Pune Collage: ಹಿಂದೂ ದೇವತೆಗಳ ಅವಹೇಳನ ಆರೋಪ:ಕಾಲೇಜು ಉಪನ್ಯಾಸಕನ ಬಂಧನ!

College teacher arrested in Pune for 'hurting religious sentiments'

Pune: ಪುಣೆಯಲ್ಲಿ (Pune)ಹಿಂದೂ ದೇವತೆಗಳ (Hindu Lord)ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಕಾಲೇಜು ಉಪನ್ಯಾಸಕರೊಬ್ಬರನ್ನು ಬಂಧಿಸಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಪುಣೆಯ ಸಿಂಬಯಾಸಿಸ್ ಕಾಲೇಜಿನಲ್ಲಿ ಉಪನ್ಯಾಸದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಶಿಕ್ಷಕನನ್ನು ಬಂಧಿಸಲಾಗಿದೆ. ಪುಣೆಯ ಸಿಂಬಯಾಸಿಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್ (SCAC )ಯ ಅಧ್ಯಾಪಕರಾದ ಅಶೋಕ್‌ ಧೋಲೆ ಉಪನ್ಯಾಸ ನೀಡುವ ವೇಳೆ ಅವಹೇಳನಕಾರಿ ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ನಡುವೆ ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡಿದ್ದ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP )ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದರು. ಈ ಕುರಿತಾಗಿ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಉಪನ್ಯಾಸಕನನ್ನು ಅಮಾನತು ಮಾಡುವುದಾಗಿ ಸೂಚಿಸಿತ್ತು.

ಕಾಲೇಜಿನ ವೀಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾಲೇಜಿಗೆ ಭೇಟಿ ನೀಡಿ ಉಪನ್ಯಾಸಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿತ್ತು. ಹೀಗಾಗಿ,.ಭಾರತೀಯ ದಂಡ ಸಂಹಿತೆ ಸೆಕ್ಷನ್‌ 295ರ ಅಡಿಯಲ್ಲಿ ಧೋಲೆಯನ್ನು ಬಂಧಿಸಲಾಗಿದೆ. ಪುಣೆಯ ಸಿಂಬಯಾಸಿಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್‌ನಲ್ಲಿ 18 ವರ್ಷಗಳ ಕಾಲ ಹಿಂದಿ ಕಲಿಸಿದ ಅಶೋಕ್ ಸೋಪಾನ್ ಧೋಲೆ ಅವರನ್ನು ಸಂಸ್ಥೆಯು ಅಮಾನತುಗೊಳಿಸಿದೆ. ಶುಕ್ರವಾರ (ಆಗಸ್ಟ್‌ 04) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವ ಕುರಿತು ಡೆಕ್ಕನ್‌ ಜಿಮ್‌ ಖಾನಾ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ ಪೆಕ್ಟರ್‌ ವಿ.ವಿ.ಹಸಬ್ನೀಸ್‌ ತಿಳಿಸಿದ್ದಾರೆ ಎಂದು ವರದಿಯಾಗಿದೆ

Leave A Reply

Your email address will not be published.