Education: 78 ವಯಸ್ಸಲ್ಲೂ ಬತ್ತದ ಉತ್ಸಾಹ : ಸಮವಸ್ತ್ರ ಧರಿಸಿ ಸ್ಕೂಲ್ ಗೆ ಹೋಗೋ ಅಜ್ಜ: ಅರೇ, ಈ ತಾತ ಸ್ಕೂಲ್ ಹೋಗೋದು ಇದಕ್ಕಂತೆ !

78-year-old man from Mizoram proved that age is no barrier to continuing studies

Education: ಓದುವ ಮನಸ್ಸಿದ್ದರೆ ಕಲಿಕೆಗೆ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದನ್ನು ತೋರಿಸಿಕೊಟ್ಟ ಅನೇಕ ದೃಷ್ಟಾಂತಗಳು ನಮಗೆ ಸಿಗುತ್ತವೆ. ಓದುವ ಮನ, ಸಾಧಿಸುವ ಛಲವಿದ್ದರೆ ಅದೆಷ್ಟೇ ಅಡೆ ತಡೆ ಎದುರಾದರೂ ಮುಳ್ಳಿನ ಹಾದಿಯನ್ನು ಸುಗಮ ದಾರಿಯಾಗಿ ಮಾಡಿಕೊಂಡರೆ ಅಸಾಧ್ಯ ಕೂಡ ಸಾಧ್ಯವಾಗುತ್ತದೆ.ಆದರೆ, ಇಲ್ಲೊಬ್ಬ ವ್ಯಕ್ತಿಯ ಓದಿನ ಬಗೆಗಿನ ಉತ್ಸಾಹ, ಕಲಿಕೆಯ(Learning )ಮೇಲಿನ ಆಸಕ್ತಿ ಉಳಿದವರಿಗೆ ಮಾದರಿಯಾಗಿದೆ.

ವಯಸ್ಸು 50 ದಾಟುತ್ತಿದ್ದಂತೆ ಆರೋಗ್ಯ ಸಮಸ್ಯೆಯಿಂದಲೋ ಇಲ್ಲವೇ ಉತ್ಸಾಹ ಕಮ್ಮಿಯಾಗಿ ಮೂಲೆ ಗುಂಪು ಆಗುವವರೆ ಹೆಚ್ಚು. ಇಲ್ಲಿ 78ರ ಹರೆಯದಲ್ಲೂ ಕೂಡ ಅಜ್ಜರೊಬ್ಬರ ಬತ್ತದ ಕಲಿಕೆಯ ಆಸಕ್ತಿ!!! ಸಮವಸ್ತ್ರ ಧರಿಸಿ ಸಂತೋಷದಿಂದ ಸ್ಕೂಲಿನತ್ತ ಲಗ್ಗೆ ಇಡುವ ತಾತ!!! ಅರೇ, ಈ ತಾತ ಅಷ್ಟಕ್ಕೂ ತನ್ನ ಇಳಿ ವಯಸ್ಸಿನಲ್ಲಿಯೂ ಸ್ಕೂಲ್ ಕಡೆಗೆ ಮುಖ ಮಾಡಿರುವುದು ಯಾಕೆ ಅಂತೀರಾ?

ಓದಿಗೆ (Study)ವಯಸ್ಸು ಮುಖ್ಯವಲ್ಲ ಎಂಬುದಕ್ಕೆ 9 ನೆಯ ತರಗತಿಯಲ್ಲಿ ಕಲಿಯುತ್ತಿರುವ 78 ವರ್ಷದ ಅಜ್ಜ ಜೀವಂತ ನಿದರ್ಶನ. ಸಮವಸ್ತ್ರ(Uniform )ಧರಿಸಿಕೊಂಡು ಬರೋಬ್ಬರಿ ಮೂರು ಕಿಲೋಮೀಟರ್ ದೂರ ನಡೆದುಕೊಂಡೇ ಶಾಲೆಗೆ ಬಂದು ಮಕ್ಕಳೊಂದಿಗೆ ಪಾಠ ಕೇಳಿ ಸಂಜೆ ಮನೆಯತ್ತ ಮುಖ ಮಾಡುವ ಅಜ್ಜನ ಉತ್ಸಾಹ ಎಂದಿಗೂ ಕಮ್ಮಿಯಾಗುವಂತಹದಲ್ಲ!!!!

78ರ ಹರೆಯದ ತಾತ ಸದಾ ಉತ್ಸಾಹದ ಚಿಲುಮೆ ಎಂದರೆ ತಪ್ಪಾಗದು. ತನ್ನ ಬಾಲ್ಯದಲ್ಲೇ (Childhood)ಓದುವ ಕಿಚ್ಚನ್ನು ಹೊಂದಿದ್ದ ಮಿಜೋರಾಂನ ಚಂಫೈ ಜಿಲ್ಲೆಯ ಹೂಯಿಕಾನ್ ಗ್ರಾಮದ ಲಾಲಿಂಗ್ರಾ ಅವರ ಜೀವನಗಾಥೆ ಉಳಿದವರಿಗೆ ಮಾದರಿ. 1945 ರಲ್ಲಿ ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಖುವಾಂಗ್ಲೆಂಡ್ ಗ್ರಾಮದಲ್ಲಿ ಹುಟ್ಟಿದ ಲಾಲಿಂಗ್ರಾ ಅವರ ತಂದೆ ತೀರಿ (Death)ಹೋದ ಹಿನ್ನೆಲೆ 2 ನೇ ತರಗತಿಯ ಬಳಿಕ ಲಾಲಿಂಗ್ರಾ ಓದಿಗೆ ತಿಲಾಂಜಲಿ ಇಟ್ಟು, ಮನೆಯ ಜವಾಬ್ದಾರಿ( responsibility )ಹೊರಬೇಕಾಗುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಇದ್ದ ಹಿನ್ನೆಲೆ ಆ ಬಳಿಕ ವ್ಯಾಸಂಗ( Education)ಮಾಡಲು ಲಾಲಿಂಗ್ರಾ ಅವರಿಗೆ ಆಗಿಲ್ಲವಂತೆ.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆಹೋಗುತ್ತಿದ್ದ ಇವರ ಕುಟುಂಬ 1995 ರ ವೇಳೆಗೆ ನ್ಯೂ ಹೂಯಿಕಾನ್ ಗ್ರಾಮವೊಂದರಲ್ಲಿ ನೆಲೆ ನಿಂತರಂತೆ. ಈ ಸಂದರ್ಭ ಜೀವನ ನಡೆಸುವ ಸಲುವಾಗಿ ಅಲ್ಲಿಯೇ ಸಮೀಪದ ಚರ್ಚ್ ಒಂದರಲ್ಲಿ ಕಾವಲುಗಾರನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರಿಂದ ಬದುಕಿಗೆ ಒಂದು ಆಸರೆಯಾಯಿತಂತೆ.ಈ ನಡುವೆ ಇಂಗ್ಲೀಷ್ ಕಲಿಯಬೇಕು ಎಂಬ ಉತ್ಕಟ ಬಯಕೆಯಿಂದ , ಟಿವಿಗಳಲ್ಲಿ ಬರುವ ಇಂಗ್ಲೀಷ್ ಸುದ್ದಿ ಕೇಳುವ ಸಲುವಾಗಿ ಮತ್ತೆ ಓದುವ ಅಭಿಲಾಷೆ ಹೊತ್ತು 78ನೇ ವಯಸ್ಸಿನಲ್ಲಿ 9 ನೇ ತರಗತಿಗೆ ದಾಖಲಾತಿಯನ್ನು ಪಡೆದುಕೊಳ್ಳಲು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರಲ್ಲಿ ಮಾತುಕತೆ ನಡೆಸಿದರಂತೆ. ಟಿವಿ ಯಲ್ಲಿ ಬರುವ ಇಂಗ್ಲಿಷ್ ನ್ಯೂಸ್ ಅರ್ಥಮಾಡಿಕೊಳ್ಳುವ ಜೊತೆಗೆ ಕೆಲವು ಕಛೇರಿಗಳಲ್ಲಿ ಅರ್ಜಿ ತುಂಬಲು ಇಂಗ್ಲಿಷ್ ಅತಿ ಅವಶ್ಯಕವಾದ ಹಿನ್ನೆಲೆ ಅಜ್ಜ ಓದುವತ್ತ ಚಿತ್ತ ವಹಿಸಿದರಂತೆ.

ಲಾಲಿಂಗ್ರಾ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹುಯಿಕಾವ್ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್‌ಎಂಎಸ್‌ಎ) ಪ್ರೌಢಶಾಲೆಯಲ್ಲಿ 9 ನೇ ತರಗತಿಗೆ ದಾಖಲಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಶಾಲೆಯಿಂದ ಮನೆಗೆ ಸುಮಾರು ಮೂರು ಕಿಲೋಮೀಟರ್ ದೂರವಿದ್ದರು ಕೂಡ ಬೆಳಿಗ್ಗೆ ಸಮವಸ್ತ್ರ ಧರಿಸಿ, ಭಾರದ ಬ್ಯಾಗ್ ಬೆನ್ನಿಗೇರಿಸಿಕೊಂಡು ಶಾಲೆ ವರೆಗೂ ನಡೆದುಕೊಂಡೇ ಬಂದು ಮಕ್ಕಳೊಂದಿಗೆ ತರಗತಿಯಲ್ಲಿ ಕುಳಿತು ಪಾಠ ಕೇಳುವ ಅಜ್ಜನ ಓದುವ ಮೇಲಿನ ಆಸಕ್ತಿಗೆ ಮೆಚ್ಚುಗೆ ಸಲ್ಲಿಸಲೆಬೇಕು. ಮತ್ತೆ ಸಂಜೆ ಮನೆಗೆ ನಡೆದುಕೊಂಡು ಬಂದು ಬಳಿಕ ರಾತ್ರಿ ಪಾಳಿಯಲ್ಲಿ ಚರ್ಚ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಲಾಂಗ್ಧರಾ ಅವರ 78 ನೇ ಹರೆಯದಲ್ಲಿಯು ಬತ್ತದ ಕಲಿಕೆಯ ಹುಮ್ಮಸ್ಸಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮೆಚ್ಚುಗೆ ವ್ಯಕ್ತಪಡಿಸಿ ಉಳಿದ ಮಕ್ಕಳಿಗೂ ಅಜ್ಜ ಪ್ರೇರಣೆಯಾಗಿದ್ದಾರೆ ( Role Model)ಎಂದು ಹೇಳಿದ್ದಾರೆ. ಅದೇನೇ ಇರಲಿ ತಮ್ಮ ಇಳಿ ವಯಸ್ಸಿನಲ್ಲಿ ಕಲಿಕೆಯ ಮೇಲಿನ ಅಜ್ಜನ ಆಸಕ್ತಿಗೆ ಮೆಚ್ಚುಗೆ ಸಲ್ಲಿಸಲೇಬೇಕು

Leave A Reply

Your email address will not be published.