Revenge Story:ಹೀಗೂ ರಿವೇಂಜ್ ತಗೋತಾರಾ ?ಬ್ರೇಕಪ್ ನಂತ್ರ ಸೇಡು ತೀರಿಸಿಕೊಳ್ಳಲು ಜೋಮ್ಯಾಟೋ ಮೊರೆ ಹೋದ Ex ಗರ್ಲ್ ಫ್ರೆಂಡ್ !!

Ex girlfriend love revenge on boyfriend for love failure in bhopal

Bhopal: ಪ್ರೀತಿ ಮಾಯೆ ಹುಷಾರ್!! ಪ್ರೀತಿ ಪ್ರೇಮ ಎಂದು ಲವ್ವಲ್ಲಿ ಬಿದ್ದು ಲವ್ ಫೇಲ್ಯೂರ್(Love Failure)ಆಗಿಬಿಟ್ಟರೆ ನಿಮಗೂ ಹೀಗೆ ಆಗಬಹುದೇನೋ!! ಸ್ವಲ್ಪ ಎಚ್ಚರ ವಹಿಸಿ!! ಇದೊಂದು ಬ್ರೇಕಪ್ ರೀವೆಂಜ್ ಕಹಾನಿ!!! ಹೀಗೂ ಕೂಡ ರಿವೇಂಜ್ ತೀರಿಸಿಕೊಳ್ಳಬಹುದಾ? ತನ್ನ ಎಕ್ಸ್ ಬಾಯ್ ಫ್ರೆಂಡ್ ಗೆ ಸೇಡು ತೀರಿಸಿಕೊಳ್ಳಲು ಜೊಮ್ಯಾಟೋ (Zomato)ಮೊರೆ ಹೋಗಿದ್ದಾಳೆ.

ಯುವತಿಯೊಬ್ಬಳು, ಪ್ರಿಯಕರನ ಮೇಲೆ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಹಿಡಿದ ದಾರಿಯೇ ಭಿನ್ನ.ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭೋಪಾಲ್ನ ಅಂಕಿತಾ ಮತ್ತು ಆಕೆಯ ಮಾಜಿ ಪ್ರಿಯಕರನ ನಡುವೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದಾರೆ. ಈ ನಡುವೆ ಮಾಜಿ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಯುವತಿ ಅತನ ಮೇಲೆ ಹಗೆ ಸಾಧಿಸಲು ಜೊಮ್ಯಾಟೋವನ್ನೇ ತನ್ನ ದಾಳವನ್ನಾಗಿ ಬಳಸಿಕೊಂಡಿದ್ದಾರೆ.

ತನ್ನ ಮಾಜಿ ಗೆಳೆಯನ ( Ex – Boyfriend)ಮನೆಗೆ Zomato ಮೂಲಕ ಆರ್ಡರ್‌ಗಳನ್ನು ಮಾಡಿ ಕಳುಹಿಸಿದ್ದಾಳೆ. ಆರ್ಡರ್‌ಗಳನ್ನು ತೆಗೆದುಕೊಂಡ ಜೊಮ್ಯಾಟೋ ಬಾಯ್‌ಗೆ ನಾನು ಆರ್ಡರ್ ಮಾಡಿಲ್ಲ, ಹಣ ನೀಡುವುದಿಲ್ಲ ಎಂದು ಅಂಕಿತಾ ಮಾಜಿ ಗೆಳೆಯ ತಿಳಿಸಿದ್ದಾನೆ. ಇದು ಒಂದು ಬಾರಿ ನಡೆದರೆ ಪರವಾಗಿಲ್ಲ. ಇದು ಮತ್ತೇ ಮತ್ತೇ ಮರುಕಳಿಸಿದರೆ ಯಾರು ತಾನೇ ಸುಮ್ಮನಿರುತ್ತಾರೆ. ಇಬ್ಬರ ಜಗಳದಿಂದ ಬೇಸತ್ತ ಜೊಮ್ಯಾಟೋ ನೇರವಾಗಿ ಟ್ವಿಟರ್‌ನಲ್ಲಿಯೇ ಅಂಕಿತಾಗೆ ಶಾಕ್ ನೀಡಿದೆ.

ಕ್ಯಾಶ್ ಆನ್ ಡೆಲಿವರಿ(Cash On Delivery)ಹೆಸರಿನಲ್ಲಿ ಆರ್ಡರ್ ಬುಕ್(Order Book)ಮಾಡಿ ಮಾಜಿ ಬಾಯ್ ಫ್ರೆಂಡ್ ಗೆ ತೊಂದರೆ ಮಾಡಲು ಮುಂದಾದ ತೊಂದರೆ ಕೊಡಲು ಯತ್ನಿಸಿದ್ದಾಳೆ. ಮೂರು ಬಾರಿ ಇದೇ ರೀತಿ ಮಾಡಿದ್ದು,ಆ ಬಳಿಕ ನಾನು ಆರ್ಡರ್ ಮಾಡಿಲ್ಲ, ಹಣ ನೀಡುವುದಿಲ್ಲ ಎಂದು ಅಂಕಿತಾ ಮಾಜಿ ಗೆಳೆಯ ವಾದಿಸುತ್ತಿದ್ದಾನೆಂದು Zomato ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನು ಇದೆ ಟ್ರಿಕ್ಸ್ ಅನ್ನು ಇನ್ನುಳಿದ ಬ್ರೇಕಪ್ ಜೋಡಿಗಳು ಅನುಕರಣೆ ಮಾಡಿದರೂ ಅಚ್ಚರಿಯಿಲ್ಲ.

Leave A Reply

Your email address will not be published.