Intresting news: ATM ನಿಂದ ಹಣ ಡ್ರಾ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ! ಇಲದಿದ್ದರೆ ನಿಮ್ಮ ಖಾತೆಯ ಹಣ ಆಗುತ್ತೆ ಖಾಲಿ !

Intresting news Be careful while withdrawing money from ATM

ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ (Digital)ಮಯವಾಗಿಬಿಟ್ಟಿದೆ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ (Mobile)ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ (Bank)ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ.ನೀವು ಯಾವಾಗ ಬೇಕಾದರೂ ಎಟಿಎಂಗೆ (ATM)ಹೋಗಿ ಹಣವನ್ನು ಹಿಂಪಡೆಯಬಹುದು.

ಇಂದಿನ ಕಾಲದಲ್ಲಿ ನಾವು ಎಷ್ಟೇ ಡಿಜಿಟಲ್ ಮೂಲಕ ಪೇಮೆಂಟ್ ಮಾಡಿದರು ಕೂಡ ಕೆಲವೊಮ್ಮೆ ಸಣ್ಣ ಪುಟ್ಟ ಅಂಗಡಿಗೆ ಹೋದಾಗ ಇಲ್ಲವೇ ಬಸ್ಗಳಲ್ಲಿ ಪ್ರಯಾಣಿಸುವಾಗ ಹಣದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ, ಎಟಿಎಂ ಎಂಬ ಸಾಧನದ ಮೂಲಕ ಹಣ ವಿತ್ ಡ್ರಾ ಮಾಡೋದು ಕಾಮನ್.ಇನ್ನು ಹಣ ಡ್ರಾ ಮಾಡುವ ಸಂದರ್ಭ ನೀವು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೆ ಹೋದರೆ ನಿಮ್ಮ ಖಾತೆಯ ಹಣ ಖಾಲಿಯದರು ಅಚ್ಚರಿಯಿಲ್ಲ.

ATM’ ಗ್ರಾಹಕರೇ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗುವುದು ಖಚಿತ. ಹೀಗಾಗಿ, ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಸುದ್ದಿಯನ್ನು ನೀವು ತಿಳಿದಿರಬೇಕು. ಏಕೆಂದರೆ, ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಸ್ಕಿಮ್ಮಿಂಗ್ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಸೈಬರ್ ಕ್ರಿಮಿನಲ್ಗಳು ಎಟಿಎಂ ಕೀ ಪ್ಯಾಡ್ಗೆ ಸ್ಕಿಮ್ಮರ್ ಎಂದು ಕರೆಯಲಾಗುವ ಡಿವೈಸ್ ಅಳವಡಿಸಿಕೊಂಡು ನೀವು ಹಣ ಡ್ರಾ ಮಾಡಲು ಎಟಿಎಂ ಯಂತ್ರಕ್ಕೆ ಕಾರ್ಡ್ ಪಂಚ್ ಮಾಡಿದರೆ ನಿಮ್ಮ ಎಟಿಎಂ ಕಾರ್ಡ್ ಡೇಟಾ ಆ ಡಿವೈಸ್ಗೆ ರವಾನೆಯಾಗಲಿದೆ. ಆ ಮೂಲಕ ಕ್ರಿಮಿನಲ್ಗಳು ಆ ಡೇಟಾ ಪಡೆದು ಬೇರೊಂದು ಎಟಿಎಂನಲ್ಲಿ ನಿಮ್ಮ ಹಣ ಎಗರಿಸುವ ಸಂಭವ ಹೆಚ್ಚಿದೆ. ಹೀಗಾಗಿ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವ ಮುನ್ನ ಎಚ್ಚರ ವಹಿಸಿ.

ನೀವು ಎಟಿಎಂಗೆ ಹೋದ ಸಂದರ್ಭದಲ್ಲಿ , ಯಾರಾದರೂ ನಿಮ್ಮ ಬಳಿಗೆ ಬಂದು ಹಣ ನೀಡಿ ಆನ್ ಲೈನ್ ನಲ್ಲಿ ಹಣವನ್ನು ಕಳುಹಿಸುವಂತೆ ಮನವಿ ಮಾಡಿದರೆ ನಂಬಬೇಡಿ. ಆ ನೋಟುಗಳು ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ನೀವು ಎಟಿಎಂಗೆ ಹೋಗಿದ್ದರೆ, ಅಲ್ಲಿಂದ ನೇರವಾಗಿ ಹಣ ಪಡೆಯಿರಿ.

ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾದ ಮಿತಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅವಲಂಬಿಸಿರುತ್ತದೆ. ಅಂದರೆ ಕ್ರೆಡಿಟ್ ಕಾರ್ಡ್ ಮಿತಿಯ ಶೇ.20-ಶೇ.80ರ ನಡುವೆ ನಗದು ವಿತ್ ಡ್ರಾ ಮಿತಿಯಿರುತ್ತದೆ. ನಗದು ವಿತ್ ಡ್ರಾ ಮಿತಿ ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ಮೂಲಕ ನಗದು ವಿತ್ ಡ್ರಾ ಮಾಡಿದರೆ ಆ ಮೊತ್ತದ ಮೇಲೆ ಶುಲ್ಕವನ್ನು ಬ್ಯಾಂಕ್ ವಿಧಿಸುತ್ತದೆ.

ಕ್ರೆಡಿಟ್ ಕಾರ್ಡ್ ಬಳಸಿ ಸ್ಥಳೀಯವಾಗಿ ವಿತ್ ಡ್ರಾ ಮಾಡಿದಾಗ ಶೇ.2.5 ಇಲ್ಲವೇ 500ರೂ.ಇವೆರಡರಲ್ಲಿ ದೊಡ್ಡ ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ. ಇದೇ ರೀತಿ, ಅಂತಾರಾಷ್ಟ್ರೀಯ ವಹಿವಾಟಿಗೂ ಕೂಡ ಶುಲ್ಕ ವಿಧಿಸಲಾಗುತ್ತದೆ. ವಿಧಿಸಲಾಗುತ್ತದೆ. ಈ ವಿತ್ ಡ್ರಾಗಳ ಮೇಲೆ ಮಾಸಿಕ ಶೇ.3.5 ಹಾಗೂ ವಾರ್ಷಿಕ ಶೇ.42ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತದೆ.

ನೀವು ಕಾರ್ಡ್ ಬಳಸುವ ಎಟಿಎಂ ಯಂತ್ರದಲ್ಲಿ, ಕ್ಲೋನಿಂಗ್ ಸಾಧನವಿದೆ ಎಂಬ ಸಂದೇಹ ವ್ಯಕ್ತವಾದರೆ ಹಣವನ್ನು ಹಿಂಪಡೆಯಲು ಮುಂದಾಗಬಾರದು. ಎಟಿಎಂ ಕಾರ್ಡ್ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಇಲ್ಲವೇ ಯಾವುದೇ ಅನುಮಾನಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಬ್ಯಾಂಕ್ ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು.

ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೋದಾಗ ಇಲ್ಲವೇ ನಿಮ್ಮ ಎಟಿಎಂ ಪಿನ್ ಅನ್ನು ನಮೂದಿಸುವ ಸಂದರ್ಭ ಕೀಪ್ಯಾಡ್ ಅನ್ನು ಇನ್ನೊಂದು ಕೈ ಮುಖಾಂತರ ಮುಚ್ಚಿ. ಇದರಿಂದ ಯಾವುದೆ ಅಪರಿಚಿತ ವ್ಯಕ್ತಿಗೆ ನಿಮ್ಮ ಎಟಿಎಂ ಪಿನ್ ಅನ್ನು ತಿಳಿಯುವುದಿಲ್ಲ.

ನೀವು ಹಣವನ್ನು ಹಿಂಪಡೆಯುವಾಗ ಒಳಗೆ ಅಪರಿಚಿತರು ಯಾರೂ ಇಲ್ಲ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ. ಯಾರಾದರೂ ಬಲವಂತವಾಗಿ ಒಳಗೆ ಬಂದರೆ ಅಥವಾ ನಿಮ್ಮ ವ್ಯವಹಾರವನ್ನು ನೋಡಲು ಮುಂದಾದರೆ, ಅಲ್ಲಿನ ಕಾವಲುಗಾರರಿಗೆ, ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಿ. ಮೇಲೆ ಹೇಳಿದ ಸರಳ ವಿಧಾನ ಅನುಸರಿಸಿ ನಿಮ್ಮ ಹಣವನ್ನ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ.

Leave A Reply

Your email address will not be published.