Intresting news: IAS ಆಫೀಸರ್ ಗಳಿಗೆ ಎಷ್ಟು ಲಕ್ಷ ಸಂಬಳ ಬರುತ್ತೆ ಗೊತ್ತೇ ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ !

Latest news How much lakhs salary do IAS officers get

ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನ ನಾಗರಿಕ ಸೇವೆಗಳ ಪರೀಕ್ಷೆ ಕೂಡ ಒಂದಾಗಿದ್ದು, ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಲ್ಲ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತದೆ.

ಐಎಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ ಎಂದಾಗ ಸಾಮಾನ್ಯವಾಗಿ ಕಣ್ಣರಳಿಸಿ ನೋಡುವುದು ಸಹಜ. ಅಷ್ಟೆ ಏಕೆ ವಿಶೇಷ ಗೌರವ ಕೂಡ ನೀಡಲಾಗುತ್ತೆ. ಉನ್ನತ ಹುದ್ದೆಯಲ್ಲಿರುವ IAS ಹುದ್ದೆಯ ಜವಾಬ್ದಾರಿ ಕೂಡ ಇನ್ನಿತರ ಹುದ್ದೆಗಳಿಗಿಂತ ಡಬಲ್ ಆಗಿರುತ್ತೆ. ಐಎಎಸ್‌ (IAS)ಮತ್ತು ಐಪಿಎಸ್‌ಗಳಿಗೆ (IPS )ಬೇರೆ ಬೇರೆ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಅವರು ತಮ್ಮ ಜವಾಬ್ದಾರಿಗಳಿಗೆ ತಕ್ಕಂತೆ ವಿವಿಧ ಸೌಲಭ್ಯಗಳು ಮತ್ತು ವೇತನವನ್ನು ಸಹ ಪಡೆಯುತ್ತಾರೆ. ಐಎಎಸ್ ಅಧಿಕಾರಿಗಳ ವೇತನ ಎಷ್ಟು ಇರಬಹುದು ಎನ್ನುವ ಎಂದು ತಿಳಿದುಕೊಳ್ಳುವ ಕುತೂಹಲ ಇದೆ ಅಂದುಕೊಳ್ಳುತ್ತೇವೆ. ಅದಕ್ಕಾಗಿ ಈ ಲೇಖನ.

ಐಎಎಸ್ ಅಧಿಕಾರಿಗಳಿಗೆ ವಿಭಿನ್ನ ರೀತಿಯ ಕೆಲಸಗಳನ್ನು ನೀಡಲಾಗುತ್ತದೆ.IAS ಅಧಿಕಾರಿ ಹುದ್ದೆಯ ವಿವರವು ನಿಯೋಜನೆಗಳ ಸ್ವರೂಪವನ್ನು ಅವಲಂಬಿಸಿ ಅಧಿಕಾರಿಯಿಂದ ಅಧಿಕಾರಿಗೆ ಬದಲಾಗುತ್ತದೆ. ಅವರಿಗೆ ಫೀಲ್ಡ್ ಕೆಲಸ, ರಾಜ್ಯ ಸಚಿವಾಲಯದಲ್ಲಿ ಕೆಲಸ, ಸಾರ್ವಜನಿಕ ವಲಯದ ಉದ್ಯಮ ಅಥವಾ ಕೇಂದ್ರ ಸಚಿವಾಲಯದಲ್ಲಿ ಉದ್ಯೋಗವನ್ನು ನಿಯೋಜಿಸಬಹುದು. ಇಂತಹ ಮಹತ್ವದ ಕೆಲಸಗಳನ್ನು ನೀಡುವ ಅಧಿಕಾರಿಗಳಿಗೆ ಅತ್ಯುತ್ತಮ ಎನಿಸುವ ಸಂಬಳ ಮತ್ತು ಇತರ ಭತ್ಯೆಗಳನ್ನು ಕೊಡಲಾಗುತ್ತದೆ.

ಕೇಂದ್ರ ಲೋಕಸೇವಾ ಆಯೋಗವು 7ನೇ ವೇತನ ಆಯೋಗದ ಪ್ರಕಾರ IAS ವೇತನ ಮತ್ತು ಇತರ ಗ್ರೇಡ್ A ಅಧಿಕಾರಿಗಳನ್ನು ತೀರ್ಮಾನಿಸುತ್ತದೆ. IAS ವೇತನವು ವೇತನ ಶ್ರೇಣಿ ಮತ್ತು ಹುದ್ದೆಗಳ ಮಟ್ಟಕ್ಕೆ ಅನುಗುಣವಾಗಿ ಬದಲಾವಣೆ ಆಗುತ್ತದೆ. ಆದಾಗ್ಯೂ, ಆರಂಭಿಕ IAS ಅಧಿಕಾರಿಯ ವೇತನವು ತಿಂಗಳಿಗೆ 56,100 ರೂ.ಗಳು ಆಗಿರುತ್ತದೆ. ಇದು ಬೇಸಿಕ್ ಸಂಬಳ. ಇದಕ್ಕಿಂತ ಜಾಸ್ತಿ ಇತರ ಹಲವು ಭತ್ಯೆಗಳನ್ನು ನೀಡಲಾಗುತ್ತದೆ.

ಬಲ್ಲ ಮೂಲಗಳ ಪ್ರಕಾರ, 7ನೇ ವೇತನ ಆಯೋಗದ ಪ್ರಕಾರ, ಐಪಿಎಸ್‌ ಅಧಿಕಾರಿ 56,100 ರೂಪಾಯಿ ಮೂಲ ವೇತನವನ್ನು ಪಡೆಯುತ್ತಾರೆ. ಅದರ ಹೊರತಾಗಿ ತುಟ್ಟಿಭತ್ಯೆ ಮತ್ತು ಇತರ ಅನೇಕ ಭತ್ಯೆಗಳನ್ನು ಸಹ ಅವರು ಪಡೆಯುತ್ತಾರೆ. ಐಪಿಎಸ್‌ ಅಧಿಕಾರಿಯು ಬಡ್ತಿಯ ನಂತರ ಡಿಜಿಪಿ ಹುದ್ದೆಗೆ ಏರಲು ಅವಕಾಶವಿದೆ. ಡಿಜಿಪಿ ಹುದ್ದೆಗೆ ನಿಯೋಜನೆಗೊಂಡ ಐಪಿಎಸ್ ಅಧಿಕಾರಿಯೊಬ್ಬರು ತಿಂಗಳಿಗೆ ಸುಮಾರು 2.25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ.IAS ಅಧಿಕಾರಿಯ ಅತ್ಯಧಿಕ ವೇತನವು 18 ನೇ ಹಂತದ ಕ್ಯಾಬಿನೆಟ್ ಕಾರ್ಯದರ್ಶಿಗೆ 2,50,000 ರೂಪಾಯಿ ಆಗಿರುತ್ತದೆ.

ವೇತನ ಶ್ರೇಣಿಯ ಹೊರತಾಗಿ, ಪ್ರತಿ ಹುದ್ದೆಗೆ ಗ್ರೇಡ್ ಪೇ ಕೂಡ ವಿಭಿನ್ನವಾಗಿರುತ್ತದೆ. 7ನೇ ವೇತನ ಆಯೋಗದ ನಂತರದ IAS ವೇತನದ ಅನುಸಾರ, ಗ್ರೇಡ್ ಪೇ 5400 ರಿಂದ 10,000 ರೂ. ಐಎಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ ಮತ್ತು ಇತರ ಗ್ರೇಡ್ ಎ ಅಧಿಕಾರಿಗಳ ಆಕರ್ಷಕ ಸಂಬಳದ ಜೊತೆಗೆ, ಆಯ್ಕೆಯಾದ ಅಭ್ಯರ್ಥಿಗಳು ವಿವಿಧ ಸವಲತ್ತುಗಳು, ಭತ್ಯೆಗಳು ದೊರೆಯುತ್ತವೆ. ಸಾಮಾನ್ಯವಾಗಿ ಎಲ್ಲಾ ಭತ್ಯೆಗಳನ್ನು ಸೇರಿಸಿದರೆ ಓರ್ವ ಐಎಎಸ್ ಅಧಿಕಾರಿ ತಿಂಗಳಿಗೆ ಸುಮಾರು ಒಂದುವರೆ ಲಕ್ಷ ಸಂಬಳ ಪಡೆಯುತ್ತಾರೆ.

ಈ ಪರೀಕ್ಷೆ ಮೂಲಕವೇ ವಿವಿಧ ಹುದ್ದೆಗಳಿಗೆ ಆಯ್ಕೆ ನಡೆಯುತ್ತದೆ. ಐಪಿಎಸ್ ಅಧಿಕಾರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (BSF, SSB, CRPF, CISF, ಮತ್ತು ITBP), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಗುಪ್ತಚರ ಬ್ಯೂರೋ (IB), ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (R&AW), ವಿಶೇಷ ರಕ್ಷಣಾ ಗುಂಪು (SPG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI) ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಈ ಹಿಂದೆ, ನಾಗರಿಕ ಸೇವೆಗಳ ವೇತನ ಶ್ರೇಣಿಯು ಐಎಎಸ್ ವೇತನವನ್ನು ನಿರ್ಧರಿಸುವ ಹೊಣೆಯನ್ನು ಇತ್ತೀಚಿನ ತಿದ್ದುಪಡಿಗಳ ಅನುಸಾರ, ಐಎಎಸ್ ಅಧಿಕಾರಿ ವೇತನವನ್ನು 7 ನೇ ಸಿಪಿಸಿ (ಕೇಂದ್ರ ವೇತನ ಆಯೋಗ) ಪ್ರಕಾರ ನಿರ್ಧರಿಸುತ್ತಿದೆ. ಆದರೆ ಈಗ, IAS ವೇತನ ರಚನೆಯು ಮೂಲ ವೇತನ ಮತ್ತು ಸವಲತ್ತುಗಳು ಮತ್ತು ಭತ್ಯೆಗಳನ್ನು (DA, HRA, ಮತ್ತು TA) ಒಳಗೊಂಡಿರುತ್ತದೆ. ಇದು ಐಎಎಸ್ ಅಧಿಕಾರಿಯನ್ನು ಲಾಭದಾಯಕ ಮತ್ತು ಹೆಚ್ಚು ಬೇಡಿಕೆಯಿರುವ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯಲು ಪ್ರೋತ್ಸಾಹಿಸುತ್ತದೆ

Leave A Reply

Your email address will not be published.