love Jihad: ಹಿಂದೂ ಯುವತಿ ಜೊತೆ ದೇವಸ್ಥಾನಕ್ಕೆ ಬಂದ ಅನ್ಯಕೋಮಿನ ಯುವಕ! ಮುಂದೇನಾಯ್ತು?

Kannuj love jihad latest news

Love Jihad: ಉತ್ತರ ಪ್ರದೇಶದ (Uttar Pradesh)ಕನೌಜ್ ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಕುಳಿತಿದ್ದನ್ನು ಕಂಡು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಅನ್ಯಕೋಮಿನ ಯುವಕನೊಬ್ಬ( muslim man online friend)ಹಿಂದೂ ಯುವತಿಯೊಂದಿಗೆ ಕುಳಿತಿದ್ದನ್ನು ಕಂಡು ಜನರು ಆತನಿಗೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವರದಿಗಳ ಅನುಸಾರ, ಯುವಕ ಹಿಂದೂ ಎಂದು ಪರಿಚಯ ಮಾಡಿಕೊಂಡು ಸಾಮಾಜಿಕ ಮಾಧ್ಯಮದ ಮೂಲಕ ಹುಡುಗಿಯೊಂದಿಗೆ ಸ್ನೇಹ(Friendship) ಬೆಳೆಸಿದ್ದಾನೆ.ವೈರಲ್ ಆಗಿರುವ ವಿಡಿಯೋದಲ್ಲಿ( UP love jihad video)ದೇವಸ್ಥಾನದಲ್ಲಿ ಸೇರಿದ್ದ ಜನರ ಗುಂಪೊಂದು ಅನ್ಯಕೋಮಿನ ಯುವಕನಿಗೆ ಸರಿಯಾಗಿ ಥಳಿಸಿರುವುದನ್ನು ನೋಡಬಹುದು.

ಉತ್ತರ ಪ್ರದೇಶದ ಜಿಲ್ಲೆಯಲ್ಲಿ ಲವ್ ಜಿಹಾದ್ (Love Jihad) ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಒಂದು ಗ್ಯಾಂಗ್ ಕೂಡ ಸಕ್ರಿಯವಾಗಿದೆಯಂತೆ.ಹೀಗಾಗಿ, ಸ್ಥಳೀಯರು ಹಿಂದೂ ಯುವತಿಯೊಂದಿಗೆ ದೇವಸ್ಥಾನದ (Temple)ಬಳಿ ಅನ್ಯಕೋಮಿನ ಕುಳಿತಿದ್ದಾಗ ಆತನನ್ನು ಗುರುತಿಸಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭ ಯುವಕ ಕನೌಜ್ ಜಿಲ್ಲೆಯ ಗುರ್ಸಹೈಗಂಜ್ ಪ್ರದೇಶದ ನಿವಾಸಿ ಅಮನ್ ಖಾನ್ ಎನ್ನುವ ವಿಚಾರ ಕೆಲವರಿಗೆ ಗೊತ್ತಾಗಿದೆ.

ಅನ್ಯಕೋಮಿನ ವ್ಯಕ್ತಿ ಯಾಗಿರುವ ನೀನು ದೇವಸ್ಥಾನದಲ್ಲಿ ಹುಡುಗಿಯೊಂದಿಗೆ(Hindu Girl)ಏನು ಮಾಡುತ್ತಿದ್ದೀಯಾ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಯುವತಿಯನ್ನು ಪ್ರಶ್ನಿಸಿದಾಗ ಆತ ನನಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದು, ಆತ ತನ್ನಲ್ಲಿ ಹಿಂದೂ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿಸಿದ್ದಾಳೆ. ಈ ನಡುವೆ ಸ್ಥಳೀಯರು ಅನ್ಯಕೋಮಿನ ಯುವಕನಿಗೆ ಹಲ್ಲೆ ಮಾಡಿದ್ದು, ಈ ವಿಡಿಯೋದಲ್ಲಿ ಯುವಕ ತಪ್ಪಾಯಿತು ಎಂದು ಕೇಳಿಕೊಂಡರು ಸರಿಯಾಗಿ ಥಳಿಸಿದ್ದಾರೆ. ಸದ್ಯ, ಸ್ಥಳೀಯರು ಲವ್ ಜಿಹಾದ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಲೀಸರಿಗೆ ಈ ಮಾಹಿತಿ ತಲುಪಿದ್ದು, ಅನ್ಯಕೋಮಿನ ಯುವಕನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.