Crime News: ಅಂಗಡಿಗೆ ಹೋದ ಅಪ್ರಾಪ್ತೆ ನಾಪತ್ತೆ: ನಿಗಿನಿಗಿ ಕಲ್ಲಿದ್ದಲ ಕುಂಡದಲ್ಲಿ ಇದ್ದಿಲು ಆಗಿದ್ದಳಾ ನತದೃಷ್ಟೆ !!

Rajasthan Minor girl rape and murder Case

Crime news: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಅದರಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೆ ನಡೆಯುತ್ತಿದೆ. ರಾಜಸ್ಥಾನದ(Rajasthan )ಗ್ರಾಮವೊಂದರಲ್ಲಿ ಕಾಮುಕರು ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯವೆಸಗಿದ್ದು (Rape and Murder)ಅಲ್ಲದೆ ಆಕೆಯನ್ನು ಹೊತ್ತಿ ಉರಿಯುತ್ತಿದ್ದ ಕಲ್ಲಿದಲ್ಲು ಕುಂಡಕ್ಕೆ ಎಸೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.

ರಾಜಸ್ಥಾನದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ(Minor)ಮನೆಯಿಂದ ಕೆಲ ದೂರದಲ್ಲಿದ್ದ ಅಂಗಡಿಗೆ(Shop)ಹೋಗಿದ್ದಾಳೆ. ಹೊಲ ಮತ್ತು ನಿರ್ಜನ ಪ್ರದೇಶದ ಮೂಲಕ ಹಾದು ಹೋಗುವ ಕಾಲು ದಾರಿಯಲ್ಲಿ ಅಂಗಡಿಗೆ ಹೋದ ಮಗಳು ಎಷ್ಟು ಹೊತ್ತಾದರೂ ಮನೆಗೆ ಹಿಂದಿರುಗದ ಹಿನ್ನೆಲೆ ಆತಂಕಗೊಂಡ ಪೋಷಕರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಚಾರ ಮನೆಯ ಅಕ್ಕಪಕ್ಕದವರಿಗೆ ಸ್ಥಳೀಯರಿಗೆ ಕೂಡ ತಿಳಿದು ಇಡೀ ಗ್ರಾಮದಲ್ಲೆಲ್ಲ ಹುಡುಕಾಡಿದರೂ ಕೂಡ ಬಾಲಕಿ ಯಾರಿಗೂ ಸಿಕ್ಕಿಲ್ಲ. ಹೀಗಾಗಿ, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೋಲೀಸರಿಗೆ(Police)ದೂರು ಕೊಟ್ಟರು ಕೂಡ ಕುಟುಂಬಸ್ಥರು ಬಾಲಕಿಗಾಗಿ ನಿರಂತರವಾಗಿ ಹುಡುಕಾಟ ನಡೆಸಿದ್ದು, ನೀರಿನ ಟ್ಯಾಂಕ್ ಸೇರಿದಂತೆ ಹಲೆವೆಡೆ ಶೋಧ ಕಾರ್ಯ ನಡೆಸಿದ್ದಾರೆ. ಆ ಬಳಿಕ ನಿರ್ಜನ ಪ್ರದೇಶದಲ್ಲಿರುವ ಕಲ್ಲಿದಲ್ಲು ಉರಿಸುವ ಕುಂಡದ ಬಳಿ ತೆರಳಿ ಹುಡುಕಾಡುವ ವೇಳೆ ಈ ಕುಂಡದಲ್ಲಿ ಬಾಲಕಿಯ ಕಳೇಬರ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹದ ಅವಶೇಷಗಳನ್ನು ಹೊರ ತೆಗೆದಿದ್ದಾರೆ. ಅಪ್ತಾಪ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ(Gang Rape) ಆಬಳಿಕ ಉರಿಯುತ್ತಿದ್ದ ಅಗ್ನಿಕುಂಡಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ

Leave A Reply

Your email address will not be published.