Maharashtra:ನಿರ್ಮಾಣ ಹಂತದಲ್ಲಿ ಅವಘಡ; ಕ್ರೇನ್ ಕುಸಿದು 17 ಮಂದಿ ದಾರುಣ ಸಾವು!!!

Maharashtra : ಮಹಾರಾಷ್ಟ್ರದ ಥಾಣೆಯ ಶಹಾಪುರದಲ್ಲಿ ನಿರ್ಮಾಣ ಸ್ಥಳದಲ್ಲಿ ನಿನ್ನೆ ತಡರಾತ್ರಿ ಕ್ರೇನ್ ಕುಸಿದು 17 ಮಂದಿ ಕಾರ್ಮಿಕರು(labours )ಸಾವನ್ನಪ್ಪಿದ್ದಾರೆ (Death)ಎಂದು ತಿಳಿದುಬಂದಿದೆ.

 

ಸಮೃದ್ಧಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರ ಗುಂಪಿನ ಮೇಲೆ ಕ್ರೇನ್ ಬಿದ್ದಿದ್ದು, ಸ್ಥಳದಲ್ಲೇ ಗಾಯಾಳುಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಎಕ್ಸ್ಪ್ರೆಸ್ವೇಯ ಮೂರನೇ ಹಂತದ ನಿರ್ಮಾಣದ ವೇಳೆ ಗರ್ಡರ್ ಯಂತ್ರ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಕಾರ್ಮಿಕರು 17 ಮಂದಿ  ಸಾವನ್ನಪ್ಪಿದ್ದ ಘಟನೆ ನಡೆದಿದೆ. ಗಾಯಗೊಂಡ ಮೂವರು ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗೆ (Hospital)ಸಾಗಿಸಲಾಗಿದ್ದು, ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಕುಸಿತ ಆದಲ್ಲಿ ಐವರು ಸಿಲುಕಿಕೊಂಡಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮಂಗಳವಾರ ಮುಂಜಾನೆ ಶಹಪುರದ ಸರ್ಲಾಂಬೆ ಗ್ರಾಮದ ಬಳಿ ಕಾರ್ಮಿಕರು ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಮೂರನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದಾಗ ಅಪಘಾತ ಸಂಭವಿಸಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ತುರ್ತು ಸೇವೆಗಳು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.

 

701 ಕಿಲೋಮೀಟರ್ ಉದ್ದದ ಸಮೃದ್ಧಿ ಮಹಾಮಾರ್ಗ್ ಅನ್ನು ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ ಎಂದು ಕರೆಯಲಾಗುತ್ತದೆ. ಇದು ಎರಡು ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದು, ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ನಡೆಸುತ್ತಿದೆ. ಇದರ ಮೊದಲ ಹಂತವು ನಾಗ್ಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಅವರು ಉದ್ಘಾಟನೆ ಮಾಡಿದ್ದರು.

 

 

Leave A Reply

Your email address will not be published.