IAS Intresting Question: ನಿಮ್ಮ ತಂಗಿಯ ಜತೆ ನಾನು ಓಡಿ ಹೋದರೆ ನೀವೇನು ಮಾಡ್ತೀರಾ ? ಈ IAS ಪ್ರಶ್ನೆಗೆ ಸ್ಪರ್ಧಿ ಕೊಟ್ಟ ಸೂಪರ್ಬ್ ಆನ್ಸರ್ ನೋಡಿದ್ರಾ ?!

IAS job interview intresting questions and answers

IAS Intresting Question: ಐಎಎಸ್ ಪರೀಕ್ಷೆ ಭಾರತದ ಮಾತ್ರವಲ್ಲ ವಿಶ್ವದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಇಂತಹ ಕಠಿಣ ಪರೀಕ್ಷೆಯಲ್ಲಿ ಪಾಸಾಗಲು ಬುದ್ದಿವಂತಿಕೆಯ ಜತೆಗೆ ಪರಿಶ್ರಮ, ಪರಿಶ್ರಮದ ಜೊತೆಗೆ ಅನಲಿಟಿಕಲ್ ಸ್ಕಿಲ್, ಅದರ ಜೊತೆಗೆ ಸಾಮಾನ್ಯ ಜ್ಞಾನ, ಕ್ರಿಯೆಟಿವಿಟಿ ಮತ್ತು ಲ್ಯಾಟರಲ್ ಥಿಂಕಿಂಗ್ – ಹೀಗೇ ಹಲವು ರೀತಿಯ ಸ್ಕಿಲ್ ಗಳು ಮುಖ್ಯವಾಗುತ್ತವೆ. ಐಎಎಸ್ ಲಿಖಿತ ಪರೀಕ್ಷೆಯ ನಂತರ ನಡೆಯುವ ಮೌಖಿಕ ಪರೀಕ್ಷೆ ಮತ್ತು ಅದರಲ್ಲಿ ಕೇಳಿ ಬರುವ ಕೊಶ್ಚನ್ ಗಳ ಬಗ್ಗೆ ದೊಡ್ಡ ಕಥೆಯೇ ಇದೆ. ಎಂತಹ ಉತ್ತರಿಸಲಾದ ಪ್ರಶ್ನೆಗೂ ಕೂಡ ಐಎಎಸ್ ಪರೀಕ್ಷಾರ್ಥಿ ಕ್ರಿಯಾತ್ಮಕವಾದ ಉತ್ತರವನ್ನು ನೀಡಿ ಪಾಸ್ ಆಗಿ ಬರುವ ಹತ್ತು ಹಲವು ಸುದ್ದಿಗಳನ್ನು ಮತ್ತು ಕಥೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಅಂತಹುದೇ ಹಲವು ಕಠಿಣ ಪ್ರಶ್ನೆಗಳು(IAS Intresting Question) ಮತ್ತು ಅವುಗಳ ಉತ್ತರವನ್ನು ನಾವಿಂದು ನಿಮಗೆ ಇಲ್ಲಿ ಕೊಡುತ್ತಿದ್ದೇವೆ.

