ಮಂಗಳೂರಿನಲ್ಲಿ ರಸ್ತೆ ಹೊಂಡಕ್ಕೆ 2ನೇ ಬಲಿ ! ಅಮಾಯಕರ ಸಾವಿಗೆ ಹೊಣೆ ಯಾರು?

ಮಂಗಳೂರು : ಮಂಗಳೂರು(Mangaluru) ನಗರದ ಬಿಕರ್ನಕಟ್ಟೆ ಬಳಿ ರಸ್ತೆ ನಡುವಿನ ಹೊಂಡ ತಪ್ಪಿಸಲು ಪ್ರಯತ್ನ ಪಟ್ಟ, ಬೈಕ್ ಸವಾರ ನಿಂತಿದ್ದ ಓಮ್ಮಿ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ (Death )ಘಟನೆ ಸಂಭವಿಸಿದೆ.ಮಂಗಳೂರಿನಲ್ಲಿ ರಸ್ತೆ ಹೊಂಡದ ಪರಿಣಾಮ ಇದೀಗ ಎರಡನೇ ಬಲಿಯಾಗಿದೆ

ಮೃತಪಟ್ಟ ಯುವಕನನ್ನುಅಂಕಿತ್ ಜಿ.( 21) ಎಂದು ಗುರುತಿಸಲಾಗಿದೆ. ಈತ ಕೋಡಿಕಲ್ ನಿವಾಸಿ ಎನ್ನಲಾಗಿದ್ದು, ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಅಂಕಿತ್ ತನ್ನ ಗೆಳೆಯ ಆರ್ಯನ್ ಅವರನ್ನು ಕುಲಶೇಖರದಲ್ಲಿರುವ ಅವರ ಮನೆಗೆ ಬಿಟ್ಟು ಕೋಡಿಕಲ್ ಕಡೆಗೆ ಹಿಂತಿರುಗುತ್ತಿದ್ದ ಸಂದರ್ಭ ಈ ದುರ್ಘಟನೆ (Accident) ಸಂಭವಿಸಿದೆ.

ಬಿಕರ್ನಕಟ್ಟೆಯ ಮಸೀದಿ ಎದುರು ರಸ್ತೆ ಹೊಂಡ ತಪ್ಪಿಸಲು ಯತ್ನಿಸಿ ರಸ್ತೆ ಬದಿ ನಿಲ್ಲಿಸಿದ್ದ ಓಮ್ನಿ ಕಾರಿನ ಹಿಂಬದಿಗೆ ಢಿಕ್ಕಿಯಾಗಿತ್ತು. ಅಂಕಿತ್ ಬೈಕ್‌ನಿಂದ ಚರಂಡಿಗೆ ಬಿದ್ದಿದ್ದು, ಬೈಕ್ ಪಲ್ಟಿಯಾಗಿ ರಸ್ತೆ ಪಕ್ಕದ ನರ್ಸರಿಯ ಗೇಟಿಗೆ ಡಿಕ್ಕಿ ಹೊಡೆದು ನಿಂತಿದೆ. ಈ ಘಟನೆ ವೇಳೆ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡ ಅಂಕಿತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾದರು ಕೂಡ ಆಸ್ಪತ್ರೆಯಲ್ಲೇ ಅಂಕಿತ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕ ಅಂಕಿತ್ ಪ್ರತಿಭಾನ್ವಿತ ವಿದ್ಯಾರ್ಥಿ ಎನ್ನಲಾಗಿದ್ದು, ಇವರು ತಂದೆ, ತಾಯಿ ಮತ್ತು ಅಣ್ಣನನ್ನು ಅಗಲಿದ್ದಾರೆ.

Leave A Reply

Your email address will not be published.