RBI Rules: ಸಾಲ ಕಟ್ಟೋಕೆ ಬ್ಯಾಂಕ್ ಏಜೆಂಟ್ ತೊಂದರೆ ಕೊಡ್ತಾರಾ? RBI ನಿಯಮ ಏನು ಹೇಳುತ್ತೆ ಈ ಕ್ರಮಕ್ಕೆ?

RBI warns loans recovery agents of strict action against harassing customers

RBI Rules : ಪ್ರತಿಯೊಂದು ದೈನಂದಿನ ವಸ್ತುಗಳ ಖರೀದಿಗೆ ಹಣ ಅತ್ಯವಶ್ಯಕ. ಇಂದಿನ ದುಬಾರಿ ದುನಿಯಾದಲ್ಲಿ ಮನೆಯ ಪ್ರತಿ ಖರ್ಚು ವೆಚ್ಚಗಳ ಸಂಭಾಳಿಸುವುದು ಸುಲಭದ ಮಾತಲ್ಲ.ಹೀಗಾಗಿ, ಆದಾಯಕ್ಕಿಂತ ಹೆಚ್ಚು ಖರ್ಚು ಉಂಟಾಗಿ ಸಾಲ ಮಾಡಬೇಕಾಗುತ್ತದೆ. ಆದ್ರೆ, ಸಾಲದ ಮೊತ್ತ ಹೆಚ್ಚಾದಂತೆ ಬ್ಯಾಂಕಿನವರು ಕೂಡ ಸಾಲ ಮರುಪಾವತಿಗೆ ಸೂಚನೆ ನೀಡುತ್ತಾರೆ. ಆದ್ರೆ, ನೀವು ಸಾಲ ಪಡೆದು ರಿಕವರಿ ಏಜೆಂಟ್‌’ಗಳಿಂದ ಕಿರುಕುಳ ಅನುಭವಿಸುತ್ತಿದ್ದರೆ, ಈ RBI ರೂಲ್ಸ್ ಬಗ್ಗೆ ಮೊದಲು ಮಾಹಿತಿ ತಿಳಿದುಕೊಳ್ಳಿ.

ಸಾಲದ EMIಗಳ ಪಾವತಿಯಲ್ಲಿ ವಿಳಂಬವಾದರೆ ರಿಕವರಿ ಏಜೆಂಟ್‌’ಗಳು ಸಾಮಾನ್ಯವಾಗಿ ಸಾಲ ವಸೂಲಾತಿಗಾಗಿ ಗ್ರಾಹಕರಿಗೆ ಕಿರುಕುಳ ನೀಡುವುದಲ್ಲದೆ ಮನೆ ಇಲ್ಲವೇ ಅಂಗಡಿ ಗೆ ಬಂದು ಗಲಾಟೆ ಮಾಡುವುದು ಕೂಡ ಇದೆ. ಸದ್ಯ, ಸಾಲ ಪಡೆದವರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದೆ.

ಹಣಕಾಸು ಸಚಿವೆ (Minister of Finance of India)ನಿರ್ಮಲಾ ಸೀತಾರಾಮನ್(Nirmala Sitharaman) ಈ ಕುರಿತು ಸಂಸತ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂದರ್ಭ ಸಾಲ ಮರುಪಾವತಿಗೆ ರಿಕವರಿ ಏಜೆಂಟ್’ಗಳು ಗ್ರಾಹಕರಿಗೆ ಕಿರುಕುಳ ಇಲ್ಲವೇ ತೊಂದರೆ ನೀಡಬಾರದು ಎಂಬುದನ್ನು ಬ್ಯಾಂಕ್’ಗಳಿಗೆ( Bank)ಮಾರ್ಗಸೂಚಿಗಳಲ್ಲಿ ನೀಡಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್‌ಗಳು ಗಲಾಟೆ ಮಾಡಿ ಕಿರುಕುಳ ನೀಡಿ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ ಗ್ರಾಹಕರನ್ನ ಮಾನವೀಯತೆ ದೃಷ್ಟಿಯಿಂದ ಜೊತೆಗೆ ಸೂಕ್ಷ್ಮ ನಡೆ ನುಡಿಯನ್ನು ಪಾಲಿಸಬೇಕೆಂದು ಆರ್‌ಬಿಐ ಸೂಚಿಸಿದೆ.