ಪ್ರಶ್ನೆ 1: ನಾನು ನಿಮ್ಮ ತಂಗಿಯೊಂದಿಗೆ ಓಡಿಹೋದರೆ ನೀವು ಏನು ಮಾಡುತ್ತೀರಿ?
ಉತ್ತರ: ಇದಕ್ಕೆ ಹೆಚ್ಚಿನ ಮಂದಿ ತರಹೇವಾರಿ ಉತ್ತರ ನೀಡಬಹುದು. ನಿಮಗೆ ಬೇರೆ ಆಯ್ಕೆ ಇಲ್ಲವೇ? ಎನ್ನಬಹುದು. ಅಥವಾ ಇದನ್ನು ನಾನು ಒಪ್ಪುವುದಿಲ್ಲ ಎಂದು ಕೆಲವರು ವ್ಯಗ್ರರಾಗಬಹುದು. ಇದು ಸರಿಯಾದ ನಿರ್ಧಾರವಲ್ಲ ಎಂದು ಕೂಡ ಕೆಲವರು ಹೇಳಬಹುದು. ಆದರೆ, ಈ ರೀತಿ ಉತ್ತರ ಕೊಟ್ಟರೆ ನೀವು ಆಯ್ಕೆಯಾಗುವುದು ಅನುಮಾನ ! ಹಾಗಿದ್ದರೆ ಏನು ಉತ್ತರ ಕೊಡಬೇಕು ಅಂತೀರಾ ? “ನನ್ನ ತಂಗಿಗೆ ನಿಮಗಿಂತ ಉತ್ತಮ ಆಯ್ಕೆ ಹಾಗೂ ಉತ್ತಮ ಹೊಂದಾಣಿಕೆಯಿದ್ದವರು ನನಗೆ ಮುಂದೆಯೂ ಸಿಗುವುದಿಲ್ಲ ” ಎಂಬುದಾಗಿ ಉತ್ತರಿಸಿದಿರಿ ಅನ್ನಿ, ಇಂಟರ್ ವ್ಯೂ ಮಾಡೋರು ಈ ಉತ್ತರ ಕೇಳಿ ಫ್ಲಾಟ್ ಆಗೋದು ಪಕ್ಕಾ.

ಪ್ರಶ್ನೆ – 2: ಜೇಮ್ಸ್ ಬಾಂಡ್ ಅನ್ನು ವಿಮಾನದಿಂದ ಹೊರಗೆ ತಳ್ಳಿದರೂ, ಆತ ಯಾವುದೇ ಪ್ಯಾರಾಚೂಟ್ ಇಲ್ಲದೆ ಬದುಕುಳಿದ, ಅದು ಹೇಗೆ ಸಾಧ್ಯ?!
ಉತ್ತರ -2: ವಿಮಾನವು ರನ್‌ವೇಯಲ್ಲಿತ್ತು ಬಾಸ್ ! ಈ ಹಿನ್ನೆಲೆಯಲ್ಲಿ ಜೇಮ್ಸ್ ಬಾಂಡ್ ಅನ್ನು ಯಾವುದೇ ಪ್ಯಾರಾಚೂಟ್ ಇಲ್ಲದೆ ವಿಮಾನದಿಂದ ಹೊರಗೆ ತಳ್ಳಿದರು ಕೂಡ ಆತನಿಗೆ ಯಾವುದೆ ಅಪಾಯವಾಗದೆ ಬದುಕುಳಿದ. ಸಿಂಪಲ್ ಅಂಡ್ ಸೂಪರ್ಬ್ !!

ಪ್ರಶ್ನೆ – 3: ಒಂದು ಮೊಟ್ಟೆಯನ್ನು ತೆಗೆದುಕೊಂಡು ಕಾಂಕ್ರೀಟ್ ನೆಲದ ಮೇಲೆ ಹಾಕಿದರೆ ಬಿರುಕು ಮೂಡದೇ ಇರಬಹುದೇ?
ಉತ್ತರ -3 : ಮೊಟ್ಟೆಯನ್ನು ಎತ್ತರದಿಂದ ಕಾಂಕ್ರೀಟ್ ನೆಲದ ಮೇಲೆ ಹಾಕಿದಾಗ ಕಾಂಗ್ರೀಟ್ ಗೆ ಬಿರುಕು ಮೂಡಲ್ಲ !! ಟ್ರಿಕ್ಕಿ ತಮಾಶಿ ಉತ್ತರ. ಕಾಂಕ್ರೀಟ್ ನೆಲ ಗಟ್ಟಿಯಾಗಿರುವುದರಿಂದ ನೆಲಕ್ಕೆ ಏನೂ ಆಗುವುದಿಲ್ಲ, ಆದ್ರೆ ಸಾಮಾನ್ಯವಾದ ಕೋಳಿ ಮೊಟ್ಟೆ ಒಡೆಯುತ್ತದೆ ಅನ್ನಬಹುದು.

