Intresting news: ಪ್ರತಿಷ್ಠಿತ ಓಲಾ ಕಂಪನಿಯಲ್ಲಿ ಜಾಬ್ ಪಡಕೊಂಡ ಶ್ವಾನ, ಅದಕ್ಕೆ ಅಲ್ಲೇನು ಜಾಬ್ ಪೋಸ್ಟಿಂಗ್ ಗೊತ್ತಾ ?

Intresting news Ola electric CEO hires a dog as the companys new employee shares I'd with employment details

Intresting News: ಕಂಪೆನಿ(Company )ಎಂದ ಮೇಲೆ ಕೆಲಸಗಾರರನ್ನು ನೇಮಿಸಿಕೊಳ್ಳುವುದು ಸಹಜ . ಆದರೆ, ಇಲ್ಲೊಂದು ಉದ್ಯೋಗಿಯ ಕುರಿತಂತೆ ಜೋರಾಗಿ ಚರ್ಚೆ ನಡೆಯುತ್ತಿದೆ. ಓಲಾ ಕಂಪನಿ (Ola Company)ಹೊಸ ಉದ್ಯೋಗಿಯನ್ನು (Employee)ನೇಮಕ ಮಾಡಿಕೊಂಡಿದೆ. ಅದರಲ್ಲಿ ಏನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ಓಲಾ ಕಂಪೆನಿ ನೇಮಕ ಮಾಡಿರುವುದು ವ್ಯಕ್ತಿಯನ್ನಲ್ಲ ಬದಲಿಗೆ ನಾಯಿಯನ್ನು!! ಕೇಳಲು ಅಚ್ಚರಿ ಎನಿಸಿದರು ನಿಜ!! ಈ ಕುರಿತು ಟ್ವೀಟ್ ಮಾಡಿ ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ರವರು ಹೊಸ ಉದ್ಯೋಗಿಯನ್ನು ಪರಿಚಯಿಸಿದ್ದು, ಈ ನಾಯಿಯ ಹೆಸರು ಕೂಡ ಬಹಿರಂಗವಾಗಿದೆ.

ನಾಯಿಗೆ ಕಂಪೆನಿಯಲ್ಲಿ ಏನಪ್ಪ ಕೆಲಸ ಎಂದು ಯೋಚಿಸುತ್ತಿದ್ದೀರಾ ? ಓಲಾ ಕಂಪೆನಿಯ ಹೊಸ ಉದ್ಯೋಗಿಯ ಹೆಸರೇ ಹೇಳಿಲ್ಲ ನೋಡಿ! ಈ ನಾಯಿಯ ಹೆಸರು ಬಿಜ್ಲೀ . ಅಷ್ಟೆ ಅಲ್ಲ ಕಣ್ರೀ!!ಓಲಾ ಕಂಪನಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ನಾಯಿಗೆ(Dog )ಐಡಿ ಕಾರ್ಡ್ ಕೂಡ ನೀಡಲಾಗಿದೆಯಂತೆ. ಬಿಜ್ಲಿ ಎಂದರೆ ಹಿಂದಿಯಲ್ಲಿ ವಿದ್ಯುತ್. ಅದು ಕಂಪನಿಯ EV (ವಿದ್ಯುತ್ ವಾಹನ) ವ್ಯವಹಾರವನ್ನು ಸೂಚಿಸುತ್ತದೆ.

ಸಾಕು ಪ್ರಾಣಿ ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ಸಾಕು ಪ್ರಾಣಿಗಳ ಜೊತೆಗೆ ಕೆಲ ಸಮಯ ಕಳೆದರೆ ಸಾಕು ಮನಸ್ಸಿಗೆ ನಿರಾಳ ಅನುಭವ, ಮನಸ್ಸಿಗೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಅದೇ ರೀತಿ,ಸಾಕುಪ್ರಾಣಿಗಳನ್ನು ಕಚೇರಿಗೆ ತರುವುದರಿಂದ ಸುಂದರ ವಾತಾವರಣವನ್ನು ಸೃಷ್ಟಿಯಾಗುತ್ತದೆ ಎಂದು ಅನೇಕ ಕಂಪನಿಗಳು ಭಾವಿಸಿದ್ದು, ಅದರ ಭಾಗವಾಗಿ, ಈ ನಾಯಿಯನ್ನು ಅಧಿಕೃತವಾಗಿ ತಮ್ಮ ಉದ್ಯೋಗಿಯಾಗಿ ಸೇರಿಸಲಾಗಿದೆ.

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಉದ್ಯೋಗಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ನಾಯಿಗೆ ಬಿಜ್ಲೀ ಎಂದೂ ಹೆಸರಿಡಲಾಗಿದೆ. ವೈರಲ್(Viral Post)ಆಗಿರುವ ಪೋಸ್ಟ್ ಅನುಸಾರ, ಬಿಜ್ಲಿ ಓಲಾ ಉದ್ಯೋಗಿ ಎಂಬ ಐಡೆಂಟಿಟಿ ಪಡೆದಿರುವ ಐಡಿ( Identity Card) ಜೊತೆಗೆ ತನ್ನದೇ ಆದ ಓಲಾ ಐಡಿ ಕಾರ್ಡ್ ಅನ್ನು ಕೂಡ ಪಡೆದಿದೆಯಂತೆ.

ಬಿಜ್ಲಿ ಐಡಿ ಕಾರ್ಡ್ ಹೇಗೆ ವಿಭಿನ್ನವಾಗಿದೆ ಗೊತ್ತಾ? ಐಡಿ ಕಾರ್ಡ್‌ನಲ್ಲಿರುವ ವಿಳಾಸವು ಕೋರಮಂಗಲದ ಹೊಸೂರು ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ತಂಡದ ಹೆಮ್ಮೆಯ ಸದಸ್ಯ ಎಂದು ಹಾಕಲಾಗಿದೆ. ನಾಯಿಯ ಉದ್ಯೋಗಿ ಕೋಡ್ ‘440 V’ ಎಂದು ಹಾಕಲಾಗಿದೆ. ಅಂದರೆ.. ಇದು EV ವ್ಯವಸ್ಥೆಯಲ್ಲಿನ ಪ್ರಮಾಣಿತ ವೋಲ್ಟೇಜ್ ಅನ್ನು ಪ್ರತಿನಿಧಿಸುತ್ತದೆ. ಬಿಜಿಲಿಯ ರಕ್ತದ ಗುಂಪನ್ನು ‘paw+ve’ ಎಂದು ಸಹ ಬರೆಯಲಾಗಿದೆ.

ಬಿಜ್ಲೀ ಯಾವುದೇ ಅಗತ್ಯವಿದ್ದಲ್ಲಿ ತ್ವರಿತವಾಗಿ ಮಾಹಿತಿ ಇಲ್ಲವೇ ಸಂದೇಶ ಕಳುಹಿಸಲು ‘ಸ್ಲಾಕ್’ ಸಹಾಯದ ಮುಖಾಂತರ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡಲಾಗಿದೆ. ಇದು ಯಾವುದಾದ್ರೂ ಅನಿವಾರ್ಯ ಇಲ್ಲವೇ ತುರ್ತು ಸಂಪರ್ಕ ಮಾಹಿತಿಯ ಸಲುವಾಗಿ ಬಿಎ ಕಚೇರಿ ವಿವರಗಳನ್ನು ಕೂಡ ಒಳಗೊಂಡಿದೆಯಂತೆ. ಕೆಲವು ಊಹಾಫೋಹಗಳ ಪ್ರಕಾರ ಭವಿಶ್ ಅಗರ್ವಾಲ್ ಅವರ ಹೆಸರಿನ ಮೊದಲಕ್ಷರಗಳು (BA) ಅದನ್ನು ಪ್ರತಿನಿಧಿಸುತ್ತಿದೆ. ಸದ್ಯ, ಈ ವಿಚಾರ ವೈರಲ್ ಆಗಿ ತರಹೇವಾರಿ ಕಾಮೆಂಟ್ಸ್ ಬರುತ್ತಿದ್ದು, ಒಟ್ಟಿನಲ್ಲಿ ಈ ಸುದ್ದಿ ಹೆಚ್ಚಿನ ಮಂದಿಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

https://twitter.com/bhash/status/1685640149919727616/photo/2

Leave A Reply

Your email address will not be published.