Gruha Lakshmi Yojana: ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ ಭಾಗ್ಯ ಮುಂದಿನ ವರ್ಷದಿಂದ ಇಲ್ಲ!?

Shocking news for gruhalakshmi Yojana benificiaries

Gruha lakshmi Yojana: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಮನೆಯ ಯಜಮಾನಿಯರು ಎದುರು ನೋಡುತ್ತಿದ್ದಾರೆ. ಈ ನಡುವೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ಜನರಿಗೆ ನೀಡಿದ್ದ ಭರವಸೆ ಅನುಸಾರ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ.ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಐದು ಗ್ಯಾರಂಟಿ (Congress Guarantee Shceme) ಯೋಜನೆಯ ಘೋಷಣೆ ಬಹು ಮುಖ್ಯ ಪಾತ್ರ ವಹಿಸಿದೆ.

ರಾಜ್ಯ ಸರ್ಕಾರದ ( Karnataka Government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ (Gruhalakshmi Scheme) ಕೂಡ ಒಂದಾಗಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿಯ ಹಣವನ್ನು ಮನೆಯ ಯಜಮಾನಿ ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಉಲ್ಲೇಖಿಸಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.ಈ ನಡುವೆ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಗೃಹ ಲಕ್ಷ್ಮಿ ಯೋಜನೆಯು (Gruha lakshmi scheme) ಮುಂದಿನ ವರ್ಷ ನಿಂತುಬಿಡುತ್ತಾ ಎಂಬ ಅನುಮಾನ ಕಾಡುತ್ತಿದೆ. ಫಲಾನುಭವಿಗಳಿಗೆ 2 ಸಾವಿರ ರೂಪಾಯಿ ಸಹಾಯಧನ ಸಿಗುವುದಿಲ್ಲವೆ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಗೃಹಲಕ್ಷ್ಮಿಗೆ ಆರ್ಥಿಕ ಇಲಾಖೆ ನೀಡಿರುವ ಮಾನದಂಡಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ವರ್ಷ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕು ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾನದಂಡ ಕೈಬಿಟ್ಟರೇ ಎಂಬ ಅನುಮಾನ ಕಾಡುತ್ತಿದೆ. ಗೃಹ ಲಕ್ಷ್ಮಿ ಯೋಜನೆ ಕುರಿತಂತೆ ಆರ್ಥಿಕ ಇಲಾಖೆಯು ಜೂನ್ 1ರಂದು ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿಯನ್ನು ಕೂಲಂಕಷವಾಗಿ ಗಮನಿಸಿದರೆ ಆರ್ಥಿಕ ಇಲಾಖೆ ನೀಡಿದ ಮಾರ್ಗಸೂಚಿಯನ್ನು ಪಾಲಿಸದೆ ರಾಜ್ಯ ಸರ್ಕಾರವು ಯೋಜನೆ ಘೋಷಣೆ ಮಾಡಿರುವುದು ತಿಳಿಯುತ್ತದೆ.

ಹಣಕಾಸು ಇಲಾಖೆ ಏನೆಲ್ಲ ಷರತ್ತು ವಿಧಿಸಿತ್ತು ಗೊತ್ತಾ?
# ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ನೀಡಬೇಕು.
# ಆದಾಯ ತೆರಿಗೆ ಪಾವತಿದಾರರಿಗೆ , ಜಿಎಸ್‌ಟಿ ರಿಟರ್ನ್ಸ್ ಪಾವತಿಸುವ ಮಹಿಳೆಯರಿಗೆ ಈ ಪ್ರಯೋಜನ ನೀಡಬಾರದು.
# 5 ಎಕರೆಗೂ ಮೀರಿದ ಒಣಭೂಮಿ ಹೊಂದಿರುವವರಿಗೆ ಕೊಡುವಂತಿಲ್ಲ.
# ಒಂದು ವರ್ಷಕ್ಕೆ 1.2 ಲಕ್ಷ ಆದಾಯ ಇರುವವರಿಗೆ ಜೊತೆಗೆ ನಾಲ್ಕು ಚಕ್ರಗಳ ವಾಹನ ಹೊಂದಿದವರಿಗೂ‌ ಹಣ ನೀಡಬಾರದು.
# ಸರ್ಕಾರಿ‌ ಉದ್ಯೋಗಿಗಳು ಮತ್ತು ಪಿಂಚಣಿ ಪಡೆಯುವರಿಗೆ ಹಣ ನೀಡುವಂತಿಲ್ಲ.
# ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಸರ್ಕಾರದ ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರಿಗೆ‌ ನೀಡಬಾರದು.
ಈ ಎಲ್ಲ ಷರತ್ತುಗಳನ್ನು ಆರ್ಥಿಕ ಇಲಾಖೆ ನೀಡಿದ್ದು, ರಾಜ್ಯ ಸರ್ಕಾರ ಇದರಲ್ಲಿ ಕೆಲವನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ,ಗೃಹ ಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಆರ್ಥಿಕ ಇಲಾಖೆಯಿಂದ ಆತಂಕ ವ್ಯಕ್ತವಾಗಿದ್ದು, ಈ ಬಗ್ಗೆ ಹಣಕಾಸು ಇಲಾಖೆಯು ಸರ್ಕಾರಕ್ಕೆ ತನ್ನದೇ ಆದ ಅನಿಸಿಕೆಯನ್ನು ನೀಡಿದೆ.

ಹಣಕಾಸು ಇಲಾಖೆ ಪ್ರತಿ ವರ್ಷವೂ 31,000 ಕೋಟಿ ರೂಪಾಯಿಯಷ್ಟು ಗೃಹ ಲಕ್ಷ್ಮಿ ಯೋಜನೆಗೆ‌ ಹಣ ಬೇಕಾಗಿರುವುದನ್ನು ತಿಳಿಸಿದೆ. ಆದರೆ, ಇಷ್ಟು ಹಣ ಭರಿಸಲು ಸಾಧ್ಯವಿಲ್ಲವೆಂಬುದನ್ನು ಕೂಡ ಈ ಮೊದಲೇ ತಿಳಿಸಿದೆ. ಅಷ್ಟೇ ಅಲ್ಲದೆ, ಈ ಯೋಜನೆ ಜಾರಿ ಮಾಡುವಾಗ ಕೆಲವು ಷರತ್ತುಗಳನ್ನು ವಿಧಿಸಲು ಕೂಡ ಹಣಕಾಸು ಇಲಾಖೆ ಸಲಹೆ ನೀಡಿತ್ತು. ಆದ್ರೆ, ಹಣಕಾಸು ಇಲಾಖೆ ನೀಡಿದ ಯಾವುದೇ ಸಲಹೆಯನ್ನು ಕೂಡ ರಾಜ್ಯ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಆರ್ಥಿಕ ಇಲಾಖೆ ನೀಡಿರುವ ಮಾನದಂಡವನ್ನು ಕೈಬಿಟ್ಟು ರಾಜ್ಯ ಸರ್ಕಾರ ಯೋಜನೆ ಜಾರಿ ಮಾಡಿದೆ ಎಂಬುದನ್ನು ವರದಿಯೊಂದು ತಿಳಿಸಿದೆ.. ಹೀಗಾಗಿ ಮುಂದಿನ ವರ್ಷ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನ ಸಿಗುವುದಿಲ್ಲವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Leave A Reply

Your email address will not be published.