RBI ಮಾರ್ಗಸೂಚಿಗಳು ಹೀಗಿವೆ:
# ಬ್ಯಾಂಕ್‌ಗಳು ಅಥವಾ ಇತರ ಸಾಲ ನೀಡುವ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ತಮ್ಮ ಎಲ್ಲಾ ಸಾಲ ವಸೂಲಾತಿ ಏಜೆನ್ಸಿಗಳ ಬಗ್ಗೆ ಮಾಹಿತಿಯನ್ನ ಗ್ರಾಹಕರಿಗೆ ನೀಡುವುದು ಕಡ್ಡಾಯವಾಗಿದೆ.
# ಬ್ಯಾಂಕ್ ಸಾಲ ವಸೂಲಾತಿ ಏಜೆಂಟ್‌ಗಳು ಗ್ರಾಹಕರಿಗೆ ದೈಹಿಕವಾಗಿ ಇಲ್ಲವೇ ಮಾನಸಿಕವಾಗಿ ಇಲ್ಲವೇ ಮೌಖಿಕವಾಗಿ ಕಿರುಕುಳ ನೀಡಬಾರದು.
# ರಿಕವರಿ ಏಜೆಂಟ್ ಗ್ರಾಹಕರನ್ನ ಸಂಪರ್ಕಿಸುವ ಮುನ್ನ ಡಿಜಿಟಲ್ ಲೋನ್ ಕಂಪನಿಗಳು ಗ್ರಾಹಕರಿಗೆ SMS ಇಲ್ಲವೇ ಇಮೇಲ್ ಮೂಲಕ ಮುಂಚಿತವಾಗಿ ಮಾಹಿತಿ ನೀಡಬೇಕು.ಬೆದರಿಕೆ ಇಲ್ಲವೇ ಭಯ ತರಿಸುವ ರೀತಿ ಬ್ಯಾಂಕ್ ವರ್ತಿಸಿದರೆ ಗ್ರಾಹಕರು ಈ ಕುರಿತು ದೂರು ದಾಖಲಿಸಿಕೊಳ್ಳಬಹುದು.
# ಈ ಸಂಗ್ರಹಣಾ ಏಜೆಂಟ್‌ಗಳು ಸಾಲಗಾರರಿಗೆ ಯಾವುದೇ ಅನುಚಿತವಾಗಿ ಇಲ್ಲವೇ ಬೆದರಿಕೆ ಸಂದೇಶಗಳನ್ನ ಕಳುಹಿಸಲು ಸಾಧ್ಯವಿಲ್ಲ.
# ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಸಾಲ ವಸೂಲಾತಿಗಾಗಿ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸದಂತೆ RBI ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ನಿಟ್ಟಿನಲ್ಲಿ ಕೆಲವು ನಿಯಮಗಳನ್ನ ಆರ್‌ಬಿಐ ಅಂತಿಮಗೊಳಿಸಿದೆ.
# ಸಾರ್ವಜನಿಕವಾಗಿ ನಿಗದಿ ಪಡಿಸಿದ ಅಧಿಕೃತ ಏಜೆಂಟ್‌ಗಳು ಮಾತ್ರ ಗ್ರಾಹಕರನ್ನು ಸಂಪರ್ಕಿಸಬೇಕು. ಸಾಲದ ಡೀಫಾಲ್ಟ್‌ನ ಸಂದರ್ಭದಲ್ಲಿ, ಡಿಜಿಟಲ್ ಲೋನ್ ಕಂಪನಿಗಳು ಗ್ರಾಹಕರನ್ನು ಸಂಪರ್ಕಿಸುವ ತಮ್ಮ ವಸೂಲಾತಿ ಏಜೆಂಟ್ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು.

ದೇಶದಲ್ಲಿ ಡಿಜಿಟಲ್ ವಹಿವಾಟಿನ ಬೆಳವಣಿಗೆಯನ್ನ ಗಮನದಲ್ಲಿರಿಸಿ, ಆರ್‌ಬಿಐ ಡಿಜಿಟಲ್ ಸಾಲ ನೀಡುವ ಕಂಪನಿಗಳಿಗೆ ಸಾಲ ವಸೂಲಾತಿಗೆ ಮಾನದಂಡಗಳನ್ನ ರಚನೆ ಮಾಡಿದ್ದು,ಡಿಜಿಟಲ್ ಲೋನ್ ಕಂಪನಿಗಳು ಲೋನ್‌ಗಳನ್ನ ಮಂಜೂರು ಮಾಡುವಾಗ ಗ್ರಾಹಕರಿಗೆ ತಮ್ಮ ರಿಕವರಿ ಏಜೆಂಟ್‌ಗಳ ಪ್ಯಾನಲ್ ಬಗ್ಗೆ ಮಾಹಿತಿ ನೀಡಿರಬೇಕು. ಈ ಮರುಪ್ರಾಪ್ತಿ ಏಜೆಂಟ್‌ಗಳು ಗ್ರಾಹಕರನ್ನು ಅನಾಮಧೇಯವಾಗಿ ಇಲ್ಲವೇ ಸುಳ್ಳು ಹೆಸರುಗಳ ಅಡಿಯಲ್ಲಿ ಕರೆ ಮಾಡಲು ಅವಕಾಶವಿಲ್ಲ. ಈ ಏಜೆಂಟ್‌ಗಳು ಬೆಳಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಗ್ರಾಹಕರಿಗೆ ಕರೆ ಮಾಡಲು ಅವಕಾಶವಿಲ್ಲ.

Leave A Reply

Your email address will not be published.