Bengaluru: ವೆಲ್ಕಂ ಡೇ ದಿನವೇ ಸೀನಿಯರ್ – ಜೂನಿಯರ್ ನಡುವೆ ಗಲಾಟೆ; ಡೇಟ್ ಆಫ್ ಬರ್ತ್ ಹೇಳಿಲ್ಲವೆಂದು ಕಾಲೇಜಿನಲ್ಲಿ ಹಲ್ಲೆ ಮಾಡಿಸಿದ ವಿದ್ಯಾರ್ಥಿನಿ!

Bengaluru presidency College Students clash news

Bengaluru: ಬೆಂಗಳೂರಿನ(Bengaluru )ಪ್ರೆಸಿಡೆನ್ಸಿ ಕಾಂಪೋಸೀಟ್ ಪಿಯು ಕಾಲೇಜಿನಲ್ಲಿ ಕಾಲೇಜ್ ವೆಲ್ ಕಮ್ ದಿನವೇ ಸೀನಿಯರ್ ಜೂನಿಯರ್ ಗಳ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ.

ಕಾಲೇಜ್ ವೆಲ್ ಕಮ್ ದಿನವೇ ಸೀನಿಯರ್ ಜೂನಿಯರ್ ಗಳ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಪ್ರೆಸಿಡೆನ್ಸಿ ಕಾಂಪೋಸೀಟ್ ಪಿಯು ಕಾಲೇಜು ಬಳಿ ನಡೆದಿದೆ. ಕ್ರಶ್ ತನ್ನ ಡೇಟ್ ಆಫ್ ಬರ್ತ್ ಹೇಳಿಲ್ಲವೆಂದು ಸೀನಿಯರ್ ನನ್ನೇ ಎಳೆದೊಯ್ದು ವಿದ್ಯಾರ್ಥಿನಿ ಹಲ್ಲೆ ಮಾಡಿಸಿದ ಘಟನೆ ನಡೆದಿದೆ.

ಬೆಂಗಳೂರು(Bengaluru)ನಗರದ ಜೆಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ತನ್ನ ಕ್ರಶ್ ಡೇಟ್ ಆಫ್ ಬರ್ತ್ (Date Of Birthday)ಹೇಳಿಲ್ಲವೆಂದು ಅಣ್ಣ ಮತ್ತು ಗೆಳೆಯರಿಂದ ಸೀನಿಯರ್ ಮೇಲೆ ಹಲ್ಲೆ ನಡೆಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಜೀಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನಂತೆ. ಮೊಹಮ್ಮದ್ ಅಜೀಮ್ ಎಂಬಾತನನ್ನ ಕರೆದೊಯ್ದು ಹಲ್ಲೆ ಮಾಡಲಾಗಿದೆ.

ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳಿಗೆ ವೆಲ್ ಕಮ್ ಡೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದೇ ಕಾಲೇಜಿಗೆ ಮೊಹಮ್ಮದ್ ಉಬೇದ್ ಉಲ್ಲಾ ಎಂಬ ಅಜೀಮ್ ಗೆಳೆಯ ಪ್ರಥಮ ಪಿಯುಸಿ ಸೇರಿದ್ದ. ವೆಲ್ ಕಮ್‌ಡೇ ಫಂಕ್ಷನ್ ನಲ್ಲಿ ಅಜೀಮ್ ಗೆಳೆಯ ಉಬೇದ್ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಪರಿಚಯವಾದ ಸಂದರ್ಭ ಅಜೀಮ್ ಬಳಿ ಉಬೇದ್ ಬರ್ತ್ ಡೇ ಡೇಟ್ ಕೇಳಿದ್ದಾಳೆ. ಆದರೆ ತನಗೆ ಉಬೇದ್ ಡೇಟ್ ಆಫ್ ಬರ್ತ್ ಗೊತ್ತಿಲ್ಲ ಎಂದು ಅಜೀಮ್ ಹೇಳಿದ್ದು, ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಗೆಳೆಯನ ಡೇಟ್ ಆಫ್ ಬರ್ತ್ ಗೊತ್ತಿಲ್ವಾ ಎಂದು ಹೇಳಿ ನಾನು ಯಾರು ಅಂತಾ ತೋರಿಸ್ತೀನಿ ಎಂದು ವಿದ್ಯಾರ್ಥಿನಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾಳೆ.

ಮರುದಿನ ತನ್ನ ಅಣ್ಣನ ಜೊತೆ ಸೇರಿ ಆರು ಜನರನ್ನ ಕಾಲೇಜಿಗೆ ಕರೆಸಿ ಅಜೀಮ್ ನನ್ನ ವಿದ್ಯಾರ್ಥಿನಿ ಎಳೆದೊಯ್ದಿದ್ದು, ವಿದ್ಯಾರ್ಥಿನಿಯ ಅಣ್ಣ ಮತ್ತು ಸ್ನೇಹಿತರು ಅಜೀಮ್ ಗೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಾಯಾಳು ಅಜೀಮ್ ಪಾಷಾ ಈ ಘಟನೆ ಬಗ್ಗೆ ಜೆಪಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.