ಪ್ರಶ್ನೆ 4: ಒಬ್ಬ ಕೊಲೆಗಾರನಿಗೆ ಮರಣದಂಡನೆ ವಿಧಿಸಲಾಗಿದೆ. ಹೀಗಾಗಿ, ಅವನಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವ ಕೋಣೆಗೆ ಹೊಕ್ಕರೆ ಆತ ಸುರಕ್ಷಿತವಾಗಿ ಹೊರ ಬರಬಹುದು.
1) ಮೊದಲನೆಯದು ಉರಿಯುತ್ತಿರುವ ಬೆಂಕಿಯಿಂದ ತುಂಬಿದೆ. ಅದರೊಳಗೆ ನುಗ್ಗಿ ಸಾಯಬೇಕು.
2) ಲೋಡ್ ಮಾಡಿದ ಬಂದೂಕುಗಳನ್ನು ಹೊಂದಿರುವ ಹಂತಕರಿಂದ ತುಂಬಿದೆ. ಇದರೊಳಗೆ ಪ್ರವೇಶಿಸಿ ಸಾಯುವುದು.
3) 3 ವರ್ಷಗಳಿಂದ ತಿನ್ನದ ಸಿಂಹಗಳಿಂದ ತುಂಬಿದೆ. ಇದಕ್ಕೆ ಒಳ ಪ್ರವೇಶಿಸಿ ಸಾಯುವುದು.
ಉತ್ತರ: ಮೊದಲನೆಯ ಕೊಠಡಿಗೆ ಹೋದರೆ ಬೆಂಕಿಗೆ ಆಹುತಿ ಆಗುವುದು ಖಚಿತ. ಇನ್ನು ಎರಡನೇ ಕೊಠಡಿಯಲ್ಲಿ ಲೋಡ್ ಮಾಡಿದ ಬಂದೂಕು ಇರುವ ಹಿನ್ನೆಲೆ ಇಲ್ಲು ಕೂಡ ಬದುಕುಳಿಯುವ ಸಾಧ್ಯತೆ ಕಡಿಮೆ. ಮೂರನೇ ಕೋಣೆಗೆ ಹೊಕ್ಕರೆ ಸುಲಭವಾಗಿ ಹೊರಬರಬಹುದು. ಏಕೆಂದರೆ, ಮೂರು ವರ್ಷಗಳ ಕಾಲ ಸಿಂಹ ಏನು ತಿಂದಿಲ್ಲ ಎಂದಾದರೆ ಸಿಂಹ ಬದುಕಿರುವ ಸಾಧ್ಯತೆ ಕಡಿಮೆ ಅಲ್ಲ, ಇಲ್ಲವೇ ಇಲ್ಲ. ಖಚಿತವಾಗಿ ಅದು ಸತ್ತಿರುತ್ತದೆ. ಹೀಗಾಗಿ, ಆರೋಪಿ ಮೂರನೇ ಕೋಣೆಗೆ ಹೋದರೆ ಬದುಕಬಹುದು.
ಇವೆಲ್ಲ IAS ಪರೀಕ್ಷೆಯ ಮೌಖಿಕ ವಿಭಾಗದಲ್ಲಿ ಕೇಳಲಾಗಿರುವ ಪ್ರಶ್ನೆಗಳು ಎನ್ನಲಾಗಿದೆ. ಇಂತಹ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ತಮಾಷೆಯಿಂದ ಮತ್ತು ಪ್ರಸಂಗಾವಧಾನತೆ ಯಿಂದ ಉತ್ತರಿಸಿ. ಅತ್ಯಂತ ಕ್ಲಿಷ್ಟ ಪರೀಕ್ಷೆಯನ್ನು ಗೆಲ್ಲಬೇಕಾಗುತ್ತದೆ. ಮುಂದಿನ ಬಾರಿ ಇನ್ನಷ್ಟು ಆಸಕ್ತಿಕರ ಐಎಎಸ್ ಪ್ರಶ್ನೋತ್ತರಗಳ ಜತೆ ನಾವು ವಾಪಸ್ ಬರ್ತೇವೆ. ಅಲ್ಲಿಯ ತನಕ, ಹ್ಯಾವ್ ಎ ನೈಸ್ ಡೇ !

Leave A Reply

Your email address will not be published.