Viral video:ಜೋಡಿಗಳದ್ದು ಆಯ್ತು, ಈಗ ಹುಡುಗಿಯರ ಸರದಿ! ಬೈಕ್‌ನಲ್ಲೇ ಎದುರು ಬದುರು ಕುಳಿತು, ಲಿಪ್‌ಲಾಕ್‌ ಮಾಡಿದ ಹುಡುಗಿಯರು! ವೀಡಿಯೋ ವೈರಲ್‌

Latest news Viral video Girls Kissing On Bike Video

Girls Kissing On Bike Video: ದಿನಂಪ್ರತಿ ಒಂದಲ್ಲ ಒಂದು ವಿಡಿಯೋ(Video) ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video)ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮೊಗದಲ್ಲಿ ಹಾಸ್ಯ ತರಿಸಿದರೆ,ಮತ್ತೆ ಕೆಲವು ನಮ್ಮ ಕಣ್ಣ ಮುಂದೆ ಜೀವನದ ಸ್ವಾರಸ್ಯಕರ ಸಂಗತಿಯ ಕುರಿತ ವಿಚಾರಗಳನ್ನೂ ಅನಾವರಣ ಮಾಡುತ್ತದೆ. ಇದೀಗ, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಅಪ್ಪಿಕೊಂಡು ಚುಂಬಿಸುತ್ತ ವೇಗವಾಗಿ ಬೈಕ್ ನಲ್ಲಿ ಸಂಚರಿಸುವ ವೀಡಿಯೋ ವೈರಲ್ ಆಗುತ್ತಿದೆ.

ವಾಹನ ಚಾಲನೆ ಕುರಿತು ಸರ್ಕಾರ ಅದೆಷ್ಟೇ ಕ್ರಮ ಕೈಗೊಂಡರು ಕೂಡ ಯುವಜನತೆ ಮಾತ್ರ ತಮ್ಮ ಹುಚ್ಚಾಟವನ್ನೂ ನಿಲ್ಲಿಸದೇ ಸಾವಿನ ದವಡೆಗೆ ಸಿಲುಕಿದ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಹುಡುಗ – ಹುಡುಗಿಯರು ರೊಮ್ಯಾನ್ಸ್ ಮಾಡಿಕೊಂಡು ರೂಲ್ಸ್ ಬ್ರೇಕ್ ಮಾಡುತ್ತಾ ಓಡಾಡುವ ಅದೆಷ್ಟೋ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ನಡುವೆ, ಚಲಿಸುತ್ತಿರುವ ಬೈಕ್‌ನಲ್ಲಿ ಜೋಡಿಗಳು ಸಾರ್ವಜನಿಕವಾಗಿ ಲಿಪ್ ಲಾಕ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ, ಇಲ್ಲಿಯವರೆಗೆ ಜೋಡಿಗಳದ್ದು ಆಯ್ತು, ಈಗ ಹುಡುಗಿಯರ ಸರದಿ! ಬೈಕ್‌ನಲ್ಲೇ ಎದುರು ಬದುರು ಕುಳಿತು, ಲಿಪ್‌ಲಾಕ್‌ ಮಾಡಿದ ಹುಡುಗಿಯರ (Girls Kissing On Bike Video) ವೀಡಿಯೋ ವೈರಲ್‌ ಆಗಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಇಬ್ಬರು ಹುಡುಗಿಯರು ಯಾವುದೇ ಭೀತಿಯಿಲ್ಲದೆ ರೂಲ್ಸ್ ಬ್ರೇಕ್ ಮಾಡಿಕೊಂಡು ವೇಗವಾಗಿ ಚಲಿಸುತ್ತಿರುವ ಬೈಕ್‌ನಲ್ಲಿ ಲಿಪ್‌ಲಾಕ್ ಮಾಡುತ್ತಿರುವುದನ್ನು ನೋಡಬಹುದು. ಚಲಿಸುತ್ತಿರುವ ಬೈಕ್ ನಲ್ಲಿ ಇಬ್ಬರೂ ಹುಡುಗಿಯರು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಅಪ್ಪಿಕೊಂಡು ಚುಂಬಿಸುವ ದೃಶ್ಯಗಳು ವೈರಲ್ ಆಗಿದೆ. ವೇಗವಾಗಿ ಚಲಿಸುತ್ತಿರುವ ಬೈಕ್ ನಲ್ಲಿ ಹುಚ್ಚಾಟವಾಡುತ್ತ ಸಾಗುವಾಗ ಮುಂದಿನಿಂದ ವಾಹನ ಬಂದಿದ್ದರೆ ಗತಿಯೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ರೀತಿ ರಸ್ತೆಯಲ್ಲಿ ಸಂಚರಿಸುವಾಗ ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವಕ್ಕೆ ಕುತ್ತು ಬಂದರು ಅಚ್ಚರಿಯಿಲ್ಲ.

ಸದ್ಯ, ಈ ಘಟನೆ ನಡೆದ ನಿಖರವಾದ ಸ್ಥಳವೆಲ್ಲಿ ಎಂಬುದು ಬಹಿರಂಗವಾಗಿಲ್ಲ. ಆದರೆ ಈ ಬೈಕ್‌ನ ನೋಂದಣಿ ಫಲಕವನ್ನು ಗಮನಿಸಿದಾಗ ಈ ವೀಡಿಯೊವನ್ನು ತಮಿಳುನಾಡಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಇಬ್ಬರು ಹುಡುಗಿಯರು ಚುಂಬಿಸುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.ಸಂಚಾರಿ ನಿಯಮಗಳನ್ನು ಬ್ರೇಕ್ ಮಾಡಿ ಹುಚ್ಚು ಸಾಹಸಕ್ಕೆ ಕೈ ಹಾಕಿರುವ ಯುವತಿಯರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಈ ರೀತಿ ನಿಯಮಗಳನ್ನೂ ಗಾಳಿಗೆ ತೂರಿ ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ghantaa ಎನ್ನುವ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಇಲ್ಲಿಯವರೆಗೆ ವಿಡಿಯೋವನ್ನು 2.6 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 80,000 ಲೈಕ್‌ಗಳು ಬಂದಿದ್ದು, ಇದನ್ನು ಪಕ್ಕದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ವೀಡಿಯೋ ಮಾಡಿದ್ದಾರೆ ಎನ್ನಲಾಗಿದೆ.

 

Leave A Reply

Your email address will not be published.