Tamil Nadu: ಅಬ್ಬಬ್ಬಾ! ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ನಲ್ಲಿ ಪತ್ತೆಯಾಯಿತು 47 ಜೀವಂತ ಹಾವು, ಜೊತೆಗೆ 2 ಹಲ್ಲಿ ಕೂಡಾ!!!

Tamil Nadu Customs officials seized 47 live snakes and two lizards from a passenger's bag at Trichy International Airport

Tiruchirappalli: ತಮಿಳುನಾಡಿನ (Tamil Nadu)ತಿರುಚ್ಚಿ (Tiruchirappalli)ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್ನಿಂದ (Passenger bag)47 ಜೀವಂತ ಹಾವುಗಳು (Snakes)ಎರಡು ಹಲ್ಲಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಬಾಟಿಕ್ ಏರ್ ವಿಮಾನದ ಮೂಲಕ ಆರೋಪಿ ಮಹಮ್ಮದ್ ಮೊಯ್ದೀನ್ ಕೌಲಾಲಂಪುರದಿಂದ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಆರೋಪಿಯ ಬ್ಯಾಗ್ ವಿಚಿತ್ರವಾಗಿದ್ದ ಹಿನ್ನೆಲೆ ಅದನ್ನು ಗಮನಿಸಿದ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳು ಮೊಯ್ದೀನ್ನನ್ನು ತಡೆದಿದ್ದಾರೆ. ಈ ಪರಿಶೀಲನೆ ಸಂದರ್ಭ ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟಿದ್ದ ವಿವಿಧ ಪ್ರಭೇದಗಳ, ವಿವಿಧ ಗಾತ್ರಗಳ ಜೀವಂತ ಹಾವುಗಳು ಪತ್ತೆಯಾಗಿದೆ.ಮಾಹಿತಿ ತಿಳಿದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಿ 47 ಹೆಬ್ಬಾವು ಮತ್ತು ಎರಡು ಹಲ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್ ಮೊಯ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಸರೀಸೃಪಗಳ ಅಕ್ರಮ ಸಾಗಾಟದ ಜೊತೆಗೆ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವ ಹಿಂದಿನ ಉದ್ದೇಶ ಮತ್ತು ಈ ಕೃತ್ಯದಲ್ಲಿ ಶಾಮೀಲಾಗಿರುವ ಇನ್ನುಳಿದವರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.