Murder Case: ಮಗ ಹುಟ್ಟಿದರೂ ಎಣ್ಣೆ ಪಾರ್ಟಿ ಕೊಟ್ಟಿಲ್ಲ ಎಂಬ ಕೋಪ: ದಲಿತನ ಬಡಿದು ಕೊಂದರು !

Uttar Pradesh four people tied dalith man to tree and beaten

Murder Case: ಎಲ್ಲರೂ ಸಮಾನರು ಎಂದು ಎಷ್ಟೇ ಬಡಾಯಿ ಕೊಚ್ಚಿಕೊಂಡರು ಕೂಡ ಉನ್ನತ ವರ್ಗದವರು ದಲಿತರ ಮೇಲೆ ನಡೆಸುವ ಹಲ್ಲೆಗಳು ಕಡಿಮೆಯಾಗಿಲ್ಲ. ದಲಿತರ ಮೇಲೆ ದಬ್ಬಾಳಿಕೆ ನಡೆಸುವ ಪ್ರವೃತ್ತಿ ಇಂದಿಗೂ ಮುಂದುವರಿಯುತ್ತಿದೆ ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ.

ಉತ್ತರ ಪ್ರದೇಶದ (Uttar Pradesh)ಬರೇಲಿಯಲ್ಲಿ 25ರ ಹರೆಯದ ದಲಿತ ಸಚಿನ್ ಕುಮಾರ್ ಸಣ್ಣ ರೈತನಾಗಿ ವ್ಯವಸಾಯದಲ್ಲಿ(Agriculture )ತೊಡಗಿಸಿಕೊಂಡಿದ್ದ. ಈತನ ಪತ್ನಿ ಶಿವಾನಿ ಗಂಡು ಮಗುವಿಗೆ ಜನ್ಮನೀಡಿದ್ದು, ಹೀಗಾಗಿ, ಮನೆಯಲ್ಲಿ ಸಂಭ್ರಮ (Happy)ದುಪ್ಪಟ್ಟಾಗಿದೆ. ಗಂಡು ಮಗು(Boy Baby)ಹುಟ್ಟಿದ ಖುಷಿಗೆ ಸಚಿನ್ ಊರಿನವರಿಗೆ ಸಿಹಿ ಹಂಚಿದ್ದಾನೆ. ಆದರೆ, ಈ ಸಣ್ಣ ವಿಚಾರ ದೊಡ್ಡ ಮಾರಾಮಾರಿ ನಡೆಯಲು ವೇದಿಕೆ ಆಗಿ ಬಿಟ್ಟಿದೆ.

ಸಚಿನ್ ಕುಮಾರ್ ಊರಿಗೆ ಸಿಹಿ ಹಂಚಿದ್ದಾನೆ ಎಂಬ ವಿಚಾರ ಊರಿನ ಮುಖಂಡನ ನಾಲ್ವರು ಮಕ್ಕಳಿಗೆ ತಿಳಿದು ಕೆಂಡಾಮಂಡಲರಾಗಿದ್ದಾರೆ.ಈ ನಾಲ್ವರು ಮಂದಿ ಸಚಿನ್ ಕುಮಾರ್ ಮನೆಗೆ ಏಕಾಏಕಿ ನುಗ್ಗಿ ಸ್ವೀಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಶಿವಾನಿ ಸಮ್ಮತಿ ಸೂಚಿಸಿದ್ದು, ಇಷ್ಟಕ್ಕೆ ಸುಮ್ಮನಾಗದ ನಾಲ್ವರು ಎಣ್ಣೆ ಪಾರ್ಟಿ(Drinks Party)ಮಾಡಲು ಹಣ ನೀಡಲು ದುಂಬಾಲು ಬಿದ್ದಿದ್ದಾರೆ.ಇದಕ್ಕೆ ಶಿವಾನಿ ಒಪ್ಪದೇ ಇದ್ದಾಗ ಆಕೆಗೆ ಕಿರುಕುಳ ನೀಡಲು ಮುಂದಾಗಿದ್ದಾರೆ.

ಈ ನಾಲ್ವರು ಕೂಡ 20 ವರ್ಷದ ಆಸುಪಾಸಿನವರಾಗಿದ್ದು, ಮನೆಯಲ್ಲಿದ್ದ ಶಿವನಿಗೆ ಕಿರುಕುಳ ನೀಡುತ್ತಿದ್ದ ವಿಚಾರ ತಿಳಿದು ಸಚಿನ್ ಕುಮಾರ್ ಹಾಗೂ ಆತನ ತಾಯಿ ಹೊಲದಿಂದ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಹೊಲದಲ್ಲಿ ದುಡಿದು ಜೀವನ ಸಾಗಿಸುತ್ತಿದ್ದು, ಎಣ್ಣೆ ಪಾರ್ಟಿ ಕೊಡುವಷ್ಟು ಹಣವಿಲ್ಲವೆಂದು(Money )ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ, ಈ ಮಾತನ್ನು ಕಿವಿಗೆ ಹಾಕಿಕೊಳ್ಳದ ಹಾಗೆ ನಾಲ್ವರು, ಸಚಿನ್ ಕುಮಾರ್‌ನನ್ನು ದರದರನೆ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿ ಪಾರ್ಟಿಗೆ ಹಣ ನೀಡುವಂತೆ ಕಾಟ ನೀಡಿದ್ದಾರೆ. ಆಬಳಿಕ ಬಡಿಗೆಯಿಂದ ಹೊಡೆದಿದ್ದು, ನಾಲ್ವರು ಏಕಾಏಕಿ ದಾಳಿ ಮಾಡಿದ್ದು, ಮುಖಂಡರ ಪುತ್ರರಾಗಿರುವ ಹಿನ್ನೆಲೆ ಊರಿನವರು ಈ ವೇಳೆ ಏನೊಂದು ಮಾತಾಡದೆ ಮೂಕ ಪ್ರೇಕ್ಷಕರಾಗಿ ನಡೆಯುವುದನ್ನ ನೋಡಿಕೊಂಡು ಇರುವುದ ಬಿಟ್ಟು ಬೇರೆ ವಿಧಿಯಿರಲಿಲ್ಲ.

ಈ ನಡುವೆ ಸಚಿನ್ ಗೆ ತೀವ್ರ ರಕ್ತ ಸ್ರಾವವಾಗಿದ್ದು, ಕುಟುಂಬಸ್ಥರು ಹೇಗೋ ಕಷ್ಟಪಟ್ಟು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆದರೆ, ತೀವ್ರಗಾಯವಾದ ಹಿನ್ನಲೆ ಸಚಿನ್ ಕುಮಾರ್ ಅಸುನೀಗಿದ್ದು, ಪೋಲಿಸ್ ಠಾಣೆಯಲ್ಲಿ(Police Station)ಪ್ರಕರಣ ದಾಖಲಾಗಿದೆ. ಪೋಲಿಸರು ತನಿಖೆ ನಡೆಸಿ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ಮತ್ತೊಬ್ಬನ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply

Your email address will not be published.