Boyfriend Cheating: ಮತ್ತೋರ್ವ ಹುಡುಗಿ ಜೊತೆ ಬೆಡ್‌ರೂಂ ನಲ್ಲಿದ್ದ ಪ್ರಿಯಕರ! ಪ್ರಿಯತಮೆ ಸೇಡು ತೀರಿಸಿಕೊಂಡ ರೀತಿ ನಿಜಕ್ಕೂ ಊಹಿಸಲಸಾಧ್ಯ!!

Latest news Boyfriend Cheating lover in a bedroom with another girl

ಸಂಬಂಧಗಳೆಂದರೆ ಬಹಳ ಸೂಕ್ಷ್ಮ ವಿಷಯ. ಇದರಲ್ಲಿ ಸುಳ್ಳು ಮತ್ತು ಮೋಸವಾದರೆ ಇದರ ಪರಿಣಾಮ ಬೇರೆ ರೀತಿಯದ್ದೇ ಇರುತ್ತದೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಗೆಳತಿಯೋರ್ವಳು ತನ್ನ ಗೆಳೆಯನಿಂದ ಮೋಸ ಹೋಗುತ್ತಿದ್ದರೂ, ಅರಿಯದೇ ಹೋಗಿದ್ದಳು. ಆದರೆ ಯಾವಾಗ ವಿಷಯ ತಿಳಿಯಿತೋ ಆಕೆ ತನ್ನ ಪ್ರಿಯಕರನಿಗೆ ಪಾಠ ಕಲಿಸಲು ನಿರ್ಧಾರ ಮಾಡಿದ್ದಾಳೆ. ಆದರೆ ಆ ಯುವತಿ ಮಾತ್ರ ಸೇಡು ತೀರಿಸಿಕೊಂಡ ವಿಚಿತ್ರ ರೀತಿಯನ್ನು ಮಾತ್ರ ನೀವು ಊಹಿಸಲೂ ಸಾಧ್ಯವಿಲ್ಲ.

ಲೋಲಾ ಮೇಸನ್‌ ಎಂಬಾಕೆ ರೂಪದರ್ಶಿ. ಈಕೆ ತನ್ನ ಪ್ರಿಯಕರನ ವಂಚನೆಯನ್ನು ಕಂಡು ಹಿಡಿದಿದ್ದಳು. ಅಂದಿನಿಂದ ಆಕೆಯ ಮನಸ್ಸಿನಲ್ಲಿ ಆತನಿಗೆ ಪಾಠ ಕಲಿಸಬೇಕೆಂದು ಯೋಚಿಸುತ್ತಿದ್ದಳು. ತನ್ನ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಿಯಕರನ ಸಹೋದರಿಯೊಂದಿಗೆ ಸಂಬಂಧ ಬೆಳೆಸಿದ್ದಾಗಿ ಆಕೆ ಖುದ್ದು ಹೇಳಿದ್ದಾಳೆ. ಇದು ನಿಸ್ಸಂಶಯವಾಗಿ ನಿಮಗೊಂದು ಆಘಾತಕಾರಿ ಸುದ್ದಿ ಎಂದೇ ಹೇಳಬಹುದು.

28 ವರ್ಷದ ಲೋಲಾ ತನ್ನ ಲೈಂಗಿಕ ಜೀವನದ ಬಗ್ಗೆ ತನ್ನ ಅಭಿಮಾನಿಗಳಿಗೆ ತುಂಬಾ ಪ್ರಾಮಾಣಿಕ ಉತ್ತರಗಳನ್ನು ನೀಡಿದ್ದಾಳೆ. ಸಂಬಂಧದಲ್ಲಿ ಮೋಸ ಹೋಗಿದ್ದೀರಾ ಎಂದು ಕೇಳಿದಾಗ. ಈ ಕುರಿತು ಲೋಲಾ ಅವರು, ನಾನು ಹದಿಹರೆಯದಲ್ಲಿ, ಹಾಸಿಗೆಯ ಮೇಲೆ ನನ್ನ ಗೆಳೆಯ ಬೇರೆಬ್ಬರೊಂದಿಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ. ಖಂಡಿತಾ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಪಣ ತೊಟ್ಟಿದ್ದೆ ಎಂದು ಹೇಳಿದ್ದಳು.

ಇದಾದ ಬಳಿಕ ಅಭಿಮಾನಿಯ ಪ್ರಶ್ನೆಗೆ ಮಹಿಳೆ ಹೇಳಿದ್ದನ್ನೆಲ್ಲ ಕೇಳಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ತನ್ನ ಗೆಳೆಯನ ಸಹೋದರಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಗಿ ಲೋಲಾ ಹೇಳಿದ್ದಾಳೆ

Leave A Reply

Your email address will not be published.