Siddaramaiah: ವಿರೋಧ ಪಕ್ಷದ ನಾಯಕನ ಹುಡುಕಾಡಿ ಸೋತಾಯ್ತು, ಕೊನೆಗೆ ಸಿದ್ರಾಮಯ್ಯನೇ ಹುಡುಕಿಕೊಟ್ರು ಹೊಸ ವಿಪಕ್ಷ ನಾಯಕಿಯನ್ನು- ಯಾರದೂ..?

Chief minister of Karnataka Siddaramaiah surprise visits to udupi government hostels

Congress: ಕಾಂಗ್ರೆಸ್ ನ (Congress)ಈ ಐದು ಗ್ಯಾರೆಂಟಿಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ, ಯೋಜನೆ ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳ ಮುಂದಿಟ್ಟು ಆ ಮೂಲಕ ಬಹುಮತ ಸರ್ಕಾರ (Government)ರಚಿಸಿದೆ. ಹೀಗಿದ್ದರೂ ಕೂಡ ಯಾಕೋ ವಿರೋಧ ಪಕ್ಷದ ನಾಯಕರನ್ನು ಆರಿಸುವಲ್ಲಿ ಅದೇಕೋ ಕಮಲ ಪಾಳಯ( BJP)ನಿರುತ್ಸಾಹ ತೋರುತ್ತಿದೆ. ಅಥವಾ ರಾಜ್ಯದಲ್ಲಿ ಸಮರ್ಥ ನಾಯಕರೇ ಇಲ್ಲವಾ? ಅನ್ನೋದು ಗೊತ್ತಿಲ್ಲ. ಇಲ್ಲಿಯವರೆಗೆ ಕಾದು ಕಾದು ಸುಸ್ತಾಗಿ ನೋಡುವಷ್ಟು ನೋಡಿ ಕಮಲ ಪಾಳಯದ ನಿರುತ್ಸಾಹ ನಡೆ ನೋಡಿ ಸುಸ್ತಾಗಿರೋ ಸಿಎಂ ಸಿದ್ದರಾಮಯ್ಯನವರು ಇದೀಗ ತಾವೇ ಖುದ್ದಾಗಿ ವಿರೋಧ ಪಕ್ಷದ ನಾಯಕಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ ಅಂತೀರಾ? ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೋಮವಾರ ಉಡುಪಿಗೆ ಭೇಟಿ ನೀಡಿದ್ದು, ಅಲ್ಲಿ ವಿರೋಧ ಪಕ್ಷದ ನಾಯಕಿಗೆ ಹುಡುಕಾಟ ನಡೆಸುತ್ತಿದ್ದಾರಂತೆ!! ಹೀಗೊಂದು ಸುದ್ದಿ ಕೇಳಿ ಬರುತ್ತಿದೆ. ಉಡುಪಿಯ ಕೆಡಿಪಿ ಸಭೆಗೆ ಆಗಮಿಸಿರೋ ಸಿದ್ದರಾಮಯ್ಯ ಅವರು ಸರಕಾರಿ ಸಭೆ, ಸಂಘ, ಸಂಸ್ಥೆ, ಪಕ್ಷದ ಕಾರ್ಯಕರ್ತರ ಭೇಟಿ ಮಾಡಲು ಮನವಿಯ ನಡುವೆಯೂ ನಾಡದೊರೆ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿ ಗಮನ ಸೆಳೆದಿದ್ದಾರೆ. ಹೌದು, (Udupi)ಜಿಲ್ಲೆಯ ಹಾಸ್ಟೆಲ್ (Hostel)ಗೆ ದಿಢೀರ್ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯನವರು ಅಚ್ಚರಿ ಮೂಡಿಸಿದ್ದಾರೆ. ಹೌದು, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ಆನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿನಿಯರೊಂದಿಗೆ ಕಾಲ ಕಳೆದಿದ್ದಾರೆ. ಊಟ, ತಿಂಡಿ, ಶುಚಿತ್ವ ವ್ಯವಸ್ಥೆ ಹೇಗಿದೆ ಎಂಬುದನ್ನು ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಬನ್ನಂಜೆ ಸರಕಾರಿ ನಿಲಯದ ಸಮೀಪದಲ್ಲಿರುವ ಹಿಂದುಳಿದ ವರ್ಗಗಳ ದೇವರಾಜ ಅರಸು ಮೆಟ್ರಿಕ್‌ ನಂತರದ ಹಾಸ್ಟೆಲ್‌ಗೆ ಮೊದಲು ಭೇಟಿ ನೀಡಿದ್ದಾರೆ.

