Barrier Less Tolling: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- ಟೋಲ್ ಬೂತ್ ಗಳಲ್ಲಿ ಇನ್ಮುಂದೆ ವಾಹನ ನಿಲ್ಸೋ ಅಗತ್ಯ ಇಲ್ಲ !! ಕೇಂದ್ರದಿಂದ ಮಹತ್ವದ ನಿರ್ಧಾರ !

Union government is planning to roll out a barrier-less tolling system soon

Barrier Less Tolling: ವಾಹನ ಸವಾರರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಇನ್ಮುಂದೆ ರಸ್ತೆಯಲ್ಲಿ ಗಂಟೆಗಟ್ಟಲೇ ಕಾಯುವುದನ್ನ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು!! ಹೀಗಾಗಿ ಟೋಲ್ ಪ್ಲಾಜಾಗಳನ್ನು (Toll Plaza)ವಾಹನಗಳು ಕಾಯದೆ, ಅಡೆತಡೆ ಇಲ್ಲದೆ ಸಾಗಲು ಅನುವು ಮಾಡಿಕೊಡಲು ಹೊಸ ಟೋಲ್ ವ್ಯವಸ್ಥೆಯನ್ನು(Barrier Less Tolling) ಜಾರಿಗೆ ತರಲಾಗುತ್ತದೆ.

ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ವಾಹನ (Vechicle)ಸವಾರರು ಅರೆ ಘಳಿಗೆಯೂ ನಿಲ್ಲದೆ ವಾಹನಗಳು ಮುಂದೆ ಸಾಗುವ ಹಾಗೆ ತಡೆರಹಿತ ಟೋಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಶೀಘ್ರದಲ್ಲೇ ಹೊಸ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.ಫಾಸ್ಟ್ಯಾಗ್‌ಗಳ ಬಳಕೆಯು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು 47 ಸೆಕೆಂಡ್‌ಗಳಿಗೆ ಕಡಿಮೆ ಮಾಡಿದ್ದು, ಆದರೆ ಸರ್ಕಾರವು ಅದನ್ನು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಗೆ ಇಳಿಸುವ ಗುರಿಯನ್ನು ಹೊಂದಿದೆ.

ಸದ್ಯ, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಅಡೆತಡೆಯಿಲ್ಲದ ಟೋಲ್ ವ್ಯವಸ್ಥೆ ಅಥವಾ ತೆರೆದ ಟೋಲ್ ವ್ಯವಸ್ಥೆಯ ಜೊತೆಗೆ ತಡೆರಹಿತ ಟೋಲಿಂಗ್ ವ್ಯವಸ್ಥೆಗಾಗಿ ಪ್ರಯೋಗಗಳು ನಡೆಯುತ್ತಿದ್ದು, ಈ ಪ್ರಯೋಗಗಳು ಯಶಸ್ವಿಯಾದ ಕೂಡಲೇ ಸುಧಾರಿತ ತಂತ್ರಜ್ಞಾನದೊಂದಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಪ್ರಯಾಣಿಕರು ಇನ್ನು ಮುಂದೆ ಅರ್ಧ ನಿಮಿಷವೂ ಟೋಲ್ ಪ್ಲಾಜಾಗಳಲ್ಲಿ ಕಾಯದ ರೀತಿಯಲ್ಲಿ ಹೊಸ ಕ್ರಮಗಳನ್ನು ಜಾರಿಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಹೊಸ ಟೋಲಿಂಗ್ ವ್ಯವಸ್ಥೆಯ aಮೂಲಕ ಪ್ರಯಾಣದ ಸಮಯಾವಧಿ ಕಡಿಮೆ ಆಗುವ ಜೊತೆಗೆ ದಕ್ಷತೆ ಕೂಡ ಹೆಚ್ಚಾಗುತ್ತದೆ. ಇದರ ಜೊತೆಗೆ ದೇಶದಲ್ಲಿ ಇನ್ನು ಮುಂದೆ ಕಿಲೋಮೀಟರ್ ಪ್ರಯಾಣದ ಆಧಾರದ ಮೇಲೆ ಟೋಲ್ ಪಾವತಿಸುವ ವ್ಯವಸ್ಥೆ ಬರಲಿರುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಈಗಾಗಲೇ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಈ ಯೋಜನೆಯ ಪ್ರಯೋಗಗಳು ನಡೆಯುತ್ತಿದ್ದು, ಅಲ್ಲಿ ಉಪಗ್ರಹ ಆಧಾರಿತ ಮತ್ತು ಕ್ಯಾಮೆರಾ ಆಧಾರಿತ ಕೆಲ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ. ನೀವು ಹೆದ್ದಾರಿಗೆ ಪ್ರವೇಶಿಸಿದ ಬಳಿಕ ನಿಮ್ಮ ವಾಹನದ ನೋಂದಣಿ(Vechicle Registration)ಫಲಕವನ್ನು ಕ್ಯಾಮೆರಾದಿಂದ ಸ್ಕ್ಯಾನ್ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಡೇಟಾವನ್ನು ಒಟ್ಟುಗೂಡಿಸಿ ನೀವು ಪ್ರಯಾಣಿಸಿದ ಕಿಲೋಮೀಟರ್‌ಗಳಿಗೆ ಮಾತ್ರ ನಿಮಗೆ ಶುಲ್ಕ ವಿಧಿಸಲಾಗುತ್ತದೆ ಈ ಕುರಿತು ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.

Leave A Reply

Your email address will not be published.