Super moon:ಬಾನಂಗಳದಲ್ಲಿ ಮೂಡಿ ಬರಲಿದೆ ಅಚ್ಚರಿಯ ವೈಶಿಷ್ಟ್ಯ! ಆಗಸ್ಟ್ ತಿಂಗಳಲ್ಲಿ ಬ್ಲೂಮೂನ್, ಸೂಪರ್ ಮೂನ್ ನೋಡಲು ರೆಡಿಯಾಗಿರಿ!

Rare blue moon and super moon appear in August 2023

Super moon: ರಾತ್ರಿಯಾದರೆ ಸಾಕು.. ರಾಶಿ ರಾಶಿ ನಕ್ಷತ್ರ ಪುಂಜಗಳ(Constellation) ಸಾಲು ನಾವೆಲ್ಲ ಕಣ್ತುಂಬಿ ಕೊಳ್ಳುತ್ತೇವೆ. ಇದರ ನಡುವೆ ಬಾನಂಗಳದಲ್ಲಿ ಅಪರೂಪದ ವಿಸ್ಮಯಗಳು ಆಗಾಗ ಸಂಭವಿಸುತ್ತವೆ. ಇದೇ ರೀತಿ, ಆಗಸ್ಟ್ ತಿಂಗಳಲ್ಲಿ ಬಾನಂಗಳದಲ್ಲಿ ಮೂಡಿ ಬರಲಿದೆ ಅಚ್ಚರಿಯ ವೈಶಿಷ್ಟ್ಯ! ಹೌದು!!ಆಗಸ್ಟ್ ತಿಂಗಳಲ್ಲಿ ಗೋಚರಿಸುವ ಅತೀ ಅಪರೂಪ (Astronomical wonder)ಬ್ಲೂಮೂನ್, ಸೂಪರ್ ಮೂನ್(Super moon) ಅನ್ನು ನೀವು ಕಣ್ತುಂಬಿ ಕೊಳ್ಳಬಹುದು.

ಇಡೀ ಬ್ರಹ್ಮಾಂಡದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳ (Star) ಜೊತೆಗೆ ಸಾಕಷ್ಟು ಗ್ರಹಗಳಿರುವಾಗ ಯಾವುದಾದರೂ ಗ್ರಹದಲ್ಲಿ (Planet)ಭೂಮಿಯಂತೆಯೇ(Earth) ಜೀವಿಗಳಿರಬಾರದೇಕೆ ಎಂಬ ಅನುಮಾನ ಹಲವರನ್ನು ಕಾಡದಿರದು.ಈ ವಿಷಯದ ಕುರಿತು ವಿಜ್ಞಾನಿಗಳು(Scientist) ಇದರ ಬಗ್ಗೆ ಸಂಶೋಧನೆ(Research) ಕೈಗೊಳ್ಳುತ್ತಾ ಬಂದಿದ್ದಾರೆ. ಈ ಅನ್ವೇಷಣೆ, ಅಧ್ಯಯನದ ನಡುವೆ ಆಗಸ್ಟ್ ತಿಂಗಳಲ್ಲಿ ಆಕಾಶದಲ್ಲಿ ಬ್ಲೂ ಮೂನ್ (Blue moon) ಮತ್ತು ಎರಡು ಸೂಪರ್‌ಮೂನ್‌ಗಳನ್ನು (Super Moon) ಕಾಣಬಹುದಾಗಿದೆ.

ಸೂಪರ್ ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣಿಸುತ್ತದೆ. ನಮ್ಮ ಗ್ರಹದ ಸುತ್ತ ದೀರ್ಘವೃತ್ತದ ಹಾದಿಯಲ್ಲಿ ಹುಣ್ಣಿಮೆಯ ಕಕ್ಷೆಯು ಭೂಮಿಗೆ ಹತ್ತಿರವಾದ ಸಂದರ್ಭದಲ್ಲಿ ಸೂಪರ್‌ಮೂನ್ ಸಂಭವಿಸುತ್ತದೆ. ಈ ಸಂದರ್ಭ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುವ ಜೊತೆಗೆ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ.

ಈ ಸಮಯದಲ್ಲಿ ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ತುಂಬಾ ಕಡಿಮೆಯಾಗಿರುತ್ತದೆ.ಚಂದ್ರ ಭೂಮಿಯ ಸಮೀಪ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಸುಮಾರು 4,05,500 ಕಿ.ಮೀ. ಆಗಿರುತ್ತೆ. ಚಂದ್ರನು ಭೂಮಿಯ ಪರಿಧಿಯ ಶೇ 90ರಷ್ಟು ಹತ್ತಿರ ಬಂದ ಸಂದರ್ಭ ಈ ಖಗೋಳ ವಿಸ್ಮಯವನ್ನು ಸೂಪರ್ ಮೂನ್ (Super moon)ಎಂದು ಕರೆಯಲಾಗುತ್ತದೆ. ಈ ವರ್ಷದ ಸೂಪರ್‌ಮೂನ್ ಚಕ್ರವು ವಿಶಿಷ್ಟವಾಗಿದ್ದು, ಇದು ನಾಲ್ಕು ಸತತ ಸೂಪರ್‌ಮೂನ್‌ಗಳನ್ನು ಒಳಗೊಂಡಿದೆ. ವರ್ಷದ ಮೊದಲ ಸೂಪರ್‌ಮೂನ್ ಜುಲೈನಲ್ಲಿ ಗೋಚರಿಸಿತ್ತು. ಸೆಪ್ಟೆಂಬರ್ 29 ರಂದು ವರ್ಷದ ಕೊನೆಯಸೂಪರ್ ಮೂನ್ ಕಾಣಿಸಿಕೊಳ್ಳುತ್ತದೆ ಎಂದು earth.com ವರದಿ ಮಾಡಿದೆ

ನಾಸಾ ಪ್ರಕಾರ, ಮೊದಲ ಸಂಪೂರ್ಣ ಸೂಪರ್‌ಮೂನ್ ಆಗಸ್ಟ್ 1ರಂದು ಕಾಣಲಿದೆ.ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 2ರಂದು ಮಧ್ಯರಾತ್ರಿ 12.2ಕ್ಕೆ ಇದು ಪ್ರಾರಂಭವಾಗಿ ಪೂರ್ಣ ಚಂದ್ರನನ್ನು ಮೂರುದಿನ ಅಂದರೆ ಗುರುವಾರ ಬೆಳಗಿನ ತನಕ ನೋಡಬಹುದು.ನಾಸಾ ವರದಿಯ ಅನುಸಾರ ಬ್ಲೂ ಮೂನ್ನಲ್ಲಿ ಎರಡು ವಿಧಗಳಿದ್ದು, ಒಂದು ಮಾಸಿಕ, ಮತ್ತೊಂದು ಋತುಮಾನ ಆಧಾರಿತವಾಗಿರುತ್ತದೆ.

ಬ್ಲೂ ಮೂನ್ ಎಂಬ ಹೆಸರಿದ್ದರು ಕೂಡ ನೀಲಿ ಬಣ್ಣದಲ್ಲಿ ಇರುವುದಿಲ್ಲ. ಸಾಮಾನ್ಯ ಹುಣ್ಣಿಮೆ ಚಂದ್ರನ ಬಣ್ಣವನ್ನೇ ಹೊಂದಿರುತ್ತದೆ. ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ಈ ರೀತಿಯ ಬ್ಲೂಮೂನ್ಗಳನ್ನು ಕಾಣಬಹುದು. ಆಗಸ್ಟ್ 1ರಂದು ಮೊದಲ ಬ್ಲೂಮೂನ್ ಕಂಡುಬಂದರೆ, ಈ ಮಾಸದ ಎರಡನೇ ಸೂಪರ್‌ಮೂನ್ ಆಗಸ್ಟ್ 30ರಂದು ಕಡೆಯ ಕಾಣಿಸುತ್ತದೆ. ವಿಜ್ಞಾನಿಗಳ ಮಾಹಿತಿ ಅನುಸಾರ, 2018ರಲ್ಲಿ ಒಂದೇ ತಿಂಗಳಲ್ಲಿ ಈ ರೀತಿಯ ಎರಡು ಸಂಪೂರ್ಣ ಸೂಪರ್ಮೂನ್ಗಳು ಕಾಣಿಸಿ ಕೊಂಡಿತ್ತಂತೆ. ಇದೀಗ ಮತ್ತೊಮ್ಮೆ ಈ ರೀತಿ ವಿದ್ಯಮಾನ ಮರುಕಳಿಸುತ್ತಿದ್ದು, ನೀವು ಈ ಕೌತುಕವನ್ನು ಮತ್ತೆ ನೋಡಲು ಬಯಸಿದರೆ 2027ರ ವರೆಗೆ ನೀವು ಕಾಯಬೇಕು.

Leave A Reply

Your email address will not be published.