ಭೇಟಿ ವೇಳೆ ಸಿದ್ದು ವಿದ್ಯಾರ್ಥಿನಿಯರ ಜತೆ ಚರ್ಚಿಸುವಾಗ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತೋರಿಸಿ ಇವರು ಯಾರೆಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದು ಕೂಡ ಕಂಡು ಬಂತು. ಅಲ್ಲದೆ ಅನೇಕ ರೋಚಕ ಘಟನೆಗಳಿಗೆ ಸಾಕ್ಷಿಯಾದ ಸಿಎಂ ಉಡುಪಿ ಭೇಟಿ ವೇಳೆ ಹಾಸ್ಟೆಲ್‌ನ ಬೋರ್ಡ್‌ನಲ್ಲಿ ವಿದ್ಯಾರ್ಥಿ ನಾಯಕಿಯರ ಸಮಿತಿಯ ಪ್ರಧಾನ ಮಂತ್ರಿ, ಆರೋಗ್ಯ ಮಂತ್ರಿ ಪಟ್ಟಿಯನ್ನು ನೋಡಿದ ಸಿಎಂ ನಡೆದುಕೊಂಡ ವೈಖರಿ ಕಂಡು ಮಕ್ಕಳು ಖುಷಿ ಪಟ್ಟಿದ್ದಾರೆ. ಹಾಸ್ಟೆಲ್ ಬೋರ್ಡ್ ನಲಿದ್ದ ಪಟ್ಟಿ ನೋಡಿ ಅವರು ವಿರೋಧ ಪಕ್ಷದ ನಾಯಕಿ ಯಾರಮ್ಮ? ಎಲ್ಲಿದ್ದಿಯಮ್ಮ ಎಂದು ಪ್ರಶ್ನಿಸಿ ಹಾಸ್ಯ ಮಾಡಿದ ಘಟನೆ ಕೂಡ ನಡೆದಿದೆ.

ಇನ್ನು ಸಿಎಂ ಅವರನ್ನು ನೇರವಾಗಿ ಕಂಡ ವಿದ್ಯಾರ್ಥಿನಿಯರು (Students)ಅಚ್ಚರಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ನ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿನಿಯರು ಮಲಗುವ ಬೆಡ್‌ಗಳ ವ್ಯವಸ್ಥೆಯನ್ನು ಪರಿಶೀಲಿಸಿ, ಊಟ, ತಿಂಡಿ ಸರಿಯಾಗಿ ಕೊಡುತ್ತಾರ ? ನೀರಿನ ಸಮಸ್ಯೆ ಇದೆಯಾ ? ಆರೋಗ್ಯ ಪರೀಕ್ಷೆಗೆ ಡಾಕ್ಟರ್‌ ಬರುತ್ತಾರ ? ಎಂದೆಲ್ಲ ಪ್ರಶ್ನೆ ಮಾಡಿರುವ ವಿದ್ಯಾರ್ಥಿನಿಯರ ಯೋಗ ಕ್ಷೇಮದ ಬಗ್ಗೆ ವಿಚಾರಣೆ ಮಾಡಿದ ಸಿದ್ಧರಾಮಯ್ಯನವರು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Leave A Reply

Your email address will not be published.