Rohith chakrateerta: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಧರ್ಮಸ್ಥಳ ದೇವಸ್ಥಾನ ?: ತೀವ್ರ ಕುತೂಹಲ ಕೆರಳಿಸಿದ ರೋಹಿತ್ ಚಕ್ರತೀರ್ಥ ಫೇಸ್ ಬುಕ್ ಪೋಸ್ಟ್

Karnataka latest news writer Rohith Chakratheerta on Sri Dharmasthala manjunateswara temple under Mazrai department

Rohith chakrateerta: ಕರಾವಳಿ ಜಿಲ್ಲೆಗಳಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ (Dharmartha Manjunatha Temple)ದೇವರನ್ನು(God )ನಂಬಿಕೊಂಡು ವಿಶೇಷ ನಂಬಿಕೆ, ಭಕ್ತಿ ಭಾವದಿಂದ ಆರಾಧಿಸುವ ನೂರಾರು ಭಕ್ತ ಜನ ಸಾಗರವಿದೆ. ಈ ನಡುವೆ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಯೋಜನೆಯೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ರಾಜ್ಯ ಬೊಕ್ಕಸಕ್ಕೆ ಮಂಜುನಾಥನ ಸನ್ನಿಧಿಯ ಖಜಾನೆಯ ಹಣ ನೇರವಾಗಿ ರಾಜ್ಯ ಬೊಕ್ಕಸಕ್ಕೆ(Government )ತಲುಪುವ ವ್ಯವಸ್ಥೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹೀಗೊಂದು ಪ್ರಶ್ನೆ ಮೂಡಲು ಕಾರಣವೇನು?

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಧರ್ಮಸ್ಥಳ ದೇವಸ್ಥಾನ ಸೇರಲಿದೆಯೇ? ಹೌದು, ಹೀಗೊಂದು ಪ್ರಶ್ನೆಯನ್ನು ತೀವ್ರ ಕುತೂಹಲ ಕೆರಳಿಸುವ ಹಾಗೆ ಮಾಡಿದೆ ಆ ಒಂದು ಪೋಸ್ಟ್ ! ರೋಹಿತ್ ಚಕ್ರತೀರ್ಥ( Rohith chakrateerta) ಅವರು ಈ ಫೇಸ್ ಬುಕ್ ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಈ ಕುರಿತು ಉಲ್ಲೇಖಿಸಿದ್ದಾರೆ.

 

ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ತರಲು 1997ರ ಕಾಯ್ದೆಯ ಅನುಸಾರ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 2014ರಲ್ಲಿ ಅಂದಿನ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು. ಆ ಸಂದರ್ಭದಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಕೆ.ಸೋಮನಾಥ ನಾಯಕ್‌ ತಿಳಿಸಿದ ವಿಚಾರ ಈಗ ಮಗದೊಮ್ಮೆ ಮುನ್ನೆಲೆಗೆ ಬಂದಿದೆ. ಹಾಗೆಂದ ಮಾತ್ರಕ್ಕೆ ಇದೇನು ಹೊಸ ವಿಚಾರ ಎಂದು ಭಾವಿಸಬೇಡಿ!! ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕುರ್ಚಿ ಅಲಂಕರಿಸಿದ ಸಿದ್ದರಾಮಯ್ಯನವರು(CM Siddaramaiah)2014 ರಲ್ಲಿ ನೀಡಿದ ನಿರ್ದೇಶನವಿದು ಎಂದು ಬರೆದಿದ್ದಾರೆ (Rohith chakrateerta)ರೋಹಿತ್.

“ಕರ್ನಾಟಕದಲ್ಲಿ ಹೆಚ್ಚಿನ ನಾಸ್ತಿಕರ ಹಣ ಹೊಡೆಯುವ ದೊಡ್ದ ಖಜಾನೆ ದೇವಸ್ಥಾನಗಳು. ಆದರಲ್ಲಿ ಧರ್ಮಸ್ಥಳವಂತೂ ಎಲ್ಲರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹಾಗೆ ಆಗಿ ಬಿಟ್ಟಿದೆ. ಈ ನಡುವೆ ಎಲ್ಲರ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಪ್ರಗತಿಪರ ಜೀವಪರ ಬುದ್ಧಿಜೀವಿಗಳು ಕೂಡ ಸಾಥ್ ನೀಡಿ ‘ದೇವಸ್ಥಾನಗಳನ್ನು ಮುಜರಾಯಿಗೆ ಸೇರಿಸಿಕೊಳ್ಳಲು ವಿಶೇಷ ಆಸಕ್ತಿ ತೋರುವ ಹಿಂದಿನ ಉದ್ದೇಶವೇನು? ಎಲ್ಲರಿಗೂ ಗೊತ್ತಿರುವ ಹಾಗೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಪ್ರಕರಣ ಎಲ್ಲೆಡೆ ಸುದ್ದಿಯಾಗಿದ್ರು ಬುದ್ಧಿಜೀವಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಇದರ ನಡುವೆ ಈ ದೇವಸ್ಥಾನವನ್ನು ಮುಜರಾಯಿಯ ಸುಪರ್ದಿಗೆ ತೆಗೆದುಕೊಂಡು ಇದರ ಹುಂಡಿ ದುಡ್ಡನ್ನು ಸರ್ಕಾರದ ಖಜಾನೆಗೆ ಬಗ್ಗಿಸಿಕೊಳ್ಳುವ ಒಳ ಸಂಚು ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ, ಹಿಂದೂಗಳೇ ಈ ಕುರಿತು ನಿಮ್ಮ ಧ್ವನಿ ಎತ್ತಿ! ಅನ್ಯಾಯದ ವಿರುದ್ದ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮುಂದಾಗಬೇಕು ” ಎಂಬ ಉದ್ದೇಶದ ಜೊತೆಗೆ ರೋಹಿತ್ ಚಕ್ರತೀರ್ಥ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.

” ಹಿಂದೂ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ಕೆರಳಿಸುವ ಮೂಲಕ ಹಿಂದೂಗಳನ್ನು ನೆಮ್ಮದಿಯಾಗಿ ಜೀವಿಸಲು ಅವಕಾಶವೇ ನೀಡಬಾರದು ಎಂಬ ಉದ್ದೇಶದಿಂದ ಸೆಕ್ಯುಲರ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಬಹುಸಂಖ್ಯಾತ ಹಿಂದುಗಳು ಮಾತ್ರ ಎಂದಿನಂತೆ ನಿದ್ರಾಸಕ್ತರು” ಎಂದು ಫೋಸ್ಟ್ನಲ್ಲಿ ರೋಹಿತ್ ಚಕ್ರತೀರ್ಥ ಬರೆದು ಮಲಗಿದ್ದಂತೆ ನಟಿಸುತ್ತಿರುವ ಹಿಂದೂಗಳನ್ನು ಎಚ್ಚೆತ್ತುಕೊಳ್ಳಲು ಕರೆ ನೀಡಿದ್ದಾರೆ. ಒಟ್ಟಾರೆ ಸೌಜನ್ಯ ಹೋರಾಟದ ಬೆಳವಣಿಗೆಗಳ ನಡುವೆ ಧರ್ಮಸ್ಥಳವನ್ನು ಧಾರ್ಮಿಕ ದತ್ತಿ ಇಲಾಖೆಯ ಕೆಳಗೆ ತರುವ ಸುದ್ದಿಗಳು ಕೂಡ ಹರಿದಾಡುತ್ತಿವೆ.

ಇದನ್ನೂ ಓದಿ: ಸಾಧ್ಯವಾದಷ್ಟು ಮುಸ್ಲಿಂ ಯುವತಿಯರ ಜತೆ ಹಬ್ಬ ಆಚರಿಸಿ- ಪ್ರಧಾನಿ ಮೋದಿ ಇಂತದ್ದೊಂದು ಆಜ್ಞೆ ನೀಡಲು ಕಾರಣ ?!

Leave A Reply

Your email address will not be published.