Murder:ಸಹೋದರಿ ಮೇಲೆ ಕಣ್ಣು ಹಾಕಿದ ಕಿರಾತಕನ ಕಾಲು ಮುರಿದ ಸಹೋದರ! ಅನಂತರ ನಡೆದೇ ಹೋಯ್ತು ಭೀಕರ ಕೊಲೆ!!!

Kalburgi man killed a person for his old enimity

Murder: ಪ್ರೀತಿ ಮಾಯೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರೀತಿ ಪ್ರೇಮದ ಅವಸ್ಥೆಯಿಂದ ಆಗುವ ಅವಾಂತರ ಅಷ್ಟಿಷ್ಟಲ್ಲ. ಪ್ರೀತಿಯಿಂದ ಅನೈತಿಕ ಸಂಬಂಧ(Illegal Relationship)ಹೊಂದುವಂತೆ ತನ್ನ ಸಹೋದರಿಗೆ ಒತ್ತಾಯ ಮಾಡುತ್ತಿದ್ದ ವ್ಯಕ್ತಿಯ ಕಾಲನ್ನು ಯುವತಿಯ ಸಹೋದರ ಮುರಿದಿದ್ದ. ಇದಕ್ಕೆ ಪ್ರತಿಯಾಗಿ ಹಗೆ(Revenge )ತೀರಿಸಿಕೊಳ್ಳಲು ಕಾಯುತ್ತಿದ್ದ ವ್ಯಕ್ತಿ ಭೀಕರವಾಗಿ ಯುವತಿಯರು ಸಹೋದರರನ್ನು ಕೊಲೆಗೈದ(Murder )ಘಟನೆ ಭಾನುವಾರ ಜುಲೈ 30 ರಾತ್ರಿ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನಡೆದಿದೆ.

ಮಹಾಂತಪ್ಪ ಮೃತ ದುರ್ದೈವಿಯಾಗಿದ್ದು, ಈತನ ಸಹೋದರಿ ಸುನಿತಾಗೆ ಮದುವೆಯಾಗಿದ್ದು(Marraige), ಕೆಲವು ವರ್ಷಗಳ ಹಿಂದೆ ಆಕೆಯ ಪತಿ ನಿಧನರಾಗಿದ್ದಾರೆ. ತನ್ನ ಗಂಡನ ನಿಧನದ(Death)ಬಳಿಕ ಮೂವರು ಮಕ್ಕಳೊಂದಿಗೆ ಸುನಿತಾ ತವರು ಸೇರಿದ್ದರಂತೆ. ಹೊಟ್ಟೆ ಪಾಡಿಗೆ ಕೂಲಿ ಕೆಲಸ ಮಾಡಿಕೊಂಡಿದ್ದಾಕೆಯ ಮೇಲೆ ಆರೋಪಿ ಪ್ರಶಾಂತ್ ಕಣ್ಣು ಹಾಕಿದ್ದ. ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಸುನಿತಾಗೆ ಕಾಟ ನೀಡುತ್ತಿದ್ದನಂತೆ. ಈ ನಡುವೆ ಸುನಿತಾಳ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಪ್ರಶಾಂತ್ ಎಸಗಲು ಮುಂದಾಗಿದ್ದ. ಹೀಗಾಗಿ, ಯುವತಿಯ ಸಹೋದರ ಮಹಾಂತಪ್ಪ ಈ ವಿಚಾರಕ್ಕೆ. ಕೋಪಗೊಂಡು ಪ್ರಶಾಂತನ ಕಾಲು ಮುರಿದಿದ್ದ. ಇದರಿಂದ ಕೆರಳಿದ ಪ್ರಶಾಂತ್ ಮಹಾಂತಪ್ಪನ ಮೇಲೆ ಹಗೆ ಸಾಧಿಸುತ್ತಿದ್ದ.ಅದೇ ರೀತಿ ನಿನ್ನೆ ಮಹಾಂತಪ್ಪರನ್ನು ಪ್ರಶಾಂತ್ ಹಾಗೂ ಆತನ ಸಹಚರರು ಪ್ಲಾನ್ ಮಾಡಿ ಮುಗಿಸಲು ಸ್ಕೆಚ್ ಹಾಕಿ ಕೊಲೆಗೈದ್ದಿದ್ದಾರೆ.

ಚೌಡಾಪುರ ಗ್ರಾಮದಲ್ಲಿರುವ ಬಾರ್ ಆಂಡ್ ರೆಸ್ಟೋರಂಟ್ಗೆ ಮಹಾಂತಪ್ಪ ತನ್ನ ಸಂಬಂಧಿಯ ಜೊತೆಗೆ ತೆರಳಿದ್ದು, ಈ ವೇಳೆ ಪ್ರಶಾಂತ್ ಮತ್ತು ಆತನ ಸಹಚರರು ಮಹಾಂತಪ್ಪ ಅವರನ್ನು ಮಾರಕಾಸ್ತ್ರದ ಮೂಲಕ ಅಟ್ಟಾಡಿಸಿಕೊಂಡು ಬಂದು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ(Murder )ಹತ್ಯೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೊಲೆ ಪ್ರಕರಣದ ಕುರಿತಂತೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ(Police Complaint)ಪ್ರಕರಣ ದಾಖಲಾಗಿದೆ. ಮಹಾಂತಪ್ಪರನ್ನು ಚೌಡಾಪುರ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ದಶರಥ್ ಎಂಬವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ, ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.