Physical Abuse:ಸಾಮಾಜಿಕ ಜಾಲತಾಣದ ಮೂಲಕ ಲವ್! ಖಾಸಗಿ ಕ್ಷಣದ ಸೆರೆ, ಬೆದರಿಸಿ ಸ್ನೇಹಿತರ ಜೊತೆ ಸೇರಿ ಗ್ಯಾಂಗ್ ರೇಪ್!

Bengaluru girl raised complaint against physical Abuse

Physical Abuse: ಪ್ರೀತಿ ಮಾಯೆ ಹುಷಾರ್!! ಪ್ರೀತಿಯ ಬಲೆಯಲ್ಲಿ ಬಿದ್ದು ಮೋಸ ಹೋಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೇ ರೀತಿ ಮೋಸ ಹೋದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ (social media)ಪರಿಚಯವಾಗಿ ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸಿದ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಕರೆಸಿಕೊಂಡು ಗ್ಯಾಂಗ್‌ರೇಪ್‌ (Physical Abuse) ಮಾಡಿದ ಘಟನೆ ವರದಿಯಾಗಿದೆ.ಆಯಂಡಿ ಜಾರ್ಜ್ ಖಾಸಗಿ ಶಾಲೆಯ ಡ್ಯಾನ್ಸಿಂಗ್ ಟೀಚರ್ ಆಗಿದ್ದು, ಎರಡು ವರ್ಷಗಳ ಹಿಂದೆ ಆಂಡಿ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಯ( Love)ನಾಟಕವಾಡುತ್ತಿದ್ದ. ಇದರ ಜೊತೆಗೆ ಕೆಲ ಖಾಸಗಿ ಸಂದರ್ಭಗಳ ಫೋಟೊಗಳನ್ನು ಸೆರೆಹಿಡಿದುಕೊಂಡಿದ್ದನಂತೆ. ಆನಂತರ ಈ ಖಾಸಗಿ ಫೋಟೊ ಬಳಸಿಕೊಂಡು ಆಕೆಗೆ ಪೀಡಿಸುತ್ತಿದ್ದ. ಹೀಗಾಗಿ, ಯುವತಿ ಆತಂಕಗೊಂಡು ಆತನಿಂದ ಅಂತರ ಕಾಯ್ದುಕೊಂಡಿದ್ದಾಳೆ.

ಹೀಗಿದ್ದರೂ ಕೂಡ ಆತ ಫೋಟೊಗಳನ್ನು ಶೇರ್(Photo Share)ಮಾಡುವುದಾಗಿ ಆಗಾಗ ಹೆದರಿಸುತ್ತಿದ್ದ. ಅಷ್ಟೇ ಅಲ್ಲದೇ ಮೊಬೈಲ್ ಬಳಸಿ ವಿಡಿಯೋ (video )ಮಾಡಿಕೊಂಡಿದ್ದು, ಅದನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಆಗಾಗ ಅತ್ಯಾಚಾರ(Rape )ಎಸಗುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಕಾಮುಕ ತನ್ನ ಗೆಳೆಯರನ್ನೂ ಕೂಡ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರತ್ಯೇಕವಾಗಿ ಮತ್ತು ಗುಂಪಾಗಿ ಮೂವರೂ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಷ್ಟಕ್ಕೂ ತೃಪ್ತನಾಗದ ಆಯಂಡಿ ಜಾರ್ಜ್‌ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೊ, ವಿಡಿಯೋ ಶೇರ್ ಮಾಡಿದ್ದಾನೆ.

ಡಾನ್ಸ್ ಮಾಸ್ಟರ್ ಕಾಟ ತಾಳಲಾರದೆ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಕೊಡಿಗೆಹಳ್ಳಿ ಪೊಲೀಸರು (bangalore police) ಬಂಧಿಸಿದ್ದಾರೆ. ಡ್ಯಾನ್ಸ್ ಮಾಸ್ಟರ್ ಹಾಗು ದೇವಸ್ಥಾನದ ಇನ್ ಚಾರ್ಜ್ ಸೇರಿ ಆಯಂಡಿ ಜಾರ್ಜ್, ಸಂತೋಷ್, ಶಶಿ ಮೂವರನ್ನು ಪೋಲಿಸರು ಬಂಧಿಸಿದ್ದಾರೆ.ಆರೋಪಿಗಳ ಬಳಿ ಇದ್ದ ಮೊಬೈಲ್, ಪೆನ್ ಡ್ರೈವ್ ಸೇರಿದಂತೆ ಟೆಕ್ನಿಕಲ್ ಸಾಕ್ಷಿಗಳನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿರುವ ಆರೋಪಿ ಇದೇ ರೀತಿ ಬೇರೆ ಕೃತ್ಯದಲ್ಲಿ ಶಾಮೀಲಾಗಿದ್ದಾನೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.