದ್ದನಂತೆ. ಈ ಸಂದರ್ಭ ಆತನ ತಾಯಿ ಕಾರನ್ನು ತೊಳೆಯಲು ನೆಲಮಹಡಿಗೆ ಬರಲು ಹೇಳಿದ್ದಾರೆ.ತಾಯಿ ಕೂಡ ಕಾರು ವಾಶ್(Car Wash)ಮಾಡಲು ನೆಲಮಹಡಿಗೆ ಹೋಗಿದ್ದು, ತಾಯಿಗೆ ಸಹಾಯ ಮಾಡಲು ಬಕೆಟ್‌ ತೆಗೆದುಕೊಂಡು ಬರಲು ಸಮಯ್‌ ಅವರು ಬಾತ್‌ರೂಂಗೆ ತೆರಳಿದ್ದಾರೆ. ಈ ನಡುವೆ ತಾಯಿ ನೆಲಮಹಡಿ ತಲುಪಿದ್ದು, ಸಮಯ್‌ ಅವರು ಫ್ಲ್ಯಾಟ್‌ನ ಬಾಲ್ಕನಿಗೆ ಬಂದು ಕಾರು ತೊಳೆಯಲು ಬಕೆಟ್‌ ಒಯ್ದಿದ್ದಾರಾ ? ಎಂದು ತಾಯಿಯನ್ನು ಪ್ರಶ್ನಿಸಲು ಕೆಳಕ್ಕೆ ಬಗ್ಗಿದ್ದಾರೆ. ಆದರೆ ಮಳೆ ನೀರಿನ ಹನಿಯಿಂದ ಜಾರಿ ಸಮಯ್ ಕೆಳಗೆ ಬಿದ್ದಿದ್ದಾರೆ.

ತಕ್ಷಣವೇ ಮನೆಯವರು ಸಮಯ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರು ಕೂಡ ಅಷ್ಟರಲ್ಲಿ ಸಮಯ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು,ಈ ಕುರಿತು